ಇಂದೇ 15ಲಕ್ಷ ಚೆಕ್ ವಿತರಣೆ, 45ಕಿ.ಮೀ. ಆನೆ ಬ್ಯಾರಿಕೇಡ್ ಅಳವಡಿಕೆಗೆ ಆಗ್ರಹ, ಹೇಮಾವತಿ ಸೇತುವೆಯಿಂದ ಅಂಬೇಡ್ಕರ್ ಪುತ್ಥಳಿವರೆಗೂ ಮೃತ ಮಹಿಳೆ ಶವಯಾತ್ರೆ ಪ್ರತಿಭಟನೆಗೆ ಯಡೇಹಳ್ಳಿ ಮಂಜುನಾಥ್ ಕರೆ. ಇಂದು ಬೆಳಿಗ್ಗೆ ವಡೂರುನಲ್ಲಿ ಆನೆ ದಾಳಿಯಿಂದ ಮೃತಪಟ್ಟ ಕವಿತಾರ ಮೃತದೇಹ ದ ಯಾತ್ರೆ ಸಾಯಂಕಾಲ 3 ಗಂಟೆಗೆ ಸಕಲೇಶಪುರ ಹೇಮಾವತಿ ಸೇತುವೆಯಿಂದ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಯಡೆಹಳ್ಳಿ ಆರ್ ಮಂಜುನಾಥ್ ರವರು ಹಾಗೂ ಮಲೆನಾಡ ರಕ್ಷಣ ಸೇನೆಯ ರಾಜ್ಯಧ್ಯಕ್ಷ ಜಾನೇಕೆರೆ ಸಾಗರ್ ರವರು ಆನೆ ದಾಳಿಯಿಂದ ಬಡ ಕಾರ್ಮಿಕ ಮಹಿಳೆಯ ಮೃತ್ಯು ಆಗಿದೆ. ಸಕಲೇಶಪುರದಲ್ಲಿ ಆನೆ ದಾಳಿಯಿಂದ ಮೃತ್ಯು ಸಂಖ್ಯೆ ಹೆಚ್ಚುತ್ತಿದ್ದರು ಇನ್ನೂ ಕೂಡಾ ಸರಕಾರಗಳು ಕ್ರಮ ಕೈ ಗೊಂಡಿಲ್ಲ.
ಭ್ರಷ್ಟ ವ್ಯವಸ್ಥೆಯ ಕಾರ್ಯ ವೈಖರಿಗೆ ಜನ ಸಾಯುತ್ತಿದ್ದಾರೆ. ತನ್ನ ತಾಯಿ ಮನೆಗೆ ಬಂದಾಗ ಆನೆ ದಾಳಿ ಮಾಡಿ ಕೊಂದಿದೆ. ಈಕೆಯ ಸಾವಿಗೆ ನ್ಯಾಯ ಕೇಳುವ ಕಾರ್ಯ ಆಗಬೇಕಿದೆ. ಇಂದು ಸಾಯಂಕಾಲ 3 ಗಂಟೆಗೆ ಹೇಮಾವತಿ ಸೇತುವೆಯಿಂದ ಅಂಬೇಡ್ಕರ್ ಪುತಳಿ ವರೆಗೆ ಮೆರವಣಿಗೆ ನಡೆಯಲಿದೆ. ಈಕೆಯ ಮನೆಯವರಿಗೆ ಇಂದೇ ಪರಿಹಾರ ಚೆಕ್ ಕೊಡ್ಬೇಕು. ಸರಕಾರಿ ವೈಫಲ್ಯಾದಿಂದ ಮೃತ್ಯು ಆಗಿದೆ. ಈ ಪ್ರತಿಭಟನೆಯಲ್ಲಿ ಎಲ್ಲಾ ಸಂಘಟನೆಗಳು ಹಾಗೂ ಜನತೆ ಪಾಲ್ಗೊಳ್ಳುವಂತೆ ತಿಳಿಸಿದ್ದಾರೆ