ಹೊಳೆನರಸೀಪುರ : ತಹಶೀಲ್ದಾರ್ ಶ್ರೀನಿವಾಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಹಿರಿತಳಾಲು ಗ್ರಾಮಕ್ಕೆ ಭೇಟಿ ನೀಡಿ ವೃದ್ಧಾಪ್ಯ ವೇತನ, ಮಾಸಾಶನ, ಪವತಿ ಖಾತೆ, ಪಡಿತರ ಸಮಸ್ಯೆ, ಮತ್ತಿತರ ಕಂದಾಯ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸಲು ಪ್ರಯತ್ನಪಟ್ಟರು. ಹಿರಿ ತಳಲು ಗ್ರಾಮದಲ್ಲಿ ಮುಖಂಡರಾದ ಪುಟ್ಟ ಸೋಮಪ್ಪ, ಚುನಾಯಿತ ಪ್ರತಿನಿಧಿಗಳು, ಉಪ ತಹಶೀಲ್ದಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಹಾಗೆಯೇ ಗುಲಗಂಜಿ ಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು.

ಗುಲಗಂಜಿ ಹಳ್ಳಿ ಗ್ರಾಮದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಜವರೇಗೌಡರು ಹಾಗೂ ನೂತನವಾಗಿ ಸದಸ್ಯರಾಗಿ ಆಯ್ಕೆಯಾಗಿರುವ ಪಿಎಚ್ಡಿ ಪದವೀಧರರಾದ ರವಿ ಸುಂದರ್ ಅವರು ಹಾಜರಿದ್ದರು.
