ನಾಲ್ವರಿಂದ ಬೈಕ್ ಅಡ್ಡಗಟ್ಟಿ ರೈತನೋರ್ವನಿಗೆ ಚಾಕುನಿಂದ ಚುಚ್ಚಿ ದರೋಡೆ

0

ಹಾಸನ: ಪುಟ್ಟರಾಜು ಎನ್ನುವ ರೈತನೋರ್ವ ಸಿಟಿಯಿಂದ ತಮ್ಮ ಗ್ರಾಮವಾದ ದೋರನಹಳ್ಳಿಗೆ ಟಿವಿಎಸ್ ವಾಹನದಲ್ಲಿ ತೆರಳುತ್ತಿದ್ದ ವೇಳೆ ನಾಲ್ಕು ಜನ ಹುಡುಗರು ಅಡ್ಡಗಟ್ಟಿ ಆತನ ಮೇಲೆ ಚಾಕುವಿನಿಂದ ಮನಸ್ಸೊ ಇಚ್ಛೆ ಚುಚ್ಚಿದಲ್ಲದೇ 10 ಸಾವಿರ ಹಣವನ್ನು ದೋಚಿ ಪರಾರಿಯಾದ ಘಟನೆ ತಾಲೂಕಿನ ಸಮೀಪ ಹಾಲುವಾಗಿಲು ಶೆಟ್ಟಿಹಳ್ಳಿ ರಸ್ತೆಯ ಅಣ್ಣಿಗನಹಳ್ಳಿ ಮತ್ತು ಮತ್ತು ಶಂಕರನಹಳ್ಳಿ ನಡುವೆ ನಡೆದಿದೆ.

  ಸುಮಾರು ರಾತ್ರಿ 10 ಗಂಟೆ ಸಮಯದಲ್ಲಿ ತಾಲೂಕಿನ ದೋರನಹಳ್ಳಿ ಗ್ರಾಮದ ಸುಬ್ಬೇಗೌಡರ ಮಗ ಪುಟ್ಟರಾಜು 50 ವರ್ಷ ಎಂಬುವರೇ ಹಲ್ಲೆಗೊಳಗಾಗಿ 10 ಸಾವಿರ ರೂ ದರೋಡೆಕೋರರಿಗೆ ಒಪ್ಪಿಸಿದವರು. ರೈತನೋರ್ವ ಆಯಲ್ ಅಂಗಡಿಯಿಂದ ಕೆಲಸ ಮುಗಿಸಿ ವಾಪಸ್ ಹಾಸನ ನಗರದಿಂದ ತಮ್ಮ ಗ್ರಾಮವಾದ ದೋರನಹಳ್ಳಿಗೆ ದ್ವೀಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಎರಡು ಬೈಕ್ ನಲ್ಲಿ ಬಂದ ನಾಲ್ವರ ಗುಂಪೊಂದು ರಸ್ತೆ ಮಧ್ಯೆ ಅಡ್ಡಗಟ್ಟಿ ಬೆದರಿಸಿ ಹಣ ಮತ್ತು ಒಡವೆಗೆ ಬೇಡಿಕೆ ಇಡಲಾಗಿದ್ದು, 

ನಂತರ ತಮ್ಮ ಕೈಲಿದ್ದ ಚಾಕುವಿನಿಂದ ಆತನ ಮೇಲೆ ಮನಸ್ಸೊ ಇಚ್ಛೆ ಹಲ್ಲೆ ಮಾಡಿದಲ್ಲದೇ ಪುಟ್ಟರಾಜು ಬಳಿ ಇದ್ದ 10 ಸಾವಿರ ರೂಗಳನ್ನು ಕಸಿದುಕೊಂಡಿದ್ದು, ಅಷ್ಟರಲ್ಲಿ ಹಿಂದಿನಿಂದ ಯಾವುದೊ ವಾಹನದ ಲೈಟ್ ಬೆಳಕು ಬಿದ್ದುದ್ದು, ಅಪರಿಚಿತರು ತಮ್ಮ ಎರಡು ಬೈಕ್ ಗಳ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಇದೆ ದಾರಿಯಲ್ಲಿ ಹೋಗುವ ರೈತರು ಗಾಯಾಳು ಪುಟ್ಟರಾಜು ಅವರು ರಸ್ತೆಯಲ್ಲಿಯೇ ರಕ್ತದಲ್ಲಿ ನರಳುತ್ತಿರುವುದನ್ನು ನೋಡಿದ್ದಾರೆ. ಈಗ ಆಸ್ಪತ್ರೆಯಲ್ಲಿ ಪುಟ್ಟರಾಜು ಚಿಕಿತ್ಸೆ ಪಡೆಯುತ್ತಿದ್ದು, ತಾಲೂಕಿನ ಗೊರೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here