Home Hassan Taluks Belur ವಿಶ್ವ ಪರಾಂಪರಿಕ ತಾಣಗಳ ಪಟ್ಟಿಗೆ ನಮ್ಮ ಬೇಲೂರು, ಹಳೇಬೀಡು ಸೇರ್ಪಡೆಗೆ ಶಿಫಾರಸ್ಸು !!

ವಿಶ್ವ ಪರಾಂಪರಿಕ ತಾಣಗಳ ಪಟ್ಟಿಗೆ ನಮ್ಮ ಬೇಲೂರು, ಹಳೇಬೀಡು ಸೇರ್ಪಡೆಗೆ ಶಿಫಾರಸ್ಸು !!

0

ಹಾಸನ ಡಿ.08 (ಹಾಸನ್_ನ್ಯೂಸ್ ) : ವಿಶ್ವಪರಾಂಪರಿಕ ತಾಣಗಳಾಗಿ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ದೇವಾಲಯಗಳ ಸೇರ್ಪಡೆಗೆ ನಾಮನಿದೇಶನಗೊಳಿಸಿ ಶಿಫಾರಸ್ಸು ಮಾಡಲಾಗಿದ್ದು, ತಾತ್ಕಲಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಜಿಲ್ಲಾಧಿಕಾರಿ ಆರ್ ಗೀರಿಶ್ ತಿಳಿಸಿದ್ದಾರೆ.


  
        ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಭಾಗಿದಾರ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು ಬೇಲೂರು ಚನ್ನಕೇಶವ ದೇವಾಲಯ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಹಾಗೂ ಮೈಸೂರು ಜಿಲ್ಲೆಯ ಸೋಮನಾಥ ದೇವಾಲಯಗಳನ್ನು  ವಿಶ್ವ ಪರಾಂಪರಿಕ ತಾಣಗಳ ಪಟ್ಟಿಗೆ  ಸೇರ್ಪಡೆಗೊಳಿಸಲು ರಾಜ್ಯದಿಂದ ಪ್ರಸ್ತಾವನೆ ಸಲ್ಲಿಸಿಕೆಯಾಗಿದ್ದು, ಯುನೆಸ್ಕೋದ  ತಾತ್ಕಲಿಕ ಪಟ್ಟಿಯಲ್ಲಿ ಅನುಮೋದನೆ ಪಡೆದಿದೆ ಎಂದರು.


  
         ಬೇಲೂರು ಹಳೇಬೀಡಿನ ದೇವಾಲಯದ ವಿನ್ಯಾಸ ವಾಸ್ತುಶಿಲ್ಪಗಳು ಹಾಗೂ ಮಾನವ ಮೌಲ್ಯಗಳನ್ನು ಪ್ರರ್ದಶಕ ರೂಪಗಳು ಗಮನಿಸಿ ಇವುಗಳ ಪ್ರಸ್ತಾವನೆ ಸಲ್ಲಿಕೆ ಆಗಬೇಕು ನಾಮ ನಿರ್ದೇಶಕ ವಾದ  ಸ್ಥಳಗಳಲ್ಲಿ ಸ್ಥಳ ನಿರ್ವಹಣೆ ಯೋಜನೆಯ ವಿನ್ಯಾಸವನ್ನು ಯುನೆಸ್ಕೋಗೆ  ಕಳಿಸಬೇಕಿದೆ

ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ನಗರ /ಗ್ರಾಮ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ವ್ಯವಸ್ಥಿತವಾದ ಮತ್ತು ದೂರದೃಷ್ಟಿ ಚಿಂತನೆಗಳ ಯೋಜನೆಗಳನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.

     ಬೆಂಗಳೂರಿನ ಇನ್ ಟೆಕ್ (Iಓಖಿಂಅಊ) ತಜ್ಞರಾದ ಪಂಕಜ್ ಅವರು ಮಾತನಾಡಿ  ಯುನೆಸ್ಕೋ ಮಾರ್ಗಸೂಚಿಯಂತೆ ದೇವಾಲಯದ ಸುತ್ತಮುತ್ತ ನೂರಾರು  ವರ್ಷಗಳಿಂದ ಇರುವ ಮನೆಗಳು ,ವಾಸ್ತುಶಿಲ್ಪಗಳು ಮುಂದಿನ ಪೀಳಿಗೆಗೆ ಅಲ್ಲಿನ ಸಂಸ್ಕೃತಿಯನ್ನು ತಿಳಿಸಬೇಕಾಗುತ್ತದೆ ಹಾಗೂ ಯುನೆಸ್ಕೋ ವಿಶ್ವ ಪರಾಂಪರಿಕ ತಾಣ ಪಟ್ಟಿಗೆ ನಾಮ ನಿರ್ದೇಶನದ ಸಂದರ್ಭ ದಸ್ತಾವೇಜು ಸಲ್ಲಿಕೆ ವೇಳೆ ಸಂಭಂದಪಟ್ಟ ಸ್ಥಳ ನಿರ್ವಹಣಾ ವ್ಯವಸ್ಥೆಯ ವಿಸ್ಕøತ ಯೋಜನೆ  ಸಲ್ಲಿಕೆ ಮಾಡಬೇಕು ಇದರಲ್ಲಿ ಬಫರ್ ವಲಯಗಳನ್ನು ಗುರುತಿಸಬೇಕು ಈ ಸ್ಥಳಗಳ ಮಹತ್ವ, ಹೇಗೆ ಸಂರಕ್ಷಿಸಲಾಗುವುದು ಎಂಬುದನ್ನು  ಪಂಕಜ್ ವಿವರಿಸಿದರು .

       ಸಭೆಯಲ್ಲಿ ಉಪವಿಭಾಧಿಕಾರಿ ಬಿ.ಎ.ಜಗದೀಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಇಂಜಿನಿಯರ್  ಡಿ.ಅರ್ಚನ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಎ.ಬಿ ಸಂಜಯ್ ,ಬೇಲೂರು-ಹಳೇಬೀಡು ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಹೆಚ್. ಪಿ ಹಾಗೂ ಪುರಾತತ್ವ ಇಲಾಖೆಯ ಕ್ಯುರೇಟರ್  ಕುಮಾರ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: