ಚಾರ್ಜ್‌ಬಲ್ ಬ್ಯಾಟರಿಯಿಂದ ಮಗನ ತಲೆಗೆ ಹೊಡೆದು ತಂದೆಯೇ ಕೊಲೆ ಮಾಡಿರುವ ಘಟನೆ

0

ಉಮೇಶ್ (35) ಕೊಲೆಯಾದ ವ್ಯಕ್ತಿಯಾಗಿದ್ದು, ನಂಜುಂಡೇಗೌಡ ಪುತ್ರನನ್ನು ಕೊಂದ ಆರೋಪಿ.


ಉಮೇಶ್ ಮದ್ಯವ್ಯಸನಿಯಾಗಿದ್ದು, ಪ್ರತಿನಿತ್ಯ ಕುಡಿದು ಬಂದು ಮದುವೆ ಮಾಡುವಂತೆ, ಆಸ್ತಿಯನ್ನು ನೀಡುವಂತೆ ತಂದೆಯೊಂದಿಗೆ ಜಗಳವಾಡುತ್ತಿದ್ದ. ಸೋಮವಾರ ರಾತ್ರಿಯೂ ಕುಡಿದು ಬಂದು ತಂದೆಯೊಂದಿಗೆ ಜಗಳವಾಡಿ ಮಲಗಿದ್ದ. ಬುಧವಾರ ಸಂಜೆ ನಂಜುಂಡೇಗೌಡ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಡಿದು ಬಂದ ಉಮೇಶ್ ತಂದೆಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ತಂದೆಯ ಮೇಲೆ ಉಮೇಶ್ ಹಲ್ಲೆಗೆ ಮುಂದಾಗಿದ್ದಾನೆ.

ಈ ವೇಳೆ ನಂಜುಂಡೇಗೌಡ ಕೈಯಲ್ಲಿ ಹಿಡಿದಿದ್ದ ಚಾರ್ಜ್‌ಬಲ್ ಬ್ಯಾಟರಿಯಿಂದ ಉಮೇಶ್ ತಲೆಗೆ ಬಲವಾಗಿ ಹಲ್ಲೆ ಮಾಡಿ ಪರಾರಿ ಆಗಿದ್ದು, ತೀವ್ರ ರಕ್ತಸ್ರಾವವಾಗಿ ಉಮೇಶ್ ಕೊಟ್ಟಿಗೆಯಲ್ಲಿ ಬಿದ್ದಿದ್ದಾನೆ. ಸ್ನೇಹಿತರು ಉಮೇಶ್‌ನನ್ನು ಹುಡುಕಿಕೊಂಡು ಬಂದ ವೇಳೆ ರಕ್ತದ ಮಡುವಿನಲ್ಲಿ ಕೊಟ್ಟಿಗೆಯಲ್ಲಿ ಬಿದ್ದಿದ್ದನ್ನು ಕಂಡು ಅಂಬ್ಯುಲೆನ್ಸ್‌ನಲ್ಲಿ ಹಾಸನದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಉಮೇಶ್ ಮೃತಪಟ್ಟಿದ್ದಾನೆ.

LEAVE A REPLY

Please enter your comment!
Please enter your name here