ಮಾವಿನಕೆರೆಯ ಶ್ರೀಲಕ್ಷಿ ವೆಂಕಟರಮಣಸ್ವಾಮಿ ಹಾಗೂ ಬೆಟ್ಟದ ಶ್ರೀ ರಂಗನಾಥಸ್ವಾಮಿ ರಥೋತ್ಸವ

0

ಸಡಗರದ ಶ್ರೀ ರಂಗನಾಥಸ್ವಾಮಿ ರಥೋತ್ಸವ
ಹೊಳೆನರಸೀಪುರ : ತಾಲೂಕಿನ ಹಳೇಕೋಟೆ ಹೋಬಳಿಯ ಮಾವಿನಕೆರೆಯ ಶ್ರೀಲಕ್ಷಿ ವೆಂಕಟರಮಣಸ್ವಾಮಿ ಹಾಗೂ ಬೆಟ್ಟದ ಶ್ರೀ ರಂಗನಾಥಸ್ವಾಮಿ ರಥೋತ್ಸವವು ಭಾನುವಾರ ಶ್ರೀ ವೈಖಾನಸಾಗಮ ರೀತ್ಯಾ ಸಂಭ್ರಮ ಸಡಗರದಿಂದ ನೆರವೇರಿಸಲಾಯಿತು.
ಮುಂಜಾನೆ ದೇವಾಲಯದ ಉತ್ಸವ ಮೂರ್ತಿಗೆ

ಪಂಚಾಮೃತ ಅಭಿಷೇಕ, ಆರ್ಚನೆ, ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಬಳಿಕ ಸೂರ್ಯ ಮಂಡಲೋತ್ಸವ, ನಿತ್ಯಾರಾಧನೆ, ಬಲಿಪ್ರಧಾನ, ಕೃಷ್ಣಗಂಧೋತ್ಸವ ನಡೆಸಲಾಯಿತು. ನಂತರ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.
ಬೆಳಗ್ಗೆ 11 ರಿಂದ 11.30ಕ್ಕೆ ಸಲ್ಲುವ ಪುಷ್ಯ ನಕ್ಷತ್ರದಲ್ಲಿ ಶಾಸಕ ಹೆಚ್.ಡಿ.ರೇವಣ್ಣ ದಂಪತಿಗಳು ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು

ಗೋವಿಂದನ ನಾಮಸ್ಮರಣೆ ಮಾಡುತ್ತ ರಥಬೀದಿಯಲ್ಲಿ ತೇರನ್ನು ಎಳೆದರು. ಭಕ್ತರು ಹಣ್ಣು ಜವನ ರಥಕ್ಕೆ ಎಸೆದು ಭಕ್ತಿಯನ್ನು ಸಮರ್ಪಿಸಿ ಪುನೀತರಾದರು.
ವೇ.ಬ್ರ.ಶ್ರೀ ವಿದ್ವಾನ್ ಶ್ರೀನಿವಾಸ ಭಟ್ಟರ ನೇತೃತ್ವದಲ್ಲಿ ಆರ್ಚಕ ಎಂ.ಎಸ್.ಜನಾರ್ಧನ ಹಾಗೂ ಸಹಾಯಕರು ಜಾತ್ರಾ ಮಹೋತ್ಸವದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ದೇವಾಲಯದ ಜೀರ್ಣೋದ್ಧಾರ ಕಾರ್ಯ ಜರಗುತ್ತಿರುವ ಕಾರಣದಿಂದ ಸಂಪ್ರದಾಯದ ಆಚರಣೆಗೆ ಭಂಗವಾಗದತೆ ಪೂಜಾ ಕೈಂಕರ್ಯಗಳು ಜರುಗಿತು.
ಹಳೇಕೋಟೆ ಬೆಟ್ಟದ ಮೇಲಿನ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಹಿರಿಯ ಅರ್ಚಕರಾದ ಕೇಶವಮೂರ್ತಿಗಳು ಹಾಗೂ

ಗೋಪಾಲಭಟ್ಟರ ನೇತೃತ್ವದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಆರ್ಚನೆ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿ, ರಥೋತ್ಸವ ನಡೆಸಲಾಯಿತು.
ಪೂಜಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತಾಧಿಗಳಿಗೆ ಪಟ್ಟಣದ ದೊಡ್ಡಮನೆ ಕುಟುಂಬದವರು ಮತ್ತು ಗೊರೂರು ಅಡ್ಡೋಣಿ ಕುಟುಂಬ ಸದಸ್ಯರು ಬೋಜನದ ವ್ಯವಸ್ಥೆ ಮಾಡಿದ್ದರು.
ಪೂಜಾ ಮಹೋತ್ಸವದಲ್ಲಿ

ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಗ್ರಾ.ಪಂ. ಅಧ್ಯಕ್ಷ ಸೂರ್ಯಕುಮಾರ್, ಉಪ ತಹಸೀಲ್ದಾರ್ ಶಿವಕುಮಾರ್, ಡಿವೈಎಸ್ಪಿ ಕೆ.ಮುರಳೀಧರ, ತಾಲೂಕಿನ ಪಿಎಸ್ಸೆಗಳಾದ ಅರುಣ್, ವಿನಯ್ ಕುಮಾರ್ ಹಾಗೂ ಅಶ್ವಿನಿ, ಸತೀಶ್, ಹರೀಶ್ ಬಣಕರ್, ಮಹತೇಂಶ್, ಗ್ರಾಮದ ಹಿರಿಯರಾದ ಶೆಟ್ಟಿಗೌಡ, ಸುಬ್ಬರಾಜು, ಜಯಪ್ರಕಾಶ್, ಅಶೋಕ, ಸೀತರಾಮು, ಸೋಮಶೇಖರ, ವಸಂತಕುಮಾರ್, ರಮೇಶ್, ಚಂದ್ರು, ಸುಶೀಲಮ್ಮ, ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here