ನವಜಾತ ಹೆಣ್ಣು ಶಿಶುವನ್ನು ವಶಕ್ಕೆ ಪಡೆದ ಅಧಿಕಾರಿಗಳು

0

ಅರಕಲಗೂಡು: ಮೋರಿಯ ಬಳಿ ಸಿಕ್ಕಿದ್ದ ನವಜಾತ ಹೆಣ್ಣು ಶಿಶುವನ್ನು ಮನೆಗೆ ತಂದು ಸಾಕುತ್ತಿದ್ದ ದಂಪತಿಯಿಂದ ಆಧಿಕಾರಿಗಳು ಮಗುವನ್ನು ಪಡೆದು ಹಾಸನದ ಮಕ್ಕಳ ಪಾಲನಾ ಕೇಂದ್ರಕ್ಕೆ ದಾಖಲಿಸಿರುವ ಪ್ರಕರಣ ಗುರುವಾರ ನಡೆದಿದೆ.

ತಾಲ್ಲೂಕಿನ ಮಾದಿಹಳ್ಳಿ ಕಾಲೊನಿ ಗ್ರಾಮದ ಪುಷ್ಪಲತಾ, ಸಂತೋಷ್ ದಂಪತಿ ಎಂಟು ದಿನಗಳ ಹಿಂದೆ ಕೂಲಿ ಕೆಲಸಕ್ಕಾಗಿ ಹಾಸನ ತಾಲ್ಲೂಕು ದುದ್ದ ಗ್ರಾಮಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಮೋರಿಯ ಬಳಿ ಮಲಗಿಸಿದ್ದ ನವಜಾತ ಹೆಣ್ಣು ಶಿಶುವನ್ನು ಕಂಡು ಮನೆಗೆ ತಂದು ಪಾಲನೆ ಮಾಡುತ್ತಿದ್ದರು. ಮಕ್ಕಳ ಸಹಾಯವಾಣಿಗೆ ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಸಿಡಿಪಿಒ ಹರಿಪ್ರಸಾದ್ ಪಿಎಸ್‌ಐ ಮಾಲಾ ಅವರೊಂದಿಗೆ ಗ್ರಾಮಕ್ಕೆ ತೆರಳಿ ಇದು ಕಾನೂನು ವಿರುದ್ಧವಾದ ಕಾರ್ಯ. ಮಗು ಬೇಕಿದ್ದರೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮನವಿ ಮಾಡಿಕೊಳ್ಳುವಂತೆ ದಂಪತಿಗೆ ತಿಳಿ ಹೇಳಿ ಮಗುವನ್ನು ವಶಕ್ಕೆ ಪಡೆದು ಶಿಶುಪಾಲನಾ ಕೇಂದ್ರಕ್ಕೆ ದಾಖಲಿಸಲು ಕರೆದೊಯ್ದರು.

LEAVE A REPLY

Please enter your comment!
Please enter your name here