ವಾಕಿಂಗ್ ಪಾತ್ ಸ್ವಚ್ಛಗೊಳಿಸುವ ಮೂಲಕ
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಪುರಸಭೆ

0

ಹೊಳೆನರಸೀಪುರ:ಪಟ್ಟಣದ ಸುರಕ್ಷತೆಗಾಗಿ ಕೋಟ್ಯಾಂತರ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ
ಶಾಸಕ ಹೆಚ್.ಡಿ.ರೇವಣ್ಣನವರ ಮಹತ್ವಾಕಾಂಕ್ಷೆಯ
ತಡೆ ಗೋಡೆಗೆ ಸೇರಿದಂತೆ ನಿರ್ಮಿಸಲಾಗಿರುವ ವಾಕಿಂಗ್ ಪಾತ್ ನ್ನು ಇಂದು ಪುರಸಭೆ ಅಧ್ಯಕ್ಷರಾದ
ಶ್ರೀಮತಿ .ಸಿ.ಜಿ.ವೀಣಾ ರಾಜೇಶ್ ಸೂಚನೆಯ ಮೇರೆಗೆ ಸ್ವಚ್ಛಗೊಳಿಸಲಾಯಿತು.

ಕೆಲವು ದಿನಗಳ ಹಿಂದೆ ಸಾರ್ವಜನಿಕರು ವಾಕಿಂಗ್ ಪಾತ್ ನಲ್ಲಿ ಕೆಲವು ಅನಾಮಧೇಯ ವ್ಯಕ್ತಿಗಳು ಪರಿಸರ ಮಾಲಿನ್ಯವನ್ನುಂಟು ಮಾಡಿದ್ದಾರೆ ಅದನ್ನು ಸ್ವಚ್ಛಗೊಳಿಸಲು ಕ್ರಮವನ್ನು ತೆಗೆದುಕೊಳ್ಳಬೇಕೆಂದು
ಬುಕ್ ಡಿಪೋ ಪ್ರಸನ್ನ ಮತ್ತು ಅವರ ಮಗ ಚೇತನ್ ಮೆಸೆಂಜರ್ ಮೂಲಕ ಸಾಮಾಜಿಕ ಕಳಕಳಿಯುಳ್ಳ ವಿಶ್ವ ಕವಿ ಹೊಳೇನರಸೀಪುರು ಅವರಿಗೆ ಮನವಿ ಮಾಡಿದ್ದರು

ಈ ವಿಷಯವನ್ನು ಮಾನ್ಯ ಪುರಸಭಾ ಅಧ್ಯಕ್ಷರಾದ ಶ್ರೀಮತಿ.ಸಿ.ಜಿ.ವೀಣಾ ರಾಜೇಶ್ ರವರು,
ಪುರಸಭಾ ಮುಖ್ಯಾಧಿಕಾರಿ
ಶ್ರೀಮತಿ. ವಿ.ಡಿ.ಶಾಂತಲಾರವರು, ಪರಿಸರ ಇಂಜಿನಿಯರ್
ಶ್ರೀಮತಿ ‌ರುಚಿ ದರ್ಶಿನಿಯವರ ಗಮನಕ್ಕೆ ತಂದಾಗ ಅವರು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕರ ಮನವಿಗೆ ಸ್ಪಂದಿಸಿ,
ಇಂದು ಹತ್ತಾರು ಪೌರ ಕಾರ್ಮಿಕರನ್ನು ವಾಕಿಂಗ್ ಪಾತ್ ಸ್ವಚ್ಛ ಗೊಳಿಸುವ ಕಾರ್ಯಕ್ಕೆ ನೇಮಿಸಲಾಗಿದ್ದು ಅವರು ಕಾರ್ಯ ಪ್ರವೃತರಾಗಿ

ಈ ಸ್ವಚ್ಚತಾ ಕಾರ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರವನ್ನು ನೀಡಿದ ಪುರಸಭೆ ಅಧ್ಯಕ್ಷರಿಗೂ,ಮುಖ್ಯಾಧಿಕಾರಿಗಳಿಗೂ,ಪರಿಸರ ಇಂಜಿನಿಯರ್ ಅವರಿಗೂ,ಪುರಸಭೆ ಅಧಿಕಾರಿಗಳಿಗೂ,
ಪೌರ ಕಾರ್ಮಿಕರಿಗೂ ಹೊಳೆನರಸೀಪುರದ ಮಹಾ ಜನತೆಯ ಪರವಾಗಿ ಧನ್ಯವಾದಗಳು ಮತ್ತು ಸಿಂಪಲ್ಲಾಗೊಂದು ಥ್ಯಾಂಕ್ಸ್.ಬರಲಿ ನಿಮ್ಮದೊಂದು ಲೈಕ್ಸ್

LEAVE A REPLY

Please enter your comment!
Please enter your name here