ಹಾಸನದಲ್ಲಿ ಕಾರು ಅಡ್ಡಗಟ್ಟಿ ಕಾನ್‌ಸ್ಟೆಬಲ್‌ ಮೇಲೆಯೇ ಹಲ್ಲೆ

0

ಹಾಸನ : ಜಿಲ್ಲೆಯ ಬೇಲೂರು ತಾಲ್ಲೂಕಿನ ಪೊಲೀಸ್ ಕಾನ್‌ಸ್ಟೆಬಲ್ ರಘು ಎಂಬುವರ ರಸ್ತೆ ಮಧ್ಯೆ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.

ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಹಳೇಬೀಡು ಸಮೀಪದ ನರಸೀಪುರ ಭೋವಿ ಕಾಲೊನಿಗೆ ಕಾರಿನಲ್ಲಿ ಹೋಗಿ ಬರುತ್ತಿದ್ದ ರಘು ಅವರನ್ನು ಹಳೇಬೀಡು ರಸ್ತೆಯ ಎಂ.ಹುಣಸೇಕೆರೆ ಕೊಪ್ಪಲು ಗ್ರಾಮದ ಬಳಿ 3 ರಿಂದ 4 ಬೈಕ್‌ನ್ನು ನಿಲ್ಲಿಸಿಕೊಂಡಿದ್ದ ಆರೆಂಟು ಜನರಿದ್ದ ಗುಂಪು ಕಾರನ್ನು ಅಡ್ಟಗಟ್ಟಿ ನಿಲ್ಲಿಸಿ ಹಲ್ಲೆ ನಡೆಸಿ, ಮೊಬೈಲ್ ಕಿತ್ತುಕೊಂಡು, ಪರ್ಸ್‌ನಲ್ಲಿದ್ದ ಹಣವನ್ನೂ ದೋಚಿರುವ ಘಟನೆ ನಡೆದಿದೆ

ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.

Crimedairyhassan

LEAVE A REPLY

Please enter your comment!
Please enter your name here