ಸಾಲಬಾಧೆ ? ಹಾಸನದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು !

0

ಹಾಸನ: ಸಾಲಬಾಧೆ? ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೇಮಾವತಿ ನಗರದಲ್ಲಿ ನಡೆದಿದೆ.

ಸತ್ಯಪ್ರಸಾದ್ (54), ಅನ್ನಪೂರ್ಣ (50), ಗೌರವ್ (21) ಸಾವಿಗೀಡಾದ ಒಂದೇ ಕುಟುಂಬದ ಸದಸ್ಯರುಗಳು. ಪತಿ-ಪತ್ನಿ ಹಾಗೂ ಪುತ್ರ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ನಿಖರ ಕಾರಣ ಗೊತ್ತಿಲ್ಲ. ಆದರೆ ಸ್ಥಳೀಯರ ಪ್ರಕಾರ ಕುಟುಂಬ ಇತ್ತಿಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.,

ಹಾಸನ ಮತ್ತು ಬೇಲೂರು ರಸ್ತೆಯ ಇಬ್ದಾಣೆ ಗ್ರಾಮದ ಸಮೀಪ ವೀರಭದ್ರೇಶ್ವರ ಪೆಟ್ರೋಲ್ ಬಂಕ್ ನೆಡೆಸುತ್ತಿದ್ದ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದರಿಂದ ಅದನ್ನು ಕೂಡಾ ಬೇರೆಯವರಿಗೆ ಬಿಟ್ಟುಕೊಟ್ಟಿದ್ದರು ಎನ್ನಲಾಗಿದ್ದು . ಇನ್ನು ಇತ್ತೀಚಿಗಷ್ಟೆ ಖಾಸಗಿ ಫೈನಾನ್ಸ್ ಮೂಲಕ ಐಷಾರಾಮಿ ಕಾರು ಖರೀದಿ ಮಾಡಿದ್ದರು. ಸಾಲದ ಸುಳಿಗೆ ಸಿಲುಕಿದ್ದರಿಂದ ಐಷಾರಾಮಿ ಕಾರನ್ನು ಮೂರುದಿನಗಳ ಹಿಂದಷ್ಟೆ ಕಾರನ್ನು ಸೀಜ಼್ ಮಾಡಲಾಗಿತ್ತು ಎನ್ನಲಾಗಿದೆ.

ಇನ್ನು ವಾರದ ಹಿಂದಷ್ಟೆ ಮಗನಿಗೆ ಉಪನಯನ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಮನೆಯಲ್ಲಿಯೇ ನೆರವೇರಿಸಿದ್ದರು. ಮೈಸೂರಿನಲ್ಲಿ ಓದುತ್ತಿದ್ದ ಮಗ ಇಂದು ಮತ್ತೆ ಕಾಲೇಜಿಗೆ ಹೋಗಬೇಕಿತ್ತು. ಇಂದು ಮೃತರ ಅತ್ತೆ ಸೀತಾಲಕ್ಷ್ಮಿ ಸೊಸೆ ಅನ್ನಪೂರ್ಣರನ್ನು ಎಬ್ಬಿಸಲು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.

ಸಂಬಂಧಿಕರು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಫೆ.22ರಂದು ಮನೆಯಲ್ಲಿ ಅದೇನೋ ಘಟನೆ ನಡೆದಿರಬಹುದೆಂದು ಊಹಿಸಲಾಗಿದ್ದು , ಮನನೊಂದ ಕುಟುಂಬ ಮರ್ಯಾದೆಗೆ ಅಂಜಿ ನೆನ್ನೆ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆನ್ಷನ್‌ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

LEAVE A REPLY

Please enter your comment!
Please enter your name here