ಕಾಂಗ್ರೆಸ್ ಸರಕಾರದಿಂದ ರೈತರಿಗೆ-ಬಡ ಜನರಿಗೆ ಅನ್ಯಾಯ, ದೋರಣೆ ಖಂಡಿಸಿ ಸಂಸದ ಪ್ರಜ್ವಲ್ ಸಾರಥ್ಯದಲ್ಲಿ ಜೆಡಿಎಸ್ ಪಕ್ಷದಿಂದ ಹಾಸನ ನಗರದಲ್ಲಿ ಬೃಹತ್ ಪ್ರತಿಭಟನೆ:
ಹಾಸನ: ಕೇವಲ ರಾಜ್ಯದ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ಇತರೆ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ, ರೈತರಿಗೆ ಮತ್ತು ಬಡವರಿಗೆ ಹಲವು ರೀತಿಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ರಾಜ್ಯ ಸರಕಾರದ ದೋರಣೆ ಖಂಡಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಜೆಡಿಎಸ್ ಪಕ್ಷದವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಮಳೆ ಕಡಿಮೆಯಿಂದ ವಿವಿಧ ಬೆಳೆಗಳು ಕುಂಠಿತಗೊಂಡಿದ್ದು, ಕೂಡಲೇ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು. 11,500 ಕೋಟಿ ಎಸ್.ಸಿ. ಮತ್ತು ಎಸ್.ಟಿ.ಗೆ ಮೀಸಲಿಟ್ಟ ಅನುಧಾನವನ್ನು ಗ್ಯಾರಂಟಿ ಯೋಜನೆಗೆ ಅಳವಡಿಸಿಕೊಳ್ಳಲಾಗಿದೆ. ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಕೊರೆದ ಕೊಳವೆಬಾವಿಗಳೀಗೆ ಮೂರು ವರ್ಷಗಳಾದರೂ ವಿದ್ಯುತ್ ಒದಗಿಸಿರುವುದಿಲ್ಲ.
ಕಾಡಾನೆ ವಿಚಾರದಲ್ಲಿ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಕಂಡು ಹಿಡಿಯಬೇಕು.ಕಾಡಾನೆ ದಾಳಿಯಿಂದ ಮೃತಪಟ್ಟವರಿಗೆ ಸರಕಾರ ನೆರವು ನೀಡಿದೆ. ಆದರೆ ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರ ಬಂಧನ ಮಾಡಿರುವುದು ಸರಿಯಲ್ಲ. ಅವರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ವಾಪಸ್ ಪಡೆಯುವಂತೆ ಒತ್ತಾಯಸಿದರು. ಈಗಾಗಲೇ ರಾಜ್ಯ ಸರಕಾರ ತಮಿಳುನಾಡು ಮೆಚ್ವಿಸಲು ಕಾವೇರಿ ನೀರು ಹರಿಯುತ್ತಿದ್ದಾರೆ. ನೆನ್ನೆ ನೆಡೆದ ನದಿ ನೀರು ಹಂಚಿಕೆಯಲ್ಲಿ ವಿಷಯದಲ್ಲಿ ಕಾವೇರಿ ನೀರಾವರಿ ತಜ್ಞರ ಸಮಿತಿ ಅಭಿಪ್ರಾಯಕ್ಕೆ ಬಿಟ್ಟಿರುವ ಸುಪ್ರೀ ಕೋರ್ಟ್ ತೀರ್ಪುನ್ನು ಸ್ವಾಗತಿಸುತ್ತೇನೆ. ಸರಕಾರ ಅಧಿಕಾರಕ್ಕೆ ಬಂದು 3 ತಿಂಗಳಾದರೂ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿಲ್ಲ.
ರಾಜ್ಯ ಸರಕಾರ ಕೇವಲ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ. ರಾಜ್ಯದಲ್ಲಿ ವಾಡಿಕೆಗಿಂತ ಶೇ.60 ರಷ್ಟು ಮಳೆ ಕೊರತೆ ಆಗಿದೆ. ಏಪ್ರಿಲ್, ಮೇ, ಜೂನ್‌ನಲ್ಲಿ ಮಳೆ ಆಗಿಲ್ಲ. ಕಾಫಿ, ಮೆಕ್ಕೆಜೋಳ, ರಾಗಿ ಎಲ್ಲ ಬೆಳೆಗಳು ನಾಶವಾಗಿವೆ. ಸರಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಉಚಿತ ವಿದ್ಯುತ್ ಕೊಡುವುದಾಗಿ ಹೇಳಿ ದಿನದ ಒಂದು ಗಂಟೆಗಳ ಕಾಲ ರೈತರಿಗೆ ವಿದ್ಯುತ್ ಕೊಡುತ್ತಿಲ್ಲ. ಕೂಡಲೇ ಸಮರ್ಪಕ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ಹಲವು ಕಡೆಗಳಲ್ಲಿ ಟ್ರಾನ್ಸ್ಫಾರ್ಮರ್ ಕೊರತೆ ಇದ್ದು, ಪೂರೈಕೆ ಮಾಡುವಂತೆ ವಿವಿಧ ಗ್ರಾಪಂ ವತಿಯಿಂದ ಮನವಿ ಸಲ್ಲಿಸಿ ಹಲವು ತಿಂಗಳುಗಳೇ ಕಳೆದಿದ್ದರೂ, ಟಿಸಿ ಪೂರೈಕೆಯಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಅನುದಾನದ ಕೊರತೆಯಿಂದ ಸರ್ಕಾರದಿಂದಲೇ ಪೂರೈಕೆಯಾಗಿಲ್ಲ ಎಂದು ಹೇಳುತ್ತಿದ್ದಾರೆ.
ಹೀಗಾದರೆ ಸಾಮಾನ್ಯ ಜನರು, ರೈತರು ಏನು ಮಾಡಬೇಕು ಎಂಬ ಪ್ರಶ್ನೆಗೆ ಆಳುವವರೇ ಉತ್ತರ ನೀಡಬೇಕಿದೆ ಎಂದು ಆಗ್ರಹಿಸಿದರು. ನಾವು ರೈತರ ಪರ ಪ್ರತಿಭಟನೆ ಮಾಡುತ್ತಿರುವಾಗ ಅವರ ಕಷ್ಟ ಕೆಳಲು ಡಿಸಿಗೆ ಸೌಜ್ಯನತೆ ಇಲ್ಲವೇ? ಜೆಡಿಎಸ್ ಪ್ರತಿಭಟನೆ ವೇಳೆ ಮನವಿ ಸ್ವೀಕರಿಸಬಾರದು ಎಂದು ಜಿಲ್ಲಾಧಿಕರಿಗಳು ನೆಪ ಹೇಳಿ ಯಾವುದೋ ಸಭೆಗೆ ಹೋಗಿರುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶವ್ಯಕ್ತಪಡಿಸಿದಲ್ಲದೇ ಡಿಸಿ ಪ್ರತಿಭಟನಾ ಸ್ಥಳಕ್ಕೆ ಬರುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತರು.
ಕೆಲ ಸಮಯದಲ್ಲೆ ಡಿಸಿ ಸತ್ಯಭಾಮ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಪ್ರಸಂಗ ನಡೆಯಿತು. ಪ್ರತಿಭಟನೆಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಮಾಜಿ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ, ಕೆ.ಎಸ್. ಲಿಂಗೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ನಗರಸಭೆ ಸದಸ್ಯ ರಫೀಕ್, ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು, ಆಲೂರು ತಾಲೂಕು ಜೆಡಿಎಸ್ ಅಧ್ಯಕ್ಷರು ಕೆ.ಎಸ್.ಮಂಜೇಗೌಡ, ಸಕಲೇಶಪುರ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ದೊಡ್ಡ ದಿಣ್ಣೆ ಸ್ವಾಮಿ.
ಸಕಲೇಶಪುರ ತಾಲ್ಲೂಕು ಜೆಡಿಎಸ್ ಅಧ್ಯಕ್ಷರು ಸ್ವಾಮಿಗೌಡ, ಮಾಜಿ ಉಪಾಧ್ಯಕ್ಷರು ಜಿ.ಪಂ.ಹಾಸನ ದುದ್ದ ಲಕ್ಷ್ಮಣಗೌಡ, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಸೈಯದ್ ಅಕ್ಬರ್, ವಕೀಲರ ಸಂಘದ ಅಧ್ಯಕ್ಷರು ಪೂರ್ಣಚಂದ್ರ, ನಗರಸಭೆ ಸದಸ್ಯರಾದ ವಾಸುದೇವ್, ಅಮೀರ್ ಜಾನ್, ಸುಮಾ, ಪ್ರೇಮಮ್ಮ, ರೇಖಾ ಮಂಜುನಾಥ್ ಇತರರು ಉಪಸ್ಥಿತರಿದ್ದರು.