ಗುತ್ತಿಗೆದಾರರ ಬಿಲ್ ಪಾವತಿಗೆ ಸ್ವರೂಪ್ ಆಗ್ರಹ

0

ಹಾಸನ: ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಹಲವು ಕಾಮಗಾರಿ ಮಾಡಿರುವ ಗುತ್ತಿಗೆದಾರರ ಬಿಲ್ ಪಾವತಿ ಮಾಡುವಂತೆ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರಿಂದ ಲಂಚ ಸ್ವೀಕಾರ ವಿಚಾರ ಆರೋಪ ಇದೆ. ಹಾಸನದಲ್ಲೂ ಅನೇಕ ಕಾಮಗಾರಿ ಮುಗಿದಿವೆ. ಆದರೂ ನಮಗೆ ಇನ್ನೂ ಹಸ್ತಾಂತರ ಆಗಿಲ್ಲ ಎಂದರು. ಮುಗಿದಿರುವ ಕಾಮಗಾರಿಗಳನ್ನು ಏಕೆ ಹಸ್ತಾಂತರ ಮಾಡಿಲ್ಲ ಎಂದು ಕೇಳಿದರೆ ಕಂಟ್ರ್ಯಾಕ್ಟರ್‌ಗಳು ಬಿಲ್ ಪಾವತಿಯಾಗಿಲ್ಲ ಅದಕ್ಕೆ ಹಸ್ತಾಂತರಿಸಿಲ್ಲ ಎನ್ನುತ್ತಾರೆ. ಗುತ್ತಿಗೆರಾರರನ್ನ ಕೇಳಿದ್ರೆ ನಾವು ಮನೆ, ಮಠ ಮಾರಿಕೊಂಡು ಬೀದಿಗೆ ಬಂದಿದ್ದೇವೆ ಎನ್ನುತ್ತಿದ್ದಾರೆ.

ರಾಜ್ಯ ಸರ್ಕಾರದ ಮೇಲೆ ಗುತ್ತಿಗೆದಾರರು ಆಪದನೆ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತು ಬಿಲ್ ಪಾವತಿಸಬೇಕು. ಗುತ್ತಿಗೆದಾರರಿಗೆ ಎಂದು ಸ್ವರೂಪ್ ಒತ್ತಾಯಿಸಿರು. ಪೆಂಡಿಂಗ್ ಇರೋ ಬಿಲ್‌ಗಳಿಗೆ ಎನ್ ಓಸಿ ಪಡೆಯೋದಕ್ಕೂ ಶೇ.5, ಶೇ.10 ರಷ್ಟು ಕಮಿಷನ್ ಕೊಡಬೇಕಿದೆ. ಗುತ್ತಿಗೆದಾರರು ಸಂಪೂರ್ಣವಾಗಿ ನೆಲ ಕಚ್ಚಿದ್ದಾರೆ ಎಂದರು. ಮೊನ್ನೆ ಬೆಂಗಳೂರಿನಲ್ಲಿ ಸಿಕ್ಕಿರುವ 42 ಕೋಟಿ ಹಣ ಯಾರದ್ದು ಏನು ಎಂಬುದನ್ನ ನಾನು ಚರ್ಚೆ ಮಾಡೋಕೆ ಹೋಗಲ್ಲ. ಅದನ್ನ ದೊಡ್ಡವರು ನೋಡಿಕೊಳ್ತಾರೆ ಎಂದು ಹೇಳಿದರು.

LEAVE A REPLY

Please enter your comment!
Please enter your name here