ಹಾಸನ / ಅರಸೀಕೆರೆ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ ಅರಸೀಕೆರೆ ಅಬಕಾರಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಬಂಧಿತರಿಂದ ಸುಮಾರು ಬರೋಬ್ಬರಿ 65,000₹ ಮೌಲ್ಯದ ಗಾಂಜಾ ವಶ
ಬಂಧಿತರು : • ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಎಸ್ ಬಿದರೆ ಗ್ರಾಮದ ಪೃಥ್ವಿರಾಜ್ • ಚಿಕ್ಕಮಗಳೂರು ತಾಲ್ಲೂಕಿನ ಕುರುಬರ ಬೂದಿಹಾಳ್ ಗ್ರಾಮದ ರಂಗನಾಥ ಆಗಿದ್ದಾರೆ
ಸಕ್ಕಿಬಿದ್ದ ಪರಿ : ಕಳೆದ 23 ಆಗಸ್ಟ್ 2021 ರಂದು ಅರಸೀಕೆರೆ ತಾಲ್ಲೂಕಿನ ಬಾಣಾವರ ರೈಲ್ವೆ ನಿಲ್ದಾಣದ ಬಳಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅನುಮಾನಸ್ಪದ ವಾಗಿ ಓಡಾಡುತ್ತಿದ್ದಾರೆ ., ಅವರ ಬಳಿ ಇದ್ದ ಬ್ಯಾಗ್ ಅವಿತಿಡೋ ರೀತಿ ಆಕ್ಟಿಂಗ್ ಮಾಡುತ್ತಿದ್ದುದನ್ನು ಗಮನಿಸಿ ಪೊಲೀಸರು ಕರೆದು ವಿಚಾರಿಸಿದ್ದಾರೆ
ಆರೋಪಿಗಳ ಪೊಲೀಸ್ ಠಾಣೆಗೆ ಕರೆದು ವಿಚಾರಿಸಿದ ವೇಳೆ ಒಪ್ಪಿಕೊಂಡಿದ್ದಾರೆ, ನಂತರ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಕಾರ್ಯಾಚರಣೆ ನಡೆಸಿದ ಇವರಿಗೆ ಧನ್ಯವಾದಗಳು : • ಅರಸೀಕೆರೆ ತಾಲ್ಲೂಕು ಅಬಕಾರಿ ಇಲಾಖೆಯ ಉಪನಿರೀಕ್ಷಕ ಪಿ.ಜಿ. ಜಯಕುಮಾರ್, • ಸಿಬ್ಬಂದಿ ತೋಂಟದೇಶ್ ದ್ಯಾಮಪ್ಪ ಹಾಗೂ • ಇತರೆ ಸಿಬ್ಬಂದಿಗಳು