ಬಿಜೆಪಿ ಜೆಡಿಎಸ್ ಮೈತ್ರಿ ಕುರಿತು ಮಾಜಿ ಶಾಸಕ ಪ್ರೀತಂ ಜೇ ಗೌಡ ಪ್ರತಿಕ್ರಿಯೆ

0

ಹಾಸನ : ಬಿಜೆಪಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ಆದರೆ ಜೆಡಿಎಸ್ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ, ಅವರು ನಮ್ಮ ಪಕ್ಷ ಬಂದಿರುವ ಅತಿಥಿಯಷ್ಟೇ ಎಂದು ಮಾಜಿ ಶಾಸಕ ಪ್ರೀತಂಗೌಡ ಪರೋಕ್ಷವಾಗಿ ಟೀಕಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ, 303 ಸೀಟ್ ತಗೊಂಡಿರುವವರ ಹತ್ತಿರ ಒಂದು ಸೀಟ್ ಇರುವವರು ಬಂದಿದ್ದಾರೆಯೇ ಹೊರತು ನಾವು ಅವರ ಬಳಿ ಹೋಗಿಲ್ಲ ಎಂದು ಹೇಳಿದರು.

ಬಂದಿರುವಂತಹ ನೆಂಟರು ಯಾರು ಮನೆಯಲ್ಲಿ ಇರುತ್ತಾರೆ, ಅವರ ತತ್ವ, ಸಿದ್ಧಾಂತ, ರಾಷ್ಟ್ರೀಯತೆ ಎಲ್ಲಾ ಮೈಗೂಡಿಸಿಕೊಳ್ಳಬೇಕು, ನಮ್ಮದು ರಾಷ್ಟ್ರೀಯತೆ, ದೇಶ ಮೊದಲು ವ್ಯಕ್ತಿ ಕೊನೆ ಎಂಬುದು ಅಜೆಂಡಾವನ್ನು ನಮ್ಮ ಬಿಜೆಪಿ ಪಕ್ಷ ಹೊಂದಿದ್ದು, ಅದನ್ನೆಲ್ಲಾ ಒಪ್ಪಿಕೊಂಡು ಬಂದಿದ್ದಾರೆ ಎಂದರು.

ನಮ್ಮಲ್ಲಿ ವಂಶಪಾರಂಪಾರಿಕ ಆಡಳಿತಕ್ಕೆ ಅವಕಾಶ ಇರುವುದಿಲ್ಲ, ಹಾಗೆಯೇ ನಮ್ಮಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇರುವುದಿಲ್ಲ. ಹೇಳಿದರು. ಅದನ್ನು ಮನದಟ್ಟು ಮಾಡಿಕೊಂಡು, ನರೇಂದ್ರಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕೆಂದು ಬಂದಿರುವುದು ಬಹಳ ಸ್ವಾಗತ ಮಾಡುವಂತಹ ವಿಚಾರ ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರೀತಂಗೌಡ, ನನ್ನ ಬದಲಿಗೆ ಬೇರೆಯವರಿಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ, ಸಿಟ್ಟಿಂಗ್ ಇರುವವರು ಸಿಟ್ಟಿಂಗ್ ಇರಬೇಕೆಂದಿಲ್ಲ. ಸ್ಟಾಂಡಿಂಗ್ ಆಗಬಹುದು, ಬೇರೆಯವರು ಸಿಟ್ಟಿಂಗ್ ಆಗಬಹುದೇನೋ ಕಾದುನೋಡೋಣ ಎಂದರು.

ಸೀಟ್ ಹಂಚಿಕೆ ಇನ್ನೂ ತೀರ್ಮಾನ ಆಗಿಲ್ಲ. ಆ‌ ಪಿಐ ಕೂಡ

ಹಾಸನವನ್ನು ಕೇಳುತ್ತಿದ್ದಾರೆ, ಗೆಲುವು ಒಂದೇ ಮಾನದಂಡ, ನಾವೆಲ್ಲ ಕುಳಿತು ತೀರ್ಮಾನ ಮಾಡುತ್ತೇವೆ. ಗಣಪತಿ ಮುಂದೆ ಹೇಳುತ್ತಿದ್ದೇನೆ, ಬಿಜೆಪಿಯ ಕಾರ್ಯಕರ್ತನೇ ಅಭ್ಯರ್ಥಿಯಾಗಿ ಅವರೇ ಬೆ೦ಬಲ ಕೊಡಬೇಕಾಗಿ ಬರಬಹುದು, ಗಣೇಶನ ಆಶೀರ್ವಾದ ಇದೆ, ಯಾರಿಗೆ ಗೊತ್ತು, ಹೇಗೆ ಏನು ಬೇಕಾದರೂ ಬದಲಾಗಬಹದು ಎಂದರು.

ನಮ್ಮ ಆಚಾರ, ವಿಚಾರವನ್ನು ಅವರು ಒಪ್ಪಿಕೊಳ್ಳಲಿ, ನಾನು ಫ್ರೆಂಡ್ಲಿಯಾಗಿ ಹೋಗಲ್ಲ, ಅವರು ಬಂದಿರೋದು, ಅವರು ಫ್ರೆಂಡ್ಲಿಯಾಗಿ ಇರಬೇಕು ಅಷ್ಟೆ. ನಮ್ಮ ಮನೆಗೆ ಗೆಸ್ಟ್ ಬಂದಿರೋದು, ಕಾಫಿ, ಟೀ, ಊಟನೂ ಕೊಡ್ತಿವಿ, ನಾವು ಕೊಡುವ ಮೆನು ಊಟ ಮಾಡಬೇಕಷ್ಟೆ. ಅವರು ನನಗೆ ಇದೇ ಬೇಕು, ಅದೇ ಬೇಕು ಅಂತ ಹೇಳಬಾರದು, ಏಕೆಂದರೆ ಅವರು ನಮ್ಮ ಮನೆಗೆ ಬಂದಿದ್ದಾರೆ. ಅಲ್ಲದೆ ನಮ್ಮ ರಾಷ್ಟ್ರೀಯ ನಾಯಕರು ಗೆಸ್ಟ್‌ಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ, ಅದಕ್ಕೆ ಅವರನ್ನು ಒಳ್ಳೆಯ ರೀತಿ ನೋಡಿಕೊಳ್ಳುತ್ತೇವೆ, ಅತಿಥಿ ಸತ್ಕಾರ ಮಾಡುತ್ತೇನೆ ಎಂದು

ಸರಿಯಾಗಿ ಟ್ರಿಬ್ಯೂನಲ್‌ಗೆ ಅರ್ಥ ಮಾಡಿಸಿ

ತಮಿಳುನಾಡಿಗೆ ನೀರು ಬಿಡುಗಡೆ ವಿಚಾರವಾಗಿ ಪ್ರತಿಕ್ರಯಿಸಿದ ಅವರು, ಬರಗಾಲ ಎರಡು ಮೂರು ವರ್ಷ ಸತತವಾಗಿ ಇರುತ್ತದೆ. ಆದರೆ ನಾವು ಈ ವರ್ಷ ಎಷ್ಟು ನೀರು ಬೇಕು ಅಂತ ತಮಿಳುನಾಡು ಜೊತೆ ವಾದ ಮಾಡುತ್ತಿದ್ದೇವೆ. ಮುಂದಿನ ಎರಡು ಮೂರು ವರ್ಷಕ್ಕೆ ಕುಡಿಯುವ ನೀರಿಗೆ ಸಮಸ್ಯೆ ತಲೆದೋರದ ರೀತಿಯಲ್ಲಿ ಎಷ್ಟು ಟಿಎಂಸಿ ನೀರು ಬೇಕು ಎನ್ನುವ ಅಂಕಿ ಅಂಶವನ್ನು ಕೋರ್ಟ್‌ಗೆ ತಿಳಿಸಬೇಕು ಎಂದರು.

ಮುಂದಿನ ವರ್ಷ ಮಳೆ ಬರುತ್ತದೆ ಎಂದು ಯಾರಾದರೂ ಸಚಿವ ರಾಮಲಿಂಗೇಗೌಡ ಹೇಳಿಕೆಗೆ ಪ್ರೀತಂ ಆಕ್ರೋಶ

ಶಿವಮೊಗ್ಗ ಗಲಾಟೆ ಪ್ರಕರಣ ಹಾಗೂ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ವಿಚಾರಕ್ಕೆ ಮಾಜಿಶಾಸಕ ಪ್ರೀತಂಗೌಡ ಆಕ್ರೋಶ ವ್ಯಕ್ತಪಡಿಸಿ ದರು. ಶಿವಮೊಗ್ಗದಲ್ಲಿ ಪದೇ ಪದೇ ಜಿಹಾದಿ ಮನಸ್ಥಿತಿ, ದೇಶ ವಿರೋಧಿ ಇರುವಂತಹ ವ್ಯಕ್ತಿಗಳು ಇಡೀ ಸಮಾಜದ ಶಾಂತಿಯನ್ನು ಕದಡುವ ಕೆಲಸ ಮಾಡ್ತಿದ್ದಾರೆ. ಯಾರು ಮಂತ್ರಿಗಳಿಗೆ ಫೀಡ್‌ ಬ್ಯಾಕ್ ಎಂದರು. ಕೊಡ್ತಾರೋ, ಅವರ ಮನಸ್ಥಿತಿ ಏನಿದೆಯೋ ಗೊತ್ತಿಲ್ಲ ಎಂದರು.

ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲು ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡ್ತಾರೆ, ಯಾಕೆ ಈ ಆತುರ ನಿರ್ಧಾರ ಮಾಡುತ್ತಾರೆ ? ಇವತ್ತು ರಾಗಿಗುಡ್ಡದಲ್ಲಿ ಆಗಿರುವುದು ನಾಳೆ ಹಾಸನದಲ್ಲಿ ಆದರೆ, ಬಿಟಿಎಂ ಲೇಔಟ್‌ನಲ್ಲಿ ಆದರೆ, ರಾಮಲಿಂಗಾರೆಡ್ಡಿ ಅವರ ಮನೆ ಮೇಲೆ ಆದರೆ ಯಾರೂ ಜವಾಬ್ದಾರರು ಎಂದು ಪ್ರಶ್ನಿಸಿದ ಅವರು, ಬೇಸಿಕ್ ಕಾಮನ್‌ ಸೆನ್ಸ್ ಇಲ್ಲದೆ ತುಷ್ಟಿಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೆಸ್ಟ್‌ಬೆಂಗಾಲ್‌ನಲ್ಲಿ ಏನು ನಡೆಯುತ್ತಿದೆ, ಜಮ್ಮುಕಾಶ್ಮೀರನಲ್ಲಿ 370 ರದ್ದು ಮಾಡುವ ಮುಂಚೆ ಯಾವ ಪರಿಸ್ಥಿತಿ ಇತ್ತು ? ಆ ಪರಿಸ್ಥಿತಿ ಕರ್ನಾಟಕಕ್ಕೆ ತರಲು ಹೊರಟಿದ್ದಾರೆ. ರಾಮಲಿಂಗಾರೆಡ್ಡಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ

ನಿಮಗು ಮಕ್ಕಳು, ಮೊಮ್ಮಕ್ಕಳು, ಮುಂದಿನ ಪೀಳಿಗೆ ಇದೆ. ಅವರಿಗೆ ಸಮಾಜ ಒಳ್ಳೆಯ ರೀತಿ ಇರಬೇಕೆಂದರೆ ಈ ರೀತಿಯ ಮನಸ್ಥಿತಿ ಇರುವ ವ್ಯಕ್ತಿಗಳು ಯಾವುದೇ ಧರ್ಮದಲ್ಲಿದ್ದರು ಸಹಿಸುವ ಕೆಲಸ ಮಾಡಬಾರದು, ಯಾರು ಹೇಳಿಕೆ ಕೊಡುತ್ತಿದ್ದಾರೆ ಅವರಿಗೆ ಅವರ ಕುಟುಂಬಸ್ಥರು ಬುದ್ದಿ ಹೇಳಬೇಕಿದೆ. ಬೇರೆಯವರಿಗೆ ಜ್ವರ ಬಂದಿದೆ ಎಂದು ಹಣೆ ಮುಟ್ಟಿ ನೋಡಿದರೆ ಟೆಂಪ್ರೇಚರ್ ಗೊತ್ತಾಗುತ್ತೆ, ಅದು ಅವರಿಗೆಲ್ಲಿ ಗೊತ್ತಾಗುತ್ತೆ ಅವರೆಲ್ಲಾ ಎಸಿ ಕಾರಿನಲ್ಲಿ ಕುಳಿತಿರುತ್ತಾರೆ ಎಂದು ಟೀಕಿಸಿದರು.

4000 ಓಟು ಪಡೆದ ಪಕ್ಷಕ್ಕೆ ಹೋಗ್ತಿನಾ?

ನಿಮ್ಮನ್ನು ಕಾಂಗ್ರೆಸ್ ಗಾಳ ಹಾಕುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರೀತಂಗೌಡ ರಾಜಕಾರಣ ಬಂದಿರುವುದು ತತ್ವ ಸಿದ್ದಾಂತದ ಆಧಾರದ ಮೇಲೆ, ಆರು ಸಾವಿರ ಓಟು ಇದ್ದ ಪಕ್ಷಕ್ಕೆ ಬಂದಿದ್ದು, ಈಗ 78 ಸಾವಿರಕ್ಕೆ ಹೋಗಿದೆ ಇದನ್ನು ಬಿಟ್ಟು ನಾಲ್ಕು ಸಾವಿರ ಓಟು ಪಡೆದ ಪಕ್ಷಕ್ಕೆ ಹೋಗ್ತಿನಾ ಎಂದು ಮರುಪ್ರಶ್ನಿಸಿದರು.

ನಾವೇ ಮನೆ ಕಟ್ಟಿ, ಬಣ್ಣ ಹೊಡೆದು ಗೃಹಪ್ರವೇಶ ಮಾಡಿ, ಬೇರೆ ಹೊಸ ಮನೆ ಕಟ್ಟುವ ಅವಶ್ಯಕತೆ ಏನಿದೆ ? ನೆಂಟರು ಬಂದರು ಅಂತ ಹೇಳಿ ಬೇರೆ ಫಾರ್ಮ್‌ಹೌಸ್, ಗೆಸ್ಟ್‌ಹೌಸ್‌ ಹೋಗಿ ಮಲಗಲ್ಲ, ನಮ್ಮ ಮನೆ ಯಜಮಾನಿಕೆ ಮಾಡಲು ಕಾರ್ಯಕರ್ತರಿದ್ದಾರೆ, ಬಂದಿರುವ ನೆಂಟರು ಸೋಮವಾರ ನಾನ್‌ವೆಜ್ ಕೇಳಿದ್ರೆ ಸಿಗಲ್ಲ, ಶನಿವಾರ ನಾನ್‌ ವೆಜ್ ಇರಲ್ಲ. ಪಥ್ಯಗಳಿರುತ್ತೆ. ಇದು ನಮ್ಮ ಮನೆ ಪರಿಸ್ಥಿತಿ ಆಗಿರುತ್ತದೆ. ಅವರು ಬಂದು ನಾನ್‌ ವೆಜ್ ಅಂದರೆ ರಾಂಗ್ ಅಡ್ರೆಸ್ಸಿಗೆ ಬಂದಿದ್ದಾರೆ

ಸರ್ಕಾರಕ್ಕೆ ಬರೆದುಕೊಟ್ಟಿದ್ದಾರಾ, ಸರ್ಕಾರಕ್ಕೆ ಮಾಹಿತಿ ಇದೆಯಾ | ? ಯಾವತ್ತೂ ಕೂಡ ಸರ್ಕಾರ ನಡೆಸುವವರು ಮುಂದಿನ ಎರಡು | ಮೂರು ವರ್ಷಗಳ ಬಗ್ಗೆ ಯೋಚನೆ ಮಾಡಿ ತಮ್ಮ ನಿರ್ಧಾರ ಮಾಡಬೇಕು, ಸರ್ಕಾರ ಸರಿಯಾಗಿ ಟ್ರಿಬ್ಯೂನಲ್‌ಗೆ ಅರ್ಥ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಲವು ನಾಯಕರು ಸೇರ್ಪಡೆ | ವಿಚಾರಕ್ಕೆ ಉತ್ತರಿಸಿದ ಪ್ರೀತಂಗೌಡ ಅವರು, ಕಾಂಗ್ರೆಸ್‌ನಿಂದ ಬಿಜೆಪಿಗೆ ಕರೆದುಕೊಂಡು ಬರಲು ಇನ್ನೂ ಯಾವ ನಾಯಕರ ಜೊತೆಗೂ ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಗೆಲ್ಲುವ ದೃಷ್ಟಿಯಿಂದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯವಾಗಿ | ಕಾಂಗ್ರೆಸ್ ನಾಯಕರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದರು.

LEAVE A REPLY

Please enter your comment!
Please enter your name here