ಗ್ರಾ ಪಂ ಚುನಾವಣೆ : 156 ನಾಮಪತ್ರಗಳ ಸಲ್ಲಿಕೆ

0

ಗ್ರಾಮ ಪಂಚಾಯತಿ ಸದಸ್ಯ ಆಯ್ಕೆಗೆ ನಡೆಯುತ್ತಿರುವ ಚುನಾವಣೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಒಟ್ಟು 1703 ಸ್ಥಾನಗಳಿಗೆ ಇಂದು ಒಟ್ಟು 156 ನಾಮಪತ್ರಗಳು ಸ್ವೀಕೃತಗೊಂಡಿವೆ.

ಮೊದಲ ಹಂತದ ಚುನಾವಣೆ ನಡೆಯುತ್ತಿರುವ ನಾಲ್ಕು ತಾಲ್ಲೂಕುಗಳ ಪೈಕಿ ಹಾಸನ ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳ 3371 ಸದಸ್ಯ ಸ್ಥಾನ ಗಳಿಗೆ ಇಂದು 25 ನಾಮಪತ್ರಗಳು ಸ್ವೀಕೃತಗೊಂಡಿವೆ.

ಅರಕಲಗೂಡು ತಾಲ್ಲೂಕಿನ 35 ಗ್ರಾಮ ಪಂಚಾಯತಿ ಗಳ ಒಟ್ಟು 467 ಸ್ಥಾನಗಳಿಗೆ ಇಂದು ಒಟ್ಟು 34 ನಾಮಪತ್ರ ಸಲ್ಲಿಕೆಯಾಗಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ 40 ಗ್ರಾಮ ಪಂಚಾಯತಿಗಳ 609 ಸ್ಥಾನಗಳಿಗೆ 61 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ 24 ಗ್ರಾಮ ಪಂಚಾಯತಿಗಳ 256 ಸ್ಥಾನಗಳಿಗೆ ಇಂದು 36 ಮಂದಿ ನಾಮಪತ್ರ ಸಲ್ಲಿಸಿದರು.

ಇಂದು ಒಟ್ಟಾರೆ ಸಲ್ಲಿಕೆಯಾದ 156 ನಾಮಪತ್ರಗಳಲ್ಲಿ 95 ಸಾಮಾನ್ಯ ಹಾಗೂ 61 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ಅರ್ ಗಿರೀಶ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here