ಸಕಲೇಶಪುರ, ಯಸಳೂರು :
ಪೊಲೀಸ್ ಸಿಬ್ಬಂದಿಯೊಬ್ಬರು ಗದಗದ ಬಡ ಪ್ಲಾಸ್ಟಿಕ್ ಟೇಬಲ್ ಮಾರಾಟಗಾರನಿಗೆ ಥಳಿಸಿರುವ ಘಟನೆ ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೇಳಿದಷ್ಟು ಹಣಕ್ಕೆ ಪ್ಲಾಸ್ಟಿಕ್ ಟೇಬಲ್ ಕೊಡಲಿಲ್ಲ ಎಂದು ಪೊಲೀಸ್ ಸಿಬ್ಬಂದಿ ಮಣಿ ಕುಮಾರ್ ಬಡ ಪ್ಲಾಸ್ಟಿಕ್ ವ್ಯಾಪಾರಿ ಅರ್ಜುನ್ ನನ್ನು ತನ್ನ ಕೋಣೆಗೆ ಕರೆದೊಯ್ದು ಲಾಠಿ ಮತ್ತು ಬೆಲ್ಟ್ ದಿಂದ ಹಲ್ಲೆ ಮಾಡಿದ್ದಾರೆ ಹಾಗೂ ಮಣಿ ಕುಮಾರ್ ವಿರುದ್ಧ ಯಸಳೂರು ಪೊಲೀಸ್ ಠಾಣೆಗೆ ಅರ್ಜುನ್ ದೂರು ನೀಡಿದ್ದು , ಎಸ್ ಪಿ ಹರಿರಾಮ್ ಶಂಕರ್ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.