ರೇಷನ್ ಕಾರ್ಡ್ ತಿದ್ದುಪಡಿಗೆ ದೊಡ್ಡ ಸಾಲು ; ನೆಟ್ ಸರ್ವರ್ ಸಮಸ್ಯೆಗೆ ಬೇಸೆತ್ತ ಜನತೆ

0

ಹಾಸನ: ರೇಷನ್ ಕಾರ್ಡ್ ತಿದ್ದುಪಡಿಗೆ ಸೆಪ್ಟಂಬರ್ 14 ಅಂತಿಮ ಗಡುವು ನೀಡಿದ್ದು, ಆದರೇ ಕಳೆ ಮೂರ‍್ನಾಲ್ಕು ದಿನಗಳಿಂದಲೂ ನೆಟ್ ಸರ್ವರ್ ಸಮಸ್ಯೆ ಎದುರಾಗಿದ್ದು, ಹಾಸನ ನಗರದ ಬಹುತೇಕ ನೆಟ್ ಪಾರ್ಲರ್ ಮುಂದೆ ಬೆಳಿಗ್ಗೆ 4 ಗಂಟೆಯಿಂದ ಸರದಿ ಸಾಲಿನಲ್ಲಿ ನಿಂತಿದ್ದವರು ಬೇಸರದಲ್ಲಿ ವಾಪಸ್ ತೆರಳಬೇಕಾಯಿತು. ಈಗಾಗಲೇ ರೇಷನ್ ಕಾರ್ಡ್ ಮಾಡಿಸಿರುವವರು ಏನಾದರೂ ಹೊಸದಾಗಿ ಹೆಸರು ಸೇರ್ಪಡೆ ಮಾಡಿಸಬೇಕೆಂದಿದ್ದರೇ ಈಗಾಗಲೇ ಸೆಪ್ಟಂಬರ್ 1 ರಿಂದ 10ರ ವರೆಗೂ ಅವಕಾಶ ನೀಡಿತ್ತು.

ನಂತರ ಮತ್ತೆ ಸೆಪ್ಟಂಬರ್ 14ರ ವರೆಗೂ ಕಾಲಾವಕಾಶ ನೀಡಿದ್ದು, ಆದರೇ ಕಳೆದ ಮೂರ‍್ನಾಲ್ಕು ದಿನಗಳಿಂದಲೂ ಸರ್ವರ್ ಸಮಸ್ಯೆಯಿಂದ ದಿನಕ್ಕೆ 10 ರೇಷನ್ ಕಾರ್ಡ್ ತಿದ್ದುಪಡಿ ಆಗುತ್ತಿದೆ. ಮಳೆ, ಛಳಿ ಎನ್ನದೇ ಸಾರ್ವಜನಿಕರು ತಿದ್ದುಪಡಿ ಮಾಡಿಸಲೂ ಬೆಳಿಗ್ಗೆ 4 ಗಂಟೆಯಿಂದಲೇ ನೆಟ್ ಪಾರ್ಲರ್ ಬಳಿ ಜಮಾಯಿಸುತ್ತಿದ್ದರು. ಸಂಜೆವರೆಗೂ ಸರದಿ ಸಾಲಿನಲ್ಲಿ ನಿಂತು ಬಂದ ಕೆಲಸ ಆಗದೇ ವಾಪಸ್ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಹೊಸದಾಗಿ ಹೆಸರು ಸೇರ್ಪಡೆ ಮಾಡಿಸಲೆಂದು ಮಕ್ಕಳನ್ನು ಕಳೆದ ಹಲವಾರು ದಿನಗಳಿಂದ ಶಾಲೆ ಬಿಡಿಸಿ ರಜೆ ಮಾಡಿ ಸರದಿ ಸಾಲಿನಲ್ಲಿ ನಿಂತಿದ್ದು, ಚಿಕ್ಕಮಕ್ಕಳ ಪಾಡು ಹೇಳ ತೀರಿದು. ಇನ್ನು ಮನೆಯ ನಿರ್ವಹಣೆ ಮಾಡುವ ಗೃಹಣಿಯೂ ಕೂಡ ತಿಂಡಿ ಊಟ ಸಿದ್ದಪಡಿಸಿದೇ ಸಾಲಿನಲ್ಲೆ ಉಳಿಯಬೇಕಾಯಿತು.

ಇದಲ್ಲದೇ ಕೆಲಸಕ್ಕೆ ಹೋಗುವವರು ಹಲವಾರು ದಿನಗಳಿಂದ ರಜೆ ಮಾಡಬೇಕಾದ ಪರಿಸ್ಥಿತಿ ಒಂದು ಕಡೆ ನಿರ್ಮಾಣವಾದರೇ ಇನ್ನೊಂದು ಕಡೆ ಸರ್ವರ್ ಸಮಸ್ಯೆ ಎದುರಾಗಿ ಬಂದ ಕೆಲಸವು ಆಗದೇ ನಿರಾಸೆಯಲ್ಲಿ ವಾಪಸ್ ತೆರಳಿದ ಸಂಗತಿ ಎದುರಾಯಿತು. ಇಂಟರ್ ನೆಟ್ ಸರ್ವರ್ ಪ್ರಾಬ್ಲಂನಿಂದ ಅನೇಕರದು ಪಡಿತರ ತಿದ್ದುಪಡಿ ಆಗಿರಲಿಲ್ಲ. ಇನ್ನಷ್ಟು ದಿವಸಗಳ ಕಾಲ ಕಾಲಾವಕಾಶ ಕೊಡಬೇಕೆಂದು ಇದೆ ವೇಳೆ ಪಡಿತರ ಕಾರ್ಡ್‌ದಾರರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here