ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಹಾಸನ: ಹಾಸನ ಜಿಲ್ಲೆಯ ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಆನ್ ಲೈನ್ ಮೂಲಕ ಪ್ರಸೂತಿ ಮತ್ತು ಸ್ತಿçÃರೋಗ ತಜ್ಞರು, ಫಿಜಿಷಿಯನ್, ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು, ಪಂಚಕರ್ಮ ತಜ್ಞ ವೈದ್ಯಾಧಿಕಾರಿಗಳು, ನೇತ್ರ ಶಾಸ್ತçಜ್ಞರು, ಕ್ಲಿನಿಕ್ ಸೈಕಾಲಿಜಿಸ್ಟ್, ಕ್ವಾಲಿಟಿ ವ್ಯವಸ್ಥಾಪಕರು, ಶುಶ್ರೂಷಕಿಯರು (ಮಹಿಳೆ) ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಅನ್ವಯಿಸುವ ರೋಸ್ಟರ್ ಕಂ ಮೆರಿಟ್ ಸಿಸ್ಟಮ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಷರತ್ತು ಮತ್ತು ನಿಬಂಧನೆಗೆ ಒಳಪಟ್ಟು ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸದರಿ ಹುದ್ದೆಗಳ ವಿದ್ಯಾರ್ಹತೆ, ವಯೋಮಿತಿ ಹುದ್ದೆಗಳ ಸಂಖ್ಯೆ ಮತ್ತು ಇತರೆ ಮಾಹಿತಿಯನ್ನು ಈ ಕಚೇರಿಯ ಸೂಚನಾ ಫಲಕ ಹಾಗೂ ಆರೋಗ್ಯ ನಿರ್ದೇಶನಾಲಯದ ವೆಬ್‌ಸೈಟ್‌ನಲ್ಲಿ (https://nhm.karnataka.gov.in/) ಪಡೆದುಕೊಂಡು https://hassan.nic.in/en/notice_ category/recruitment/ URL ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 12 ರಂದು ಕೊನೆಯದಿನವಾಗಿರುತ್ತದೆ. ಗುತ್ತಿಗೆ ತಜ್ಞ ವೈದ್ಯರು ಹಾಗೂ MBBS ವೈದ್ಯಾಧಿಕಾರಿಗಳ ನೇರ ಸಂದರ್ಶನವು ಪ್ರತಿ ಸೋಮವಾರ ಈ ಕಚೇರಿಯಲ್ಲಿ ನಡೆಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here