ಹಾಸನ ನಗರದ ಎಸ್.ಬಿ.ಜಿ. ಥಿಯೇಟರ್ ನಲ್ಲಿ ಬಿಡುಗಡೆ ಆಗಿರುವ ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಾಯಕ ಮತ್ತು ನಾಯಕಿ ಸೇರಿದಂತೆ ಚಿತ್ರ ತಂಡ ಆಗಮಿಸಿದಾಗ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು. ಹೌದು ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಮತ್ತು ನಾಯಕಿ ರುಕ್ಮಿಣಿ ವಸಂತ್ ಅವರು ಮೊದಲು ಎನ್.ಆರ್. ವೃತ್ತದ ಬಳಿ ಇರುವ ಪುನೀತ್ ರಾಜಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಎಸ್.ಬಿ.ಜಿ. ಥಿಯೇಟರ್ ಗೆ ಬರುತ್ತಿದ್ದಂತೆ ಅಭಿಮಾನಿಗಳ ದಂಡೆ ಸೇರಿತ್ತು. ಆಗಾಗ್ಗೆ ಜೈಕಾರಗಳು ಕೇಳಿ ಬಂದವು. ನಾಯಕ ನಾಯಕಿಯ ಜೊತೆ ಸೆಲ್ಫೆ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ನಂತರ ಓಪನ್ ಕಾರಿನಲ್ಲಿ ಉದ್ದೇಶಿಸಿ ಮಾತನಾಡಿದ ನಾಯಕ ರಕ್ಷಿತ್ ಶೆಟ್ಟಿ ಅವರು, ನಮ್ಮ ಎಲ್ಲಾ ಕನ್ನಡ ಚಿತ್ರವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೀರಾ, ಅದರಂತೆ ಸಪ್ತಸಾಗರದಾಚೆ ಎಲ್ಲೋ ಚಿತ್ರವನ್ನು ಕೂಡ ಸ್ವೀಕರಿಸಿದ್ದೀರಿ ಎಂದು ಇದೆ ರೀತಿ ಕನ್ನಡ ಚಿತ್ರಗಳಿಗೆ ಪ್ರೋತ್ಸಹ ಕೊಡಬೇಕೆಂದರು.