2018ರ ಸಾಲಿನಲ್ಲಿ ಜಿಲ್ಲೆಯ ಹಾಸನ ಮತ್ತು ಅರಸೀಕೆರೆ ನಗರಸಭೆಗಳ, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ ಪುರಸಭೆಗಳ ಹಾಗೂ 2019ರ ಸಾಲಿನಲ್ಲಿ ಅರಕಲಗೂಡು ಮತ್ತು ಆಲೂರು ಪಟ್ಟಣ ಪಂಚಾಯಿತಿಗಳ ಚುನಾವಣೆಗಳು ನಡೆದಿದ್ದು, ತತ್ಸಂಬಂಧವಾದ ಚುನಾಯಿತ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ 2018ರ ಸೆಪ್ಟೆಂಬರ್ 18 ಮತ್ತು 2019ರ ಜೂನ್14 ರಂದು ಈಗಾಗಲೇ ಕಳುಹಿಸಲಾಗಿದೆ.
ಅ.8ರ ಪತ್ರದಲ್ಲಿ ಸರ್ಕಾರವು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಕ್ರಮ ವಹಿಸುವಂತೆ ನಿರ್ದೇಶಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಅಧಿಸೂಚನೆಗಳನ್ನು ತಿಳಿಸಲಾಗಿದೆ.
ಕರ್ನಾಟಕ ಪುರಸಭೆಗಳ (ಅಧ್ಯಕ್ಷ ಮತ್ತು ಉಪಾಧ್ಯಕ್ಷ) ಚುನಾವಣೆ ನಿಯಮಗಳು 1965 ಮತ್ತು 1995 ರ ನಿಯಮಗಳನ್ವಯ ನಗರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ನಡೆಸಲು ಈ ಕೆಳಕಂಡಂತೆ ಗೊತ್ತುಪಡಿಸಿದ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶಿಸಿದೆ. ಕರ್ನಾಟಕ ಪುರಸಭೆಗಳ (ಅಧ್ಯಕ್ಷ ಮತ್ತು ಉಪಾಧ್ಯಕ್ಷ) ಚುನಾವಣೆ ನಿಯಮಗಳ ರೀತ್ಯ ಕ್ರಮಗಳನ್ನು ಕೈಗೊಂಡು ಚುನಾವಣೆ ನಡೆಸಿ, ಈ ಕಚೇರಿಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಆರ್. ಗಿರೀಶ್ ಅವರು ತಿಳಿಸಿದ್ದಾರೆ.
ಅಧ್ಯಕ್ಷ/ಉಪಾಧ್ಯಕ್ಷರನ್ನು ಚುನಾಯಿಸಲು ಗೊತ್ತುಪಡಿಸಿರುವ ಅಧಿಕಾರಿಗಳ ಪಟ್ಟಿ ಇಂತಿದೆ.
ಕ್ರ. ಸಂ ನಗರ ಸ್ಥಳೀಯ ಸಂಸ್ಥೆಯ
ಹೆಸರು ಅಧ್ಯಕ್ಷ/ಉಪಾಧ್ಯಕ್ಷರನ್ನು ಚುನಾಯಿಸಲು ಗೊತ್ತುಪಡಿಸಿರುವ ಚುನಾವಣಾಧಿಕಾರಿಗಳು
- ಹಾಸನ ನಗರಸಭೆ ಉಪವಿಭಾಗಾಧಿಕಾರಿಗಳು, ಹಾಸನ ಉಪವಿಭಾಗ, ಹಾಸನ.
- ಅರಸೀಕೆರೆ ನಗರಸಭೆ ಉಪವಿಭಾಗಾಧಿಕಾರಿಗಳು, ಹಾಸನ ಉಪವಿಭಾಗ, ಹಾಸನ.
- ಚನ್ನರಾಯಪಟ್ಟಣ ಪುರಸಭೆ ತಹಶೀಲ್ದಾರ್, ಚನ್ನರಾಯಪಟ್ಟಣ.
- ಹೊಳೆನರಸೀಪುರ ಪುರಸಭೆ ತಹಶೀಲ್ದಾರ್, ಹೊಳೆನರಸೀಪುರ.
- ಸಕಲೇಶಪುರ ಪುರಸಭೆ ತಹಶೀಲ್ದಾರ್, ಸಕಲೇಶಪುರ.
- ಅರಕಲಗೂಡು ಪಟ್ಟಣ ಪಂಚಾಯಿತಿ ತಹಶೀಲ್ದಾರ್, ಅರಕಲಗೂಡು.
- ಆಲೂರು ಪಟ್ಟಣ ಪಂಚಾಯಿತಿ ತಹಶೀಲ್ದಾರ್, ಆಲೂರು.