ಟಿಎಪಿಸಿಎಂಎಸ್ ಚುನಾವಣೆ ಹಿನ್ನೆಲೆ : ಜೆಡಿಎಸ್-ಬಿಜೆಪಿ ಮಾತಿನ ಚಕಮಕಿ

0
https://www.youtube.com/watch?v=_-qf6KPX98I&ab_channel=HassanNews

ಹಾಸನ ಜಿಲ್ಲೆಯ ಆಲೂರು ತಾಲ್ಲೂಕು ಟಿಎಪಿಸಿ- ಎಂಎಸ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಆಲೂರಿನಲ್ಲಿ ನಡೆಯಿತು. ತಾಲ್ಲೂಕು ಟಿಎಪಿಸಿಎಂಎಸ್‌ ಇದೇ ತಿಂಗಳು 24 ರಂದು ಚುನಾವಣೆ ದಿನಾಂಕ ನಿಗದಿಯಾಗಿತ್ತು ತಾಲ್ಲೂಕಿನ ಹೊಳೆಬೆಳ್ಳೂರು ಗ್ರಾಮದ ಬಿಜೆಪಿ ಬೆಂಬಲಿತ ಚಿನ್ನಸ್ವಾಮಿ ಎಂಬುವವರು ಹೊಳೇಬೆಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮತದಾನದ ಹಕ್ಕು ಪಡೆದಿದ್ದರು

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೆ.ಎಸ್‌.ಮಂಜೇಗೌಡ ಅವರ ಅಳಿಯ ಪ್ರಕಾಶ್ ಕೂಡ ನಿರ್ದೇಶಕ ಸ್ಥಾನಕ್ಕೆ ಅಪೇಕ್ಷಿತರಾಗಿದ್ದರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಾಮಪತ್ರಕ್ಕೆ ಮತದಾನದ ಹಕ್ಕು ಪಡೆದಿರುವವರು ಸೂಚಕರಾದವರೂ ಸಹಿ ಬೇಕಾಗುತ್ತದೆ ಅದ್ದರಿಂದ ಪ್ರಕಾಶ್ ಅವರು ಚಿನ್ನಸ್ವಾಮಿ ಅವರನ್ನು ಸೂಚಕರಾಗಿ ಸಹಿ ಮಾಡುವಂತೆ ಒತ್ತಾಯಿಸಿದ್ದಾರೆ ಆದರೆ ಚಿನ್ನಸ್ವಾಮಿ ಒಪ್ಪದೇ ಶಾಸಕರ ಕಛೇರಿಗೆ ಬಂದು ಕುಳಿತಿರುವ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಕೆ.ಎಸ್.ಮಂಜೇಗೌಡ,ಅಳಿಯ ಪ್ರಕಾಶ್ ಹಾಗೂ ಇತರರು ಏಕಾಏಕಿ ಶಾಸಕರ ನುಗ್ಗಿ ಚಿನ್ನಸ್ವಾಮಿ ಅವರನ್ನು ಸಹಿ ಮಾಡುವಂತೆ ಒತ್ತಾಯಿಸಿದ್ದಾರೆ ಅವರು ಒಪ್ಪದಿದ್ದಾಗ ಅವರನ್ನು ಎಳೆದಾಡಿದ್ದಾರೆ

ಆ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಸಕಲೇಶಪುರ ವಿಧಾನಸಭಾ ಕ್ಷೇತ್ರ ಮುಖಂಡರ ನಡುವೆ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸುವ ಹಂತ ತಲುಪಿತು ನಂತರ ಪೊಲೀಸರ ಮದ್ಯ ಪ್ರವೇಶದಿಂದ ಎರಡು ಗುಂಪುಗಳ ನಡುವೆ ನಡೆಯ ಬಹುದಾಗಿದ್ದ ದೊಡ್ಡ ಗಲಾಟೆಯನ್ನು ತಿಳಿಗೊಳಿಸಿದರು. 40 ವರ್ಷಗಳ ರಾಜಕೀಯ ಅನುಭವವಿರುವ ಮಂಜೇಗೌಡ ಅವರು ತಗೆದು ಸಣ್ಣ ವಿಚಾರಕ್ಕೆ ಜಗಳ ಬೆಂಬಲಿಗರ ಜೊತೆ ಶಾಸಕರ ಕಛೇರಿಗೆ ನುಗ್ಗಿ ಗಲಾಟೆ ಮಾಡಿಸುತ್ತಾರೆ ಇವರಿಗೆ ವಿಧಾನಸಭೆ ಚುನಾವಣೆ ಸೋಲನ್ನು ಅರಗಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ 15 ವರ್ಷಗಳಿಂದ ಶಾಸಕರಾಗಿದ್ದ ಹೆಚ್.ಕೆ.ಕುಮಾರಸ್ವಾಮಿ ಅವರನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ಸಂಪಾಧನೆ ಮಾಡಿದ್ದರು ಹಣದ ಮದ ಹೀಗೆ ಆಡಿಸುತ್ತಿದೆ ಮುಂದಿನ ಲೋಕಸಭಾ,ತಾಲ್ಲೂಕು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ಶಾಶ್ವತವಾಗಿ ಇವರನ್ನು ಮನೆಗೆ ಕಳುಹಿಸುತ್ತಾರೆ ಎಂದು ಜಯಕರ್ನಾಟಕ ಸಂಘದ ಅಧ್ಯಕ್ಷ ಹನುಮಂತೇಗೌಡ ಅಕ್ರೋಶ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here