ಹಾಸನ: ಜಿಲ್ಲಾಡಳಿತ ವತಿಯಿಂದ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಜ.26ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿತು
ಜಿಲ್ಲಾಧಿಕಾರಿ ಆರ್. ಗಿರೀಶ್ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಸಂದೇಶ ನೀಡಿದರು. ಶಾಸಕ ಪ್ರೀತಮ್ ಜೆ.ಗೌಡ ಅಧ್ಯಕ್ಷತೆ ವಹಿಸಿದರು.,
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು, ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‍ಗೌಡ , ಹಾಗೂ ಹಲವು ಸಾರ್ವಜನಿಕರು ಭಾಗವಹಿಸಿದ್ದರು
ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಗಣರಾಜ್ಯೋತ್ಸವ ಧ್ವಜಾರೋಹಣ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ 2016 ರಿಂದ 2018ನೇ ಸಾಲಿನವರೆಗೆ ಒಟ್ಟು 20 ಚಾಲಕರು 15 ವರ್ಷಗಳ ಕಾಲ ಅಪಘಾತ, ಅಪರಾಧ ರಹಿತ ಚಾಲನೆ ಮಾಡಿ ಸೇವೆ ಸಲ್ಲಿಸಿದ್ದು. ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿ ವಿತರಣೆ ಮಾಡಿದರು
ಈ ವರ್ಷದ ಸಾಧಕರಿಗೆ ಸನ್ಮಾನ :
ಹಾಸನ ಜಿಲ್ಲೆಯಲ್ಲಿ ಹಾಗೂ ಹಾಸನ ಜಿಲ್ಲೆಯವರಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಸನ್ಮಾನಿಸಲಾಗುತ್ತದೆ. ವಾಲಿಬಾಲ್ ತರಬೇತುದಾರ
ಎಸ್.ಎನ್ ರಮೇಶ್, ಹಿರಿಯರ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಪ್ರೋ. ವಲೇರಿಯನ್ ಡಿಸೋಜಾ, ಅಂಗವಿಕಲ ಕ್ರೀಡಾಪಟು ಎಸ್.ಡಿ. ಕಮಲಾಕ್ಷಿ, ಹಲವು ಕೆರೆಗಳನ್ನು ಪುನರುಜ್ಜೀವನಗೊಳಿಸಿರುವ
ಹಸಿರು ಭೂಮಿ ಪ್ರತಿಷ್ಠಾನ ಹಾಸನ, ಭಾರತ ಸರ್ಕಾರದ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ ಪಡೆದ ಸಿ.ಎನ್. ಅಶೋಕ,
ಕೋವಿಡ್ 2ನೇ ಅಲೆಯನ್ನು ಎದುರಿಸಲು ಸಹಾಯ ಮಾಡಿದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ರೆಡ್ ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್ ಹಾಸನ ಹೊಯ್ಸಳ,
ನ್ಯಾಷನಲ್ ಹ್ಯೂಮನ್ ರೈಟ್ಸ್ ವೆಲ್‍ಫೆರ್ ಟ್ರಸ್ಟ್, ಕಾಫಿ ಬೆಳೆಗಾರ ಧರ್ಮರಾಜ್ , ಪತ್ರಕರ್ತ ಸಿ.ಬಿ ಸಂತೋಷ್. ಸರ್ಕಾರಿ ಉದ್ಯೋಗಿ ಎಂ.ಎನ್. ಮಂಜೇಗೌಡ, ಜಿ.ಬಿ. ಶಿವಣ್ಣ, ಡಿ.ಎಸ್. ಕೃಷ್ಣೆಗೌಡ, ಡಾ. ಚಂದ್ರಶೇಖರ್, ಡಾ. ಎಸ್.ವಿ, ಕಿರಣ್‍ಕುಮಾರ್, ಜಗದೀಶ್, ಮಂಜುನಾಥ, ಚಂದ್ರೇಗೌಡ, ಶ್ರೀನಾಥ್,
ರಮೇಶ್, ತನುಜಾ, ಡಾ. ವೀಣಾಲತಾ, ಮುಬಾಶಿರ್, ಡಾ. ರಾಘವೇಂದ್ರ ಪ್ರಸಾದ್ ಕೆ.ಯು, ಲತಾ ಬಿ.ಎನ್, ಮಮತಾ.ಎಸ್, ಗಿರೀಶ್ ಬಿ, ವನಜಾಕ್ಷಿ ಎಸ್.ಡಿ, ಸುಧಾ ಟಿ.ಆರ್,
ಕಂದಾಯ ಇಲಾಖೆ ನೌಕರರಾದ ಶಿರಿನ್ ಬಾನು, ರವಿ ಬಿ.ಎಸ್, ಪೌರಕಾರ್ಮಿಕರಾದ ಸಣ್ಣಪ್ಪಯ್ಯ, ಕಾಂತಮ್ಮ ಅವನ್ನು ಸನ್ಮಾನಿಸಲಾಯಿತು
ಸಮಸ್ತ ಹಾಸನ ಜನತೆಗೆ 73 ನೇ ಗಣರಾಜ್ಯೋತ್ಸವದ ಶುಭಾಶಯಗಳು 🇮🇳 republicday proudindian india