ಸರಳವಾಗಿ ವಿಶ್ವ ಕರ್ಮ ಜಯಂತಿ ಆಚರಣೆ

0

ಹೊಳೆನರಸೀಪುರ:ತಾತಾ ಹಳ್ಳಿಯ ರಂಗಸ್ಥಳದಲ್ಲಿ ಇಂದು ಸರಳವಾಗಿ ವಿಶ್ವ ಕರ್ಮ ಜಯಂತಿಯನ್ನು ಆಚರಿಸಲಾಯಿತು, ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಹೊಳೆನರಸೀಪುರ ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಗಂಗಾಧರಾಚಾರ್ ಅವರು ಉದ್ಘಾಟಿಸಿದರು,

ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ವಿಶ್ವ ಕರ್ಮ ಸಮಾಜ ಒಗ್ಗಟ್ಟಿನಿಂದ ಇದ್ದು, ಪಂಚ ಕಸುಬುಗಳನ್ನು, ಆಚರಣೆಯಲ್ಲಿ ಬಂದಿರುವ ರೂಢಿ ಪದ್ಧತಿಗಳನ್ನು ತಪ್ಪದೇ ಅನುಸರಿಸಿಕೊಂಡು ಬಂದು ಸಮಾಜದ ಏಳಿಗೆಗೆ ದುಡಿಯಬೇಕು, ರಾಜಕೀಯ ಶಕ್ತಿ ಪಡೆದು ಸಮಾಜದಲ್ಲಿ ಬಲಗೊಳ್ಳಬೇಕು, ಮತ್ತು ತಾತನ ಹಳ್ಳಿಯಲ್ಲಿ ಕುಲ ದೇವತೆಯಾದ
ಒಂದು ಕಾಳಿಕಾಂಬ ದೇವಾಲಯವನ್ನು ನಿರ್ಮಾಣ ಮಾಡಲು ಸಂಕಲ್ಪ ಮಾಡಬೇಕು ಅದಕ್ಕೆ ಶಕ್ತಾನುಸಾರ ತಾವು ಸಹಾಯ ಮಾಡುವುದಾಗಿ ಭರವಸೆಯನ್ನು ನೀಡಿದರು
ಇಂದಿನ ಸಮಾರಂಭದಲ್ಲಿ ತಾತಾನ ಹಳ್ಳಿ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಸೋಮಾಚಾರ್,
ತಾಲ್ಲೂಕು ಕಾರ್ಯದರ್ಶಿ ರೇವಣ್ಣಾಚಾರ್,
ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದ ಶಿವಕುಮಾರಾಚಾರ್, ಮತ್ತು ಮುಖ್ಯ ಅತಿಥಿಗಳಾಗಿ
ಸುಜ್ಞಾನಾಚಾರ್,ಮೋಕ್ಷಾಚಾರ್ ,ನಿಂಗಾಚಾರ್,
ಮತ್ತು ಶಿಕ್ಷಕರಾದ ವಿಜಯ್ ವಿನಯ್ ಮತ್ತು ಇನ್ನಿತರ
ವಿಶ್ವಕರ್ಮ ಬಂಧುಗಳು ಹಾಜರಿದ್ದರು.

ವರದಿ: ವಿಶ್ವಕವಿ ಹೊಳೆನರಸೀಪುರ

LEAVE A REPLY

Please enter your comment!
Please enter your name here