ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ಮದ್ಯ ಸೇವಿಸಿ, ಬಿದ್ದಿದ್ದ ತಿಮ್ಮೇಗೌಡರನ್ನು ಮನೆಯಲ್ಲಿ ಮಲಗಿಸಲು ಎತ್ತಿಕೊಂಡು ಹೋಗುತ್ತಿರುವ ಗ್ರಾಮಸ್ಥರು

0

ತಾಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ಮದ್ಯ ಸೇವನೆಗೆ ಚಾಲೆಂಜ್ ನಡೆದು ಪಂದ್ಯದಲ್ಲಿ ಮದ್ಯ ಸೇವಿಸಿದ್ದ ತಿಮ್ಮೇಗೌಡ(೬೦) ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಸಿಗರನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕೃಷ್ಣೇಗೌಡ ಎಂಬ ವ್ಯಕ್ತಿ ನೀಡಿದ ಮದ್ಯವನ್ನು ದೇವರಾಜು ಎಂಬ ವ್ಯಕ್ತಿಯೂ ತಿಮ್ಮೇಗೌಡ ಎಂಬುವರ ಜತೆ ಅರ್ಧ ಗಂಟೆಯಲ್ಲಿ ೯೦ ಎಂಎಲ್‌ನ ೧೦ ಪ್ಯಾಕೇಟ್ ಮದ್ಯ ಸೇವನೆಗೆ ಚಾಲೆಂಜ್ ಮಾಡುತ್ತಾರೆ ಮತ್ತು ಯತ್ತೇಚವಾಗಿ ಹಾಗೂ ನಿರ್ಲಕ್ಷö್ಯದಿಂದ ಮದ್ಯ ಕುಡಿಸುತ್ತಾರೆ.

ಕುಡಿದು ೩೦ ನಿಮಿಷಗಳ ನಂತರ ತಿಮ್ಮೇಗೌಡ ಅವರು ರಕ್ತವಾಂತಿ ಮಾಡಿ ಸ್ಥಳದಲ್ಲೇ ಬಿದ್ದಿರುತ್ತಾರೆ. ನಂತರ ಗ್ರಾಮದ ನಾಲ್ಕು ಜನ ತಿಮ್ಮೇಗೌಡರನ್ನು ಅವರ ಮನೆಗೆ ಎತ್ತಿಕೊಂಡು ಹೋಗಿ ಮಲಗಿಸುತ್ತಾರೆ, ಮನೆಯಲ್ಲಿ ಯಾರೂ ಇಲ್ಲದ ಕಾರಣ ನಿತ್ರಾಣಗೊಂಡಿದ್ದ ತಿಮ್ಮೇಗೌಡ ಮಲಗಿದ್ದಲ್ಲೇ ಮೃತ ಪಟ್ಟಿರುತ್ತಾರೆ. ಘಟನೆ ಸಂಬAಧ ಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ಮೃತರ ಪುತ್ರಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಮೃತದೇಹವನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ದೇವರಾಜ ಹಾಗೂ ಕೃಷ್ಣೇಗೌಡರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here