ಇದನ್ನು ಓದುತ್ತಿರುವ ಹಲವರು ಬೆಡ್ ಕಾಫಿಯಿಂದ ನಿಮ್ಮ ದಿನವನ್ನು ಪ್ರಾರಂಭಿಸುತ್ತೀರಿ.ಬೆಡ್ ಕಾಫಿ ನಂತರ ದಿನಕ್ಕೆ ೪-೫ ಬಾರಿ ಕಾಫಿಯನ್ನು ಕಡ್ಡಾಯವಾಗಿ ಕುಡಿಯುತೀರಾ.ಈ ಅಭ್ಯಾಸ ಒಳ್ಳೆಯದೇ? ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯಬಹುದಾ?
ಕೆಲವು ಸಂಶೋಧನೆಗಳ ಪ್ರಕಾರ ಬೆಳಗಿನ ಸಮಯದಲ್ಲಿ, ಅದು ಖಾಲಿ ಹೊಟ್ಟೆಯಲ್ಲಿ ನಿಮ್ಮ ದೇಹದ ಕಾರ್ಟಿಸೋಲ್ ಅಂಶ ತುಂಬಾ ಹೆಚ್ಚಾಗಿರುತ್ತದೆ.
ಹಾಗಾಗಿ ಕಾರ್ಟಿಸೋಲ್ ಅಂಶ ಹೆಚ್ಚಾಗಿರುವ ಸಮಯದಲ್ಲಿ ಕಾಫಿ ಕುಡಿದರೆ ಬಹಳ ತೊಂದರೆ.
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿದಾಗ ಹೊಟ್ಟೆಯಲ್ಲಿ ಹೆಚ್ಚು ಆಮ್ಲವು ಉತ್ಪತ್ತಿಯಾಗುತ್ತದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಹಲವರು ಜನರಿಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿದು ಹೊಟ್ಟೆಯಲ್ಲಿ ಉರಿ, ಎದೆಯುರಿ, ಹೊಟ್ಟೆಯಲ್ಲಿ ಹುಣ್ಣು, ಅಜೀರ್ಣತೆ, ಗ್ಯಾಸ್ಟಿಕ್ ಇತ್ಯಾದಿ ಸಮಸ್ಯೆಗಳು ಎದುರಾದ ಉದಾಹರಣೆಗಳು ಸಾಕಷ್ಟಿವೆ.
ಕಾಫಿ ಕುಡಿಯುವುದು ತಪ್ಪಲ್ಲ ಆದರೆ ಅದು ಸೀಮಿತ ಪ್ರಮಾಣದಲ್ಲಿ ಇರಬೇಕು ಅಷ್ಟೇ. ನಮ್ಮ ದೇಹದ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾದಂತೆ ನಮಗೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಹಾಗಾಗಿ ಕಾರ್ಟಿಸೋಲ್ ಅಂಶ ಖಾಲಿ ಹೊಟ್ಟೆಯಲ್ಲಿ ಹೆಚ್ಚಾದ್ದರಿಂದ ಆ ಸಮಯದಲ್ಲಿ ಕಾಫಿ ಕುಡಿಯುವುದನ್ನು ತಡೆಯಬೇಕು.
ಕಾಫಿ ಕುಡಿದ ನಂತರ ನಮ್ಮ ದೇಹದಲ್ಲಿ ಅದರ ಪ್ರಭಾವ ಏಳು ಗಂಟೆಗಳವರೆಗೆ ಇರುತ್ತದೆ ಹಾಗಾಗಿ ರಾತ್ರಿ ಮಲಗುವ ಮುನ್ನ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಅದನ್ನು ತಡೆಯಲು ಪ್ರಯತ್ನಿಸಿ ಏಕೆಂದರೆ ಇದು ನಿಮ್ಮ ನಿದ್ರೆ ಹಾಳು ಮಾಡಬಹುದು.
ಹಾಗಾದರೆ ನಾವು ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಹುದು?
ನಾವು ತಿಂಡಿ ತಿಂದ ಮೇಲೆ ಕಾಫಿ ಸೇವಿಸುವುದು ಉತ್ತಮವಾದ ಅಭ್ಯಾಸ.ನಾವು ಎದ್ದ ಮೇಲೆ ಒಂದು ಗಂಟೆ ನಂತರವೇ ಕಾಫಿ ಕುಡಿಯಬೇಕು. ಹಾಗೆ ದಿನಕ್ಕೆ ಮೂರು- ನಾಲ್ಕು ಕಪ್ ಕಾಫಿ ಮಾತ್ರ ಕುಡಿದರೆ ಒಳ್ಳೆಯದು.ಕಾಫಿ ಕುಡಿಯುವುದನ್ನು ನಿಮ್ಮ ಚಟವಾಗಿ ಮಾಡಿಕೊಂಡರೆ ನಿಮ್ಮ ಆರೋಗ್ಯದಲ್ಲಿ ಹಲವು ಬದಲಾವಣೆ ಕಂಡು ಬರುತ್ತದೆ.
ಬೆಡ್ ಕಾಫಿ ಕುಡಿಯುವವರು ಚಿಕ್ಕಪುಟ್ಟ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದರೆ ಈ ಅಭ್ಯಾಸವನ್ನು ನಿಯಂತ್ರಿಸಿಕೊಂಡರೆ ಒಳ್ಳೆಯದು.
ಹಾಗೆ ಬೆಡ್ ಕಾಫಿ ಕುಡಿಯುವ ಅಭ್ಯಾಸದಿಂದ ಸಮಸ್ಯೆ ಎದುರಾಗದೇ ಇದ್ದರೆ ನಿಮ್ಮ ಅಭ್ಯಾಸವನ್ನು ಮುಂದುವರಿಸಬಹುದು ಆದರೂ ನಿಯಂತ್ರಿಸಿಕೊಂಡರೆ ಒಳ್ಳೆಯದು.
ಹಾಗಾಗಿ ಬೆಡ್ ಕಾಫಿ ಚಟವನ್ನು ಬಿಡಲು ಪ್ರಯತ್ನಿಸಿ. ನಿಮ್ಮ ಸ್ನೇಹಿತರು ಅಥವಾ ಪರಿವಾರದವರು ಈ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದರೆ ಅವರಿಗೆ ಇದನ್ನು ತಿಳಿಸಿ.
ಕಾಫಿ ಕುಡಿಯುವುದು ತಪ್ಪಲ್ಲ, ಆದರೆ ಇದನ್ನು ಸೇವಿಸುವ ಸಮಯ ಬಹಳ ಮುಖ್ಯ.
-ತನ್ವಿ. ಬಿ.