ನ.17ರಿಂದ ಕಾಲೇಜುಗಳ ಆರಂಭಕ್ಕೆ ರಾಜ್ಯ ಸರ್ಕಾರದಿಂದ ‘ಮಾರ್ಗಸೂಚಿ’ ರಿಲೀಸ್ : ಈ ನಿಯಮ ಪಾಲನೆ ಕಡ್ಡಾಯ

0

ಬೆಂಗಳೂರು : ನವೆಂಬರ್ 17ರಿಂದ ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯಿಂದ ಮುಚ್ಚಲ್ಪಟ್ಟಿದ್ದಂತ ಕಾಲೇಜುಗಳನ್ನು ಆರಂಭಗೊಳ್ಳಲಿವೆ. ಇಂತಹ ಕಾಲೇಜುಗಳು ಅನುಸರಿಸಬೇಕಾದಂತ ಮಾರ್ಗಸೂಚಿಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಈಗಾಗಲೇ ತಿಳಿಸಿತ್ತು. ಇಂತಹ ಮಾರ್ಗಸೂಚಿ ಕ್ರಮಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್ ಎಂ ಹಿರೇಮಠ ಅವರು ಕೋವಿಡ್-19 ಹಿನ್ನಲೆಯಲ್ಲಿ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನದ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಈ ಮಾರ್ಗಸೂಚಿಯಂತೆ ಕಾಲೇಜುಗಳು ಈ ಕೆಳಕಂಡ ಸಾಮಾನ್ಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.

ಸಾಮಾನ್ಯ ಮಾರ್ಗಸೂಚಿಗಳು

ಕಾಲೇಜಿನ ಸಂಪೂರ್ಣ ಕಟ್ಟಡ, ಮುಖ್ಯದ್ವಾರ, ಶೌಚಾಲಯ ಹಾಗೂ ಎಲ್ಲಾ ಕೊಠಡಿಗಳಲ್ಲಿ ಪೀಠೋಪಕರಣ ಮತ್ತು ಪಠ್ಯ ಸಾಮಗ್ರಿಗಳನ್ನು ಸ್ಯಾನಿಟೈಸ್ ಮಾಡಿಸುವುದು.
ಬೋಧಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ 3 ದಿನಗಳ ಮುಂಚೆ ಕೋವಿಡ್-19(RT-PCR) ಪರೀಕ್ಷೆಯನ್ನು ಮಾಡಿಸಿಕೊಂಡು, ಟೆಸ್ಟ್ ರಿಪೋರ್ಟ್ ನೆಗೆಟಿವ್ ಇದ್ದಲ್ಲಿ ಮಾತ್ರ ವಿಶ್ವವಿದ್ಯಾಲಯ, ಕಾಲೇಜುಗಳಿಗೆ ಹಾಜರಾಗುವುದು.
ಎಲ್ಲಾ ಕಾಲೇಜುಗಳು ತಮ್ಮ ತಮ್ಮ ಸಮೀಪವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಮ್ಯಾಪಿಂಗ್ ಮಾಡಿಕೊಳ್ಳುವುದು.
ಪ್ರತಿ ತರಗತಿಯಿಂದ ಒಬ್ಬ ವಿದ್ಯಾರ್ಥಿಯನ್ನು ಗುರುತಿಸಿ, ತನ್ನ ಸಹಪಾಠಿಗಳಲ್ಲೇನಾದರೂ ಕೋವಿಡ್ ಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದಲ್ಲಿ, ಅದನ್ನು ಕೋವಿಡ್ ಕಾರ್ಯಪಡೆ, ಸೆಲ್ ಗಮನಕ್ಕೆ ತರುವಂತೆ ಸೂಚಿಸುವುದು.
ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ ಮತ್ತು ಕುಟುಯುವ ನೀರನ್ನು ಸ್ವತಹ ತಂದು, ಅವರೇ ಉಪಯೋಗಿಸುವುದು.
ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಅನ್ನು ಧರಿಸುವುದು.
ಕಾಲೇಜುಗಳಲ್ಲಿ ಲೈಬ್ರರಿ ಮತ್ತು ಕ್ಯಾಂಟೀನ್ ಗಳನ್ನು ತೆರೆಯುವಂತಿಲ್ಲ.
ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎನ್ ಸಿಸಿ ಹಾಗೂ ಎನ್ ಎಸ್ ಎಸ್ ಚಟುವಟಿಕೆಗಳನ್ನು ಪ್ರಾರಂಭಿಸುವಂತಿಲ್ಲ.
ಪ್ರವೇಶ ಹಾಗೂ ನಿರ್ಗಮನ ಕೇಂದ್ರಗಳ ಸುರಕ್ಷತಾ ಕ್ರಮಗಳು

ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನರ್ ಮತ್ತು ಸ್ಯಾನಿಟೈಸರ್ಗಳ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು
ಪ್ರವೇಶ, ನಿರ್ಗಮನ ಸ್ಥಳಗಳಲ್ಲಿ ಜನಸಂದಣಿಯನ್ನು ತಪ್ಪಿಸಬೇಕು. ವಿವಿಧ ಕೋರ್ಸುಗಳಿಗೆ ಸೀಮಿತ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗಧಿಗೊಳಿಸಿ, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನದ ಸಮಯಗಳನ್ನು ಅನುಸರಿಸಬೇಕು.
ಆವರಣದ ಒಳಗೆ ಮತ್ತು ಹೊರಗೆ ಕ್ಯೂ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ನೆಲದ ಮೇಲೆ 6 ಅಡಿಗಳ ಅಂತವಿರುವ ನಿರ್ಧಿಷ್ಟ ಗುರುತುಗಳನ್ನು ಮಾಡುವುದು. ಅದನ್ನು ಪಾಲಿಸುವುದು.
ವಿದ್ಯಾರ್ಥಿಗಳ ಪ್ರವೇಶ ಮತ್ತು ನಿರ್ಗಮನದ ಮೇಲ್ವಿಚಾರಣೆಯನ್ನು ಮಾಡಬೇಕು.
ವಿದ್ಯಾರ್ಥಿ, ಬೋಧಕ, ಬೋಧಕೇತರ ಸಿಬ್ಬಂದಿಯ ಥರ್ಮಲ್ ತಪಾಸಣೆ ಮುಖಗವಸು, ಮಾಸ್ಕ್ ಧರಿಸುವುದು. ಕೈಗಳನ್ನು ಶುದ್ದಿಗೊಳಿಸುವುದನ್ನು ಎಲ್ಲಾ ಪ್ರವೇಶದಲ್ಲಿ ಖಚಿತಪಡಿಸಿಕೊಳ್ಳುವುದು.
ಜ್ವರ, ಕೆಮ್ಮು, ಉಸಿರಾಟದ ತೊಂದರೆಯ ಲಕ್ಷಣಗಳು ಹೊಂದಿರುವವರು ಶಿಕ್ಷಣ ಸಂಸ್ಥೆಯ ಆವರಣದೊಳಗೆ ಪ್ರವೇಶಿಸುವುದನ್ನು ನಿಷೇಧಿಸುವುದು.
ಹೀಗೆ ಈ ಮೇಲಿನ ಸುರಕ್ಷಾ ಕ್ರಮಗಳನ್ನು ಅನುಸಿರಿಕೊಂಡು, ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆ ಸೂಚಿಸಿದೆ.

LEAVE A REPLY

Please enter your comment!
Please enter your name here