ಹಾಸನ ಡಿ.19.(ಹಾಸನ್_ನ್ಯೂಸ್) !, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಡಿ.24 ರಂದು ಬೆಳಿಗ್ಗೆ 9 ಗಂಟೆಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಯುಜನೋತ್ಸವ ಕಾರ್ಯಕ್ರಮ ಏರ್ಪಡಿಸಿದೆ.
![](https://hassananews.com/wp-content/uploads/2020/12/image-asset.jpeg)
ಈ ಯುವಜನೋತ್ಸವದಲ್ಲಿ ಜಿಲ್ಲೆಯ 15 ರಿಂದ 29 ವರ್ಷ ಒಳಪಟ್ಟ ಎಲ್ಲಾ ಯುವಕ ಸಂಘ/ಯುವತಿ ಮಂಡಳಿ/ಮಹಿಳಾ ಮಂಡಳಿ /ಕಾಲೇಜು ವಿದ್ಯಾರ್ಥಿಗಳು, ಭಾಗವಹಿಸಬಹುದಾಗಿದೆ.
![](https://hassananews.com/wp-content/uploads/2020/12/maxresdefault-2-1.jpg)
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಸ್ಫರ್ಧಿಗಳು ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
![](https://hassananews.com/wp-content/uploads/2020/12/39453730_1782148775213919_395407033005768704_n.jpg)
ಸ್ಫರ್ಧಿಗಳು ಕಡ್ಡಾಯವಾಗಿ ತಮ್ಮ ಜನ್ಮ ದಿನಾಂಕದ ದೃಡೀಕರಣದ ಬಗ್ಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ ಶಾಲೆಯ ಮುಖ್ಯೋಪಾದ್ಯಾಯರು ನೀಡಿದ ಜನ್ಮ ದಿನಾಂಕದ ಪ್ರಮಾಣ ಪತ್ರ ಕಡ್ಡಾಯವಾಗಿ ತರತಕ್ಕದ್ದು. ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ.
![](https://hassananews.com/wp-content/uploads/2020/12/Vidushi-Pratima-Atreya-copy-1.jpg)
ಕೋವಿಡ್-19 ಹಿನ್ನೆಲೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮಾತ್ರ ಪ್ರವೇಶವಿದೆ. ಮದ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.
![](https://hassananews.com/wp-content/uploads/2020/12/xpandithananthabhagawathcopy-1540543020-1540543604.jpg)
ಯುವಜನೋತ್ಸವದಲ್ಲಿ ನಡೆಸುವ ಸ್ಪರ್ಧೆಗಳ ವಿವರ: 1) ಜಾನಪದನೃತ್ಯ, (ತಂಡ ಸ್ಪರ್ಧೆ)(20 ಜನರ ತಂಡ)- 15 ನಿಮಿಷ, (2) ಜಾನಪದ ಗೀತೆ, (ತಂಡ ಸ್ಪರ್ಧೆ) (10 ಜನರ ತಂಡ) – 07 ನಿಮಿಷ, (3) ಏಕಾಂಕ ನಾಟಕ (ಹಿಂದಿ ಅಥವಾ ಇಂಗ್ಲೀಷಿನಲ್ಲಿ) -45 ನಿಮಿಷ, (04) ಶಾಸ್ತ್ರೀಯ ಗಾಯನ – ಹಿಂದೂಸ್ತಾನಿ ಮತ್ತು ಕರ್ನಾಟಕ (ವೈಯಕ್ತಿಕ)-15 ನಿಮಿಷ, (05) ಶಾಸ್ತ್ರೀಯ ವಾದ್ಯಗಳು: ಸಿತಾರ್, ತಬಲ, ಕೊಳಲು, ವೀಣೆ, ಮೃದಂಗ (ವೈಯಕ್ತಿಕ)-15 ನಿಮಿಷ, (06) ಹಾರ್ಮೋನಿಯಂ, (ವೈಯಕ್ತಿಕ)- 10 ನಿಮಿಷ (07) ಗಿಟಾರ್, (ವೈಯಕ್ತಿಕ)-10 ನಿಮಿಷ, 08) ಶಾಸ್ತ್ರೀಯ ನೃತ್ಯ – ಭರತನಾಟ್ಯ, ಕಥಕ್, ಕೂಚಿಪುಡಿ, ಮಣಿಪುರಿ, ಓಡಿಸ್ಸಿ (ವೈಯಕ್ತಿಕ)-15 ನಿಮಿಷ, 09) ಆಶುಬಾಷಣ (ಹಿಂದಿ ಅಥವಾ ಇಂಗ್ಲೀಷಿನಲ್ಲಿ) (ವೈಯಕ್ತಿಕ)- 4 ನಿಮಿಷ
![](https://hassananews.com/wp-content/uploads/2020/12/file74rc97znp0x21serm581554294122.jpg)
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಸನ ಇವರನ್ನು ಖುದ್ದಾಗಿ ಅಥವಾ ದೂ.ಸಂ 08172-246056(296256), 9663801689 ಸಂಪರ್ಕಿಸಬಹುದಾಗಿದೆ.
![](https://hassananews.com/wp-content/uploads/2020/12/janapada-1.jpg)
![](https://hassananews.com/wp-content/uploads/2020/12/maxresdefault-1-2.jpg)