ಹಾಸನ: ಯಾವುದೇ ಒಂದು ದೇಶದಲ್ಲಿ ಸಮಾಜ ಬಲಿಷ್ಟವಾಗಬೇಕಾದರೇ ಅದು ಶಿಕ್ಷಕರ ಪಾತ್ರ ಹೆಚ್ಚು ಇರುತ್ತದೆ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಅಭಿಪ್ರಾಯಪಟ್ಟರು. ನಗರದ ಶ್ರೀ ಆದಿಚುಂಚನಗಿರಿ ಸಮುದಾಯಭವನದಲ್ಲಿ ಹಾಸನ ಜಿಲ್ಲಾ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ವೃತ್ತಿ ಎಂದರೇ ಬಹಳ ಶ್ರೇಷ್ಟವಾದ ವೃತ್ತಿಯಾಗಿದ್ದು, ಯಾರಾದರೂ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಎಂದು ಅದರಲ್ಲಿ ಶಿಕ್ಷಕರ ಪಾತ್ರ ಇದ್ದೆ ಇರುತ್ತದೆ.
ಈ ಸಮಾಜ ಬಲಿಷ್ಟವಾಗಬೇಕಾದರೇ ಶಿಕ್ಷಕರಿಂದ ಪಡೆದ ಶಿಕ್ಷಣದಿಂದ ಸಾಧ್ಯ. ಖಾಸಗೀ ಶಾಲೆ ಎಂದರೇ ಶ್ರೀಮಂತರದು ಎಂದು ಕೊಂಡಿದ್ದೇವೆ. ಆದರೇ ಅವರ ಕಷ್ಟ ಅವರಿಗೆ ಗೊತ್ತು ಎಂದರು. ಖಾಸಗೀ ಶಾಲೆಗಳಲ್ಲಿ ಉತ್ತಮ ಬೋಧನೆ ಕೊಡಲಾಗುತ್ತಿದೆ. ನಿಮ್ಮ ಬೇಡಿಕೆ ಏನಿದೆ ಅದು ಸರಕಾರದ ಮಟ್ಟದಲ್ಲಿ ಈಡೇರಲಿ ಎಂದು ಕೋರಿದರು. ಜಿಲ್ಲಾ ಸಂಘದ ಪದಾಧಿಕಾರಿಗಳಾದ ಬಿ.ಕೆ. ಗಂಗಾಧರ್ ಮಾತನಾಡಿ, ಎಲ್ಲಾರ ಸಹಕಾರದಲ್ಲಿ ಖಾಸಗೀ ಶಾಲೆಗಳಿಂದ ಪ್ರತಿ ವರ್ಷ ಇಂತಹ ಕಾರ್ಯಕ್ರಮವನ್ನು ಆಯೋಜಿಸಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.
ಜಿಲ್ಲಾ ಸಂಘದ ಪದಾಧಿಕಾರಿಗಳಾದ ತಾರ ಎಸ್. ಸ್ವಾಮಿ ಮಾತನಾಡಿ, ಖಾಸಗೀ ಶಾಲೆಗಳ ಕೆಲ ಸಮಸ್ಯೆಗಳ ಈಡೇರಿಕೆಗಾಗಿ ಹಲವಾರು ವರ್ಷಗಳಿಂದಲೂ ಸಂಘಟನೆ ಮೂಲಕ ಒಟ್ಟಾಗಿ ಹೋರಾಟ ಮಾಡುವ ಮೂಲಕ ಸರಕಾರದ ಗಮನಸೆಳೆಯಲಾಗಿದೆ. ಖಾಸಗೀ ಶಾಲೆಗಳ ಮೇಲೆ ಸರಕಾರದಿಂದ ಕಾನೂನುಗಳನ್ನು ಬಿಗಿ ಮಾಡಲಾಗಿದ್ದು, ಅದನ್ನು ಸಡಿಲಗೊಳಿಸಲು ಕಾನೋನಾತ್ಮಕ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು. ಕೊನೆಯಲ್ಲಿ ಉತ್ತಮ ಶಿಕ್ಷಕರನ್ನು ಇದೆ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಬಿ.ಈ. ಶಿವರಾಮೇಗೌಡ, ಶಿಕ್ಷಣ ತಜ್ಞರಾದ ದಾರವಾಡದ ಸುರೇಶ್ ವಿ. ಕುಲಕರ್ಣಿ, ಬೇಲೂರು ಕ್ಷೇತ್ರದ ಶಾಸಕ ಹೆಚ್.ಕೆ. ಸುರೇಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಸ್.ಟಿ. ಜವರೇಗೌಡ, ಹುಸ್ಮಾ ಗೌರವಾಧ್ಯಕ್ಷ ಡಾ, ಹೆಚ್.ಎಸ್. ಅನೀಲ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಮಂಜೂಳಾ, ಆಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ. ಕೃಷ್ಣೇಗೌಡ, ಬೇಲೂರಿನ ಕೆ.ಪಿ. ನಾರಾಯಣ್, ನಿರ್ದೇಶಕರಾದ ಆರ್. ಅನಂತಕುಮಾರ್, ಹೆಚ್.ಡಿ. ಕುಮಾರ್, ಬಿ.ಹೆಚ್. ಪ್ರಕಾಶ್, ಮಲ್ನಾಡ್ ಜಾಕೀರ್, ಗೌರವ ಸದಸ್ಯ ಹೆಚ್.ಎಸ್. ರಮೇಶ್ ಇತರರು ಉಪಸ್ಥಿತರಿದ್ದರು.