ಪುಟಾಣಿ ಮಕ್ಕಳಿಗೆ ಬಟಾಣಿ ಕೊಡಿಸಿದ ತಹಶೀಲ್ದಾರರು

0

ಹಾಸನ ಜಿಲ್ಲೆ ಹೊಳೆನರಸೀಪುರ’ದ ತಹಶೀಲ್ದಾರರಾದ ಶ್ರೀನಿವಾಸ್ ರವರು ಗ್ರಾಮ ಪಂಚಾಯತಿ ಚುನಾವಣೆಯ ಪ್ರಯುಕ್ತ ಇಂದು ಹಳ್ಳಿ ಮೈಸೂರು ಹೋಬಳಿಯ ಅಣ್ಣಚಾಕೇನಹಳ್ಳಿ ಮತ ಚಲಾವಣೆ ಕೇಂದ್ರದ ವೀಕ್ಷಣೆಗೆ ಹೋಗಿದ್ದ ಸಂದರ್ಭದಲ್ಲಿ ಬಟಾಣಿ ಮಾರುವವನನ್ನು ಆಸೆಗಣ್ಣಿನಿಂದ ನೋಡುತ್ತಿದ್ದ ಮಕ್ಕಳಿಗೆ ಬಟಾಣಿ ಕೊಡಿಸಿದಾಗ ಮಕ್ಕಳ ಸಂತಸಕ್ಕೆ ಪಾರವೇ ಇರಲಿಲ್ಲ.

ಕುಣಿಗಲ್ ತಾಲ್ಲೂಕಿನ ಕುಪ್ಪೆ ಗ್ರಾಮದವರಾದ ಶ್ರೀನಿವಾಸ್ ರವರಿಗೆ ಈ ಮಕ್ಕಳನ್ನು ನೋಡಿ ತಮ್ಮ ಗ್ರಾಮೀಣ ಹಿನ್ನೆಲೆಯ ಬಾಲ್ಯ ಜೀವನ ನೆನಪಾಗಿರಬಹುದು. ಗ್ರಾಮೀಣ ಭಾಗದ ರೈತಾಪಿ ಜನರನ್ನು, ಮಕ್ಕಳನ್ನು ಪ್ರೀತಿಸುವ ಇಂತಹ ಅಧಿಕಾರಿಗಳಿಂದಾಗಿ ಜನಸಾಮಾನ್ಯರಿಗೆ ಸರ್ಕಾರಿ ಸೇವೆಗಳು ಇಂದು ಸುಲಭವಾಗಿ ದೊರೆಯುತ್ತಿವೆ.

LEAVE A REPLY

Please enter your comment!
Please enter your name here