ಹಣ್ಣಿನ ಅಂಗಡಿಗಳಿಗೆ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ಹಣ್ಣಿನ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿ

0

ಹಾಸನ : ಸಕಲೇಶಪುರ ಪಟ್ಟಣದ ಮಂಜ್ರಾಬಾದ್ ಕ್ಲಬ್ ಪಕ್ಕದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಲವಾರು ವರ್ಷಗಳಿಂದ ಹಣ್ಣಿನ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ರಘು ಹಾಗೂ ಲತಾ ಕೋಂ ಚನ್ನೇಗೌಡ ಎಂಬುವವರ ಹಣ್ಣಿನ ಅಂಗಡಿಗಳಿಗೆ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ಹಣ್ಣಿನ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು ಘಟನೆ ತಿಳಿದ ಶಾಸಕರು ಸ್ಥಳಕ್ಕೆ ಬೇಟಿನೀಡಿ ವೈಯಕ್ತಿಕವಾಗಿ ಸಹಾಯಧನ ನೀಡಿ ಮಾನವೀಯತೆ ಮೆರೆದಿದ್ದಾರೆ.

ಸಕಲೇಶಪುರ: ಪಟ್ಟಣದ ಬಿ. ಎಂ ರಸ್ತೆ ಮಂಜರಾಬಾದ್ ಕ್ಲಬ್ ಎದುರಿನ ರಘು ಹಾಗೂ ಲತಾ ಎಂಬುವರ ಹಣ್ಣಿನ ಅಂಗಡಿ ಗಳಿಗೆ ರಾತ್ರಿ 12.45ರ ಸಮಯದಲ್ಲಿ ದುಷ್ಕರ್ಮಿಗಳು ಬೆಂಕಿ ಹಾಕಿದ್ದರಿಂದ ಅಂಗಡಿಗಳು ಸುಟ್ಟು ಹೋಗಿದೆ.ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ಧಾರೆ.ಪಟ್ಟಣ ಪೊಲೀಸರು‌ ಘಟನೆ ಸ್ಥಳಕ್ಕೆ ತೆರಳಿ ತನಿಖೆ ‌ನಡೆಸುತ್ತಿದ್ದಾರೆ. ಜೆರಾಕ್ಸ್ ಅಂಗಡಿಯ ಯುವಕನೋರ್ವ ಈ ಕೃತ್ಯ ವೆಸಗಿದ್ದಾನೆಂದು ಅಂಗಡಿ ಮಾಲೀಕ ರಘು ಆರೋಪಿಸಿದ್ದಾರೆ. ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ಭೇಟಿ ನೀಡಿ ಎರಡು ಅಂಗಡಿಗಳ ಮಾಲೀಕರಿಗೆ ವೈಯುಕ್ತಿಕವಾಗಿ ತಲಾ 5000ರೂ ನೀಡುವ ಮುಖಾಂತರ ಬೀದಿ ಬದಿ ವ್ಯಾಪಾರಿಗಳ ನೆರವಿಗೆ ನಿಂತಿದ್ದಾರೆ.

LEAVE A REPLY

Please enter your comment!
Please enter your name here