ಕನ್ನಡ ಕಾಯಕ ವರ್ಷದ ಅಂಗವಾಗಿ ಕನ್ನಡ ಜಾಗೃತಿ ಹಾಸನ ಜಿಲ್ಲಾ ಸಮಿತಿ ಸದಸ್ಯರುಗಳು ಈ ದಿನ ಲೀಡ್ ಬ್ಯಾಂಕ್ ಮುಖ್ಯಸ್ಥರಿಗೆ ಆಡಳಿತದಲ್ಲಿ ಕನ್ನಡ ಹಾಕ್ಕೊತ್ತಾಯ ಪತ್ರ ಸಲ್ಲಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ರೇವತಿ ಅವರು ಮಾತನಾಡಿ ಈಗಾಗಲೇ ಮೂರ್ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವ್ಯವಸ್ಥಾಪಕರುಗಳು ಕನ್ನಡದಲ್ಲೆ ವ್ಯವಹರಿಸುತ್ತುದ್ದಾರೆ ಹಾಗೂ ಎಲ್ಲಾ ಗ್ರಾಹಕರಿಗೆ ಕನ್ನಡದಲ್ಲೆ ಸೇವೆ ಒದಗಿಸುವಂತೆ ಸೂಚನೆ ನೀಡಲಾಗಿದೆ. ಎಂದು ಹೇಳಿದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿಯ ಬಿ.ಟಿ ಮಾನವ, ಜಯಶಂಕರ್ ಬೆಳಗುಂಬ, ದಯಾನಂದ್ ಸಕಲೇಶಪುರ, ಜಾವಗಲ್ ಪ್ರಸನ್ನ, ನವಾಬ್ ಬೇಲೂರು, ಹಾಗೂ ಮತ್ತಿತ್ತರರು ಹಾಜರಿದ್ದರು.