” ನಾನು ಎದುರಿಸುತ್ತಿರುವ ಸಮಸ್ಯೆ ಹೇಳಿಕೊಳ್ಳುವುದಕ್ಕೆ ನೋವಾಗುತ್ತದೆ. ಆಲೂರು–ಸಕಲೇಶಪುರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ಪುರಸಭೆ ಅಧ್ಯಕ್ಷರಾಗಿದ್ದರು. ಅವರು ಶಾಸಕರಾಗಿದ್ದಾಗ ಒಂದು ಹೆಂಚಿನ ಮನೆಯಲ್ಲಿ ಬಾಡಿಗೆಗೆ ಇದ್ವಿ. ಮನೆ, ಆಸ್ತಿ ಮಾರಿ ರಾಜಕಾರಣ ಮಾಡಿದರು ” – ಜಯಮ್ಮ
ಆಲೂರು–ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಜೆ.ಡಿ. ಸೋಮಪ್ಪ ಪತ್ನಿಗೆ ಪಿಂಚಣಿಯನ್ನು 25 ತಿಂಗಳಿಂದ ತಡೆ ಹಿಡಿಯಲಾಗಿದೆ. ಇದು, ವಿವಿಧ ಕಾಯಿಲೆಗಳಿಂದ ನರಳುತ್ತಿರುವ ಅವರ ಚಿಕಿತ್ಸೆಗೆ ಆರ್ಥಿಕ ಸಮಸ್ಯೆ ಉಂಟಾಗಿದೆ. , ಪಟ್ಟಣದ ಲಕ್ಷ್ಮಿಪುರ ಬಡಾವಣೆಯಲ್ಲಿ ವಾಸವಿರುವ 79 ವರ್ಷದ ಜಯಮ್ಮ ಎದ್ದು ನಡೆದಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಇವರೆಗೆ 7 ಲಕ್ಷ ಖರ್ಚಾಗಿದ್ದು, ಈ ಹಣವನ್ನೂ ಸರ್ಕಾರ ನಾಲ್ಕು ವರ್ಷಗಳಿಂದ ನೀಡಿಲ್ಲ. , ಆರಂಭದಲ್ಲಿ
22ಸಾವಿರ ಪಿಂಚಣಿ ಬರುತ್ತಿತ್ತು. ಏರಿಕೆಯಾದಂತೆ 36 ಸಾವಿರ ಬರುತ್ತಿತ್ತು. ಬ್ಯಾಂಕ್ ಅಧಿಕಾರಿಗಳು ತಪ್ಪಾಗಿ ಅವರ ಖಾತೆಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು 10– 11 ಸಾವಿರ ಹಾಕಿದ್ದಾರೆ. ಹೆಚ್ಚುವರಿ ಹಣ ಹಾಕಿದ ಬಗ್ಗೆ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅದೇ ಕಾರಣಕ್ಕೆ 25 ತಿಂಗಳಿಂದ ಪಿಂಚಣಿ ಬಂದಿಲ್ಲ. ಈ ಬಗ್ಗೆ ವಿಧಾನಸಭೆ ಸಚಿವಾಲಯ, ಖಜಾನೆ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ
ಪ್ರಯೋಜನವಾಗಿಲ್ಲ. ಪ್ರತಿ ವರ್ಷ ‘ಲೈಫ್ ಸರ್ಟಿಫಿಕೆಟ್’ ಅನ್ನು ಬ್ಯಾಂಕ್‌ಗೆ ಸಲ್ಲಿಸಿದ್ದಾರೆ. ,ಬೆಂಗಳೂರಿಗೆ ಬಸ್‌ನಲ್ಲೇ ಹೋಗಿ ಬರುತ್ತಿದ್ದರು. ಜನರಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದರೇ ಹೊರತು ಆಸ್ತಿ ಮಾಡಲಿಲ್ಲ. ಆ ಬಗ್ಗೆ ನನಗೇನೂ ಬೇಸರವಿಲ್ಲ. ಪಿಂಚಣಿ ಹಣದಲ್ಲಿ ಬದುಕುತ್ತಿದ್ದೇನೆ. ಆದರೆ, 2021ರ ಜನವರಿಯಿಂದ ಪಿಂಚಣಿ ನಿಲ್ಲಿಸಿರುವುದರಿಂದ ಆಸ್ಪತ್ರೆ ಹಾಗೂ
ಇತರ ವೆಚ್ಚಕ್ಕಾಗಿ ಸಂಬಂಧಿಕರ ಬಳಿ ಸಾಲ ಮಾಡಿದ್ದೇನೆ. ಹಣಕ್ಕೆ ಪರದಾಡುತ್ತಿದ್ದೇನೆ’ , ‘ಪಿಂಚಣಿ ಕೆನರಾ ಬ್ಯಾಂಕ್ ಖಾತೆಗೆ ಬರುತ್ತಿತ್ತು. ಬ್ಯಾಂಕ್, ಖಜಾನೆ ಇಲಾಖೆ, ವಿಧಾನಸೌಧ ಸುತ್ತಾಡಿ ಸುಸ್ತಾಗಿದ್ದೇನೆ. ಕೂಡಲೇ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅಧಿಕಾರಿಗಳಿಗೆ ಸೂಚಿಸಿದ್ದರ. ಆದರೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಪಿಂಚಣಿ ಬಾರದಿರಲು ಕಾರಣವೇ ತಿಳಿಯುತ್ತಿಲ್ಲ’ ಎಂದು ನೋವು ತೋಡಿಕೊಂಡರು. , ‘ನಾನೂ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯೊಂದಿಗೆ ಮಾತನಾಡಿದ್ದೇನೆ. ತಾಂತ್ರಿಕ ಕಾರಣಗಳನ್ನು ಹೇಳಿ ಪಿಂಚಣಿ ನೀಡದಿರುವುದು ಸರಿಯಲ್ಲ’ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ ತಿಳಿಸಿದರು. ‘ಪಿಂಚಣಿ ಸ್ಥಗಿತವಾಗಿರುವ ಬಗ್ಗೆ ನಮ್ಮ ಗಮನಕ್ಕೂ ತಂದಿದ್ದರು. ಕಡತವನ್ನು ವಿಧಾಸಸಭೆ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ
ಮಾಹಿತಿಗಾಗಿ ಕಾಯಲಾಗುತ್ತಿದೆ’ ಎಂದು ಹಿಂದಿನ ತಹಶೀಲ್ದಾರ್ ಎಚ್.ಬಿ. ಜಯಕುಮಾರ್ ಹೇಳಿದರು. , ‘2018ರಿಂದ 2020ರ ನಡುವೆ ಸರ್ಕಾರ ನಿಗದಿಗೊಳಿಸಿರುವ ಪಿಂಚಣಿ ಮೊತ್ತಕ್ಕಿಂತ ಪ್ರತಿ ತಿಂಗಳು 10 ರಿಂದ 11 ಸಾವಿರದಷ್ಟು ಹೆಚ್ಚುವರಿ ಹಣವನ್ನು ಅಧಿಕಾರಿಗಳು ಬ್ಯಾಂಕ್ ಖಾತೆಗೆ ಜಮಾ ಮಾಡಿದರು. ಅದೇ ಸಮಯದಲ್ಲಿ ಅಮ್ಮ ಸ್ಪೈನಲ್ ಕಾರ್ಡ್ ಚಿಕಿತ್ಸೆಗಾಗಿ ವರ್ಷವೆಲ್ಲಾ ಬೆಂಗಳೂರಿನ ಆಸ್ಪತ್ರೆ, ವಿಶ್ರಾಂತಿಯಲ್ಲಿಯೇ ಇದ್ದರು. 2021ರ ಜನವರಿಯಿಂದ ಪಿಂಚಣಿ ಸಂಪೂರ್ಣ ತಡೆಹಿಡಿದಿದ್ದಾರೆ’ ಎಂದು ಪುತ್ರ ಹೇಮಂತಕುಮಾರ್ ಜೆ.ಡಿ. ತಿಳಿಸಿದರು.
‘ಅದು ಅಧಿಕಾರಿಗಳ ಕಣ್ತಪ್ಪಿನಿಂದ ಆಗಿರುವ ತಾಂತ್ರಿಕ ದೋಷ. 25 ತಿಂಗಳಿಂದ ಸುಮಾರು 7.5 ಲಕ್ಷಕ್ಕೂ ಹೆಚ್ಚು ಪಿಂಚಣಿ ಹಣ ಬರಬೇಕು. ಇವರ ಖಾತೆಗೆ ಹಾಕಿರುವ ಹೆಚ್ಚುವರಿ ಕಳೆದರೂ ₹ 2 ಲಕ್ಷ ಬಾಕಿ ಬರಬೇಕು. ತಪ್ಪು ಮಾಡಿರುವ ಅಧಿಕಾರಿಗಳ ಬಗ್ಗೆ ಸರ್ಕಾರ ತನಿಖೆ ನಡೆಸಲಿ. ತಡೆಹಿಡಿದಿರುವ ಪಿಂಚಣಿ ಹಣ ಬಿಡುಗಡೆ ಮಾಡಬೇಕು’ ಎಂದರು