ಹಾಸನ: ವಿದ್ಯುತ್ ಕಂಬಗಳ ಬಗ್ಗೆ, ಪೆನ್ಷನ್ ವಿಚಾರ, ಕೋಳಿ ಅಂಗಡಿಗಳ ಕಸ ಹೆಚ್ಚಾಗಿರುವ ಬಗ್ಗೆ, ಹಳ್ಳಿ ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ನಿಟ್ಟೂರು ಗ್ರಾಮಸ್ಥರಿಂದ ದೂರಿನ ಸಮಸ್ಯೆ ಬಗ್ಗೆ ಆಲಿಸಿದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಅವರು ಸ್ಥಳದಲ್ಲೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಸನ ತಾಲೂಕಿನ ನಿಟ್ಟೂರು, ಯಲಗುಂದ ಹಾಗೂ ಸೀಗೆ ಗ್ರಾಮಗಳಿಗೆ ತೆರಳಿದ ಸಂಸದರು ಮತ್ತು ಶಾಸಕರು ಜೊತೆಯಲ್ಲಿ ಸಂಬಂದ ಪಟ್ಟ ಅಧಿಕರಿಗಳು ಕೂಡ ಇದ್ದು, ಗ್ರಾಮದ ನಿವಾಸಿಗಳ ಕುಂದು ಕೊರತೆಯನ್ನು ಆಲಿಸಿದಲ್ಲದೇ ಸಮಸ್ಯೆಯ ಅರ್ಜಿಯನ್ನು ಸ್ಥಳದಲ್ಲೆ ಸ್ವೀಕರಿಸಿದಲ್ಲದೇ ಅದಕ್ಕೆ ಸ್ಥಳದಲ್ಲೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ ಪ್ರಸಂಗ ನಡೆಯಿತು.
ಸಂಸದರಾದ ಪ್ರಜ್ವಲ್ ರೇವಣ್ಣನವರು ಸಭೆಯನ್ನು ಉದ್ಘಾಟಿಸಿ ನಂತರ ಉದ್ದೇಶಿಸಿ ಮಾತನಾಡಿದ ಅವರು, ಇನ್ನು ಟಿಸಿ ಬಜೆಟ್ ಬಂದಿರುವುದಿಲ್ಲ. ಆಗಿರುವುದಿಲ್ಲ. ಇಲ್ಲಿ ಒಂದೆ ಕಡೆಯಲ್ಲ, ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇದೆ ಸಮಸ್ಯೆ ಆಗಿದೆ. ಹಣ ಕಟ್ಟಿರುವ ಫಲಾನುಭವಿಗಳು ೫೬೨ ಜನರು ಇದ್ದು, ಬಜೆಟ್ ಬಾರದೆ ಟಿಸಿಗಳನ್ನು ಹಾಕಲು ಸಾಧ್ಯವಾಗುತ್ತಿಲ್ಲ ಎಂದರು. ಅನೇಕರಿಗೆ ಪೆನ್ವನ್ ಕೂಡ ಸರಿಯಾಗಿ ಬರುತ್ತಿಲ್ಲ ಎಂಬುದರ ಸಮಸ್ಯೆ ಬಗ್ಗೆಯು ಆಲಿಸಿದ್ದು, ಏತಕ್ಕಾಗಿ ತಡ ಮಾಡಲಾಗುತ್ತಿದೆ ಬಗ್ಗೆ ತಕ್ಷಣದಲ್ಲಿ ಪರಿಹರಿಸಿಕೊಡಲಾಗುವುದು. ಕೋಳಿ ಅಂಗಡಿಗಳ ಕಸವನ್ನು ಎಲ್ಲೆಂದರಲ್ಲಿ ಎಸೆಯುತಿದ್ದು, ಇದರಿಂದ ವಿವಿಧ ಮಾರಕ ರೋಗಗಳು ಹರಡುವ ಸಾಧ್ಯತೆ ಹೆಚ್ಚು ಇದ್ದು, ನಿಗಧಿತ ಜಾಗದಲ್ಲಿ ಹಾಕದಿದ್ದರೇ ಅಂಗಡಿ ಮೇಲೆ ಕ್ರಮಕೈಗೊಳ್ಳಲು ಸೂಚನೆ ಕೊಟ್ಟರು.
ಇನ್ನು ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಕುಟುಂಬದ ನೆಮ್ಮದಿ ಹಾಳಾಗುತ್ತಿದೆ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಮೊದಲು ನಿಟ್ಟೂರು ಗ್ರಾಮಕ್ಕೆ ತೆರಳಿ ಅಲ್ಲಿನ ಸಮಸ್ಯೆ ಆಲಿಸಿದ ನಂತರ ಯಲಗುಂದ ಗ್ರಾಮ ಪಂಚಾಯಿತಿಗೆ ತೆರಳಿದರು. ಇದಾದ ನಂತರ ಸೀಗೆ ಗ್ರಾಮಕ್ಕೆ ತೆರಳಿ ಅಲ್ಲೂ ಕೂಡ ಸಮಸ್ಯೆಗಳ ಆಲಿಸಿ ಪರಿಹರಿಸಲು ಅಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿ ಸೂಚನೆ ನೀಡಿದರು. ಇದೆ ವೇಳೆ ತಹಸೀಲ್ದಾರ್ ಶ್ವೇತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಯಶವಂತ್, ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ನಾಗರಾಜು ಇತರರು ಉಪಸ್ಥಿತರಿದ್ದರು.