ಹಾಸನ: ಹೆಚ್ಚಿನ ಸುಂಕ ಪಡೆಯುವುದಲ್ಲದೇ ನಮ್ಮ ವ್ಯಾಪಾರಕ್ಕೂ ತೊಂದರೆ ಕೊಡಲಾಗುತ್ತಿದೆ ಎಂದು ಶುಕ್ರವಾರದಂದು ಬೆಳಿಗ್ಗೆ ಮಹಾವೀರವೃತ್ತದಲ್ಲಿರುವ ಹೂವಿನ ಹೂವಿನವ್ಯಾಪಾರಸ್ತರು ದಿಡೀರನೇ ಆಕ್ರೋಶವ್ಯಕ್ತಪಡಿಸಿದಲ್ಲದೇ ನಗರಸಭೆಯಿಂದ ಗುತ್ತಿಗೆ ಪಡೆದಿರುವ ಸುಂಕ ಸಂಗ್ರಹಿಸುವ ಪ್ರವೀಣ್ ವಿರುದ್ಧ ಆಕ್ರೋಶವ್ಯಕ್ತಪಡಿಸಿದ ಘಟನೆ ನಡೆದಿದೆ.
ಬೀದಿಬದಿ ಹೂವಿನ ವ್ಯಾಪಾರಿ ರಂಗಮ್ಮ, ಗೌರಮ್ಮ ನಮ್ಮನ್ನು ಕಸ್ತೂರಬಾ ರಸ್ತೆಯಿಂದ ಮಹಾವೀರ ವೃತ್ತದ ಪುಟ್ಬಾತ್ ಗೆ ಸ್ಥಳಾಂತರಿಸಿದರು. ಅದರಂತೆ ವ್ಯಾಪಾರ ಮಾಡುತ್ತಿದ್ದರೂ ನಮ್ಮ ಮುಂದೆ ಇನ್ನೊಬ್ಬ ವ್ಯಾಪಾರಸ್ತರನ್ನು ಕೂರಿಸುತ್ತಿದ್ದು, ಈ ಬಗ್ಗೆ ನಗರಸಭೆಯವರು ಯಾವ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ತುಂಬ ಸಮಸ್ಯೆ ಆಗುತ್ತಿದೆ. ಇನ್ನು ಸುಂಕವನ್ನು ಒಬ್ಬರಿಗೆ 20 ಮತ್ತು ಮತ್ತೊಬ್ಬರಿಗೆ 30 ರೂಗಳನ್ನು ವಿಧಿಸುತ್ತಿದ್ದು, ಈ ಬಗ್ಗೆ ಶಾಸಕರು ಬಂದು ಸರಿಪಡಿಸಬೇಕು. ಇಲ್ಲಿ ಬೇರೆ ಊರಿಂದಲೂ ಬಂದು ವ್ಯಾಪಾರ ಮಾಡುತಿದ್ದಾರೆ.
ಇನ್ನು ರೈತರು ವ್ಯಾಪಾರ ಮಾಡಲು ಬಂದು ನಮ್ಮ ವ್ಯಾಪಾರ ಹಾಳು ಮಾಡುತ್ತಿದ್ದಾರೆ ಎಂದು ದೂರಿದರು. ಸಾಲ ಹಣ ತಂದು ಬಡ್ಡಿ ಕಟ್ಟಲು ಆಗುತ್ತಿಲ್ಲ. ಇದೆ ರೀತಿ ಮುಂದುವರೆದರೇ ನಾವು ಕಸ್ತೂರಿಬಾ ರಸ್ತೆಗೆ ಹೋಗಿ ವ್ಯಾಪಾರ ಮಾಡಲು ಶುರು ಮಾಡಿದರೇ ಮತ್ತೆ ಬೇರೆಕಡೆ ಹೋಗುವುದಿಲ್ಲ. ಜೊತೆಗೆ ಕೈಲಿ ಸೀಮೆಎಣ್ಣೆ ಇಟ್ಟುಕೊಂಡು ಹೋಗುವುದಾಗಿ ಎಚ್ಚರಿಸಿದರು. ನಮಗೆ ಡೈಲಿ 30 ರೂ ಶುಂಕ ಕಟ್ಟಲು ಆಗುವುದಿಲ್ಲ. ಕಣ್ಣಲ್ಲಿ ನೀರು ಬರುತ್ತದೆ. ದೌರ್ಜನ್ಯ ಮಾಡಿ ಜಾಗದಿಂದಲೇ ಎತ್ತಂಗಡಿ ಮಾಡಲು ಹೇಳುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ನಗರಸಭೆಯಿಂದ ಟೆಂಡರ್ ಪಡೆದು ಸುಂಕ ಸಂಗ್ರಹಿಸುವ ಪ್ರವೀಣ್ ಮಾತನಾಡಿ, ಸಣ್ಣ ಅಂಗಡಿ ಇದ್ದರೇ 10 ರೂಗಳನ್ನು ತಗಂಡಿ ಜೊತೆಗೆ ವಯಸ್ಸಾದ, ಬಡ ಅನೇಕರಿಗೆ ಉಚಿತ ನೀಡಿದ್ದೇನೆ. ಕೆಲವರು ದೊಡ್ಡ ಅಂಗಡಿ ಇಟ್ಟುಕೊಂಡಿರುವ ಹಿನ್ನಲೆಯಲ್ಲಿ ಅವರಿಂದ 30 ರೂಗಳ ಸಂಗ್ರಹ ಮಾಡುತ್ತಿರುವುದಾಗಿ ಹೇಳಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ಬಡಪಾಯಿಗಳು ವ್ಯಾಪಾರ ಮಾಡಲು ಸರಕಾರವೇ ಆದೇಶ ಕೊಟ್ಟಿದ್ದು, ಹೈಕೋರ್ಟ್ ಆದೇಶವಿ ಇದ್ದು, ಯಾರು ಬಡಪಾಯಿ ಬಳಿ 20 ರಿಂದ 30 ರೂಗಳ ಸುಂಕ ಪಡೆಯುತ್ತಿದ್ದಾರೆ ಈ ಬಗ್ಗೆ ದೊಡ್ಡ ಹೋರಾಟವೇ ಮಾಡಲಾಗುವುದು. ಚನ್ನರಾಯಪಟ್ಟಣ ಇತರೆ ತಾಲೂಕುಗಳಲ್ಲಿ ಸುಂಕವನ್ನೆ ಪಡೆಯುತ್ತಿಲ್ಲ. ಈ ವಿಚಾರದಲ್ಲಿ ಬಾಯಿಗೆ ಬಂದಾಗೆ ಸುಂಕ ಪಡೆಯುತ್ತಿದ್ದಾರೆ. ಸರಕಾರದ ಆದೇಶ ತೋರಿಸಿ ಸುಂಕ ಪಡೆಯಬೇಕೆಂದರು. ಇಲ್ಲವಾದರೇ ನಗರಸಭೆ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.