ಹಾಸನ,ಅ.17(ಹಾಸನ್_ನ್ಯೂಸ್) !, ನಗರದ ಎ.ಪಿ.ಎ ಎಜುಕೇಷನ್ ಟ್ರಸ್ಟ್ ಪೆನ್ಷನ್ ಮೊಹಲ್ಲಾ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಎ.ಪಿ.ಎ ಅಕಾಡೆಮಿ ಹಿರಿಯ ಪ್ರಾಥಮಿಕ ಶಾಲೆ, 5ನೇ ಕ್ರಾಸ್, ಇಲಾಹಿ ನಗರ, ವಾರ್ಡ್ ನಂ 17, ಪೆನ್ ಷನ್ ಮೊಹಲ್ಲಾ, ಹಾಸನ, ಎ.ಪಿ.ಆರ್ ಅಕಾಡೆಮಿ ಕಿರಿಯ ಪ್ರಾಥಮಿಕ ಶಾಲೆ, ಹುಣಸಿನಕೆರೆ ಲೇಔಟ್ ವಿಶ್ವನಾಥನಗರ, 1ನೇ ಕ್ರಾಸ್, ಹಾಸನ ಮತ್ತು ಎ.ಪಿ.ಎನ್ ಅಕಾಡೆಮಿ ಕಿರಿಯ ಪ್ರಾಥಮಿಕ ಶಾಲೆ, ಬೈಪಾಸ್ ರಸ್ತೆ, ಬಿಟ್ಟಗೊಡನಹಳ್ಳಿ, ಗದ್ದೆಹಳ್ಳ, ಬಿ.ಎಂ ರಸ್ತೆ, ಹಾಸನ ಈ ಶಾಲೆಗಳ ಮಾನ್ಯತೆಯನ್ನು 2020-21 ನೇ ಸಾಲಿನಿಂದ ಜಾರಿಗೆ ಬರುವಂತೆ ಶಾಲೆಯ ಅನುಮತಿಯನ್ನು ಹಿಂಪಡೆದು ನೋಂದಣಿಯನ್ನು ರದ್ದುಗೊಳಿಸಿ ಶಾಲೆಯನ್ನು ಮುಚ್ಚಲು ಆದೇಶಿಸಲಾಗಿರುತ್ತದೆ.
ಸದರಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು, ಪೋಷಕರು ಹತ್ತಿರದ ಶಾಲೆಗಳಿಗೆ ದಾಖಲಿಸುವಂತೆ ಹಾಸನ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.