ಅಡಿಕೆ ಕದಿಯಲು ಮರವನ್ನೇ ಕಡಿದ ಕಳ್ಳರು

0

ಬೈಕೆರೆ  ಗ್ರಾಮದ  ಸುಬ್ರಮಣ್ಯ  ರವರಿಗೆ  ಸೇರಿದ   ಅಡಿಕೆ  ಮರವನ್ನು  ಕಡಿದು  ಅಡಿಕೆ  ಕುಯುದಿರುವ  ಪಾಪಿಗಳ ಹುಡುಕಾಟದಲ್ಲಿ‌ ಪೊಲೀಸರು

ಸಕಲೇಶಪುರ : ಅಡಿಕೆ ಕದಿಯಲು ಹೋದ ಕಳ್ಳರು 15 ಮರಗಳನ್ನೇ ಕಡಿದು ಹೋಗಿರುವ ಘಟನೆ ಪಟ್ಟಣ ಹೊರವಲಯದ ರೈಲ್ವೆ ಸೇತುವೆ ಸಮೀಪ ನಡೆದಿದೆ.

ಶಿಕ್ಷಕ ಸುಬ್ರಹ್ಮಣ್ಯ ಎಂಬುವವರಿಗೆ ಸೇರಿದ ತೋಟದಲ್ಲಿ ಈ ಘಟನೆ ನಡೆದಿದೆ. ಸುಬ್ರಹ್ಮಣ್ಯ ಅವರು ಮೂರು ಎಕರೆ ಪ್ರದೇಶದಲ್ಲಿ ಕಾಫಿ ಹಾಗೂ

ಅಡಿಕೆ ತೋಟ ಮಾಡಿಕೊಂಡಿದ್ದಾರೆ. ಆದರೆ ಬುಧವಾರ ರಾತ್ರಿ ಕಳ್ಳರು ಅಡಿಕೆ ಕದಿಯಲು ಹೋಗಿದ್ದಾರೆ. ಆದರೆ ಈ ಖದೀಮರು ಬೆಳೆದು ನಿಂತಿದ್ದ 15 ಅಡಿಕೆ ಮರಗಳನ್ನು ಕತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ಈ ಬಗ್ಗೆ ಮಾಲೀಕ ಸುಬ್ರಹ್ಮಣ್ಯ ಅವರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ

ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

#crimedairyhassan #sakleshpur

LEAVE A REPLY

Please enter your comment!
Please enter your name here