ಅನೈತಿಕ ಸಂಬಂಧ ಬೆಳೆಸುವಂತೆ ಕಿರುಕುಳ ? ; ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣು

0

ಹಾಸನ : ಅನೈತಿಕ ಸಂಬಂಧ ಬೆಳೆಸುವಂತೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದರಿಂದ ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದ ರಾಜಕುಮಾರ್ ನಗರ ಬಡಾವಣೆಯಲ್ಲಿ ನಡೆದೋಗಿದೆ . ಮನೆಮಂದಿಯೆಲ್ಲಾ ನಮಾಜ್ ಗೆ ಹೋಗಿದ್ದಾಗ ಮನೆಯಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದೋಗಿದೆ. ಶಬನಮ್ ಸುಲ್ತಾನ್ ಎಂಬ (30ವರ್ಷದ) ಗೃಹಿಣಿ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದು.

ಇರ್ಫಾನ್ ಎಂಬುವವರ ಜತೆ 12 ವರ್ಷದ ಹಿಂದೆ ಶಬನಮ್ ಸುಲ್ತಾನ್‌ಗೆ ಮದುವೆ ಆಗಿತ್ತು. ಅದರೆ, ಇಸ್ಮಾಯಿಲ್ ಶರೀಫ್‌ ಎಂಬಾತನ ಪೀತಿಯ ಬಲೆಗೆ ಬಿದ್ದು, ಆತನ ಜತೆ ಎರಡು ತಿಂಗಳ ಹಿಂದೆ ಶಬನಮ್ ಓಡಿ‌ಹೋಗಿದ್ದಳು. ಆದರೆ, ಮನೆಯವರು ರಾಜಿ ಮಾಡಿ ಮನೆಗೆ ಕರೆತಂದಿದ್ದರು ಎನ್ನಲಾಗಿದೆ ., ಒಂದು ತಿಂಗಳ ಬಳಿಕ ಮಹಿಳೆ ಮನೆಗೆ ವಾಪಸ್‌ ಬಂದಿದ್ದಳು. ಆದರೆ, ನಂತರವೂ ಇಸ್ಮಾಯಿಲ್ ಶರೀಫ್‌ ಅದೇ ಚಾಳಿ ಮುಂದುವರಿಸಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here