ಸರಿ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ದೇವರಾಜ್ ಅವರ ಏಲಕ್ಕಿ ತೋಟದ ಮನೆಯ ಛಾವಣಿಯಲ್ಲಿ ಕಾಣಿಸಿದಾಗ!!

0

ಸಕಲೇಶಪುರ : ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಯರಗಳ್ಳಿ ಗ್ರಾಮದಲ್ಲಿ ಗಜ ಗಾತ್ರದ  ಅಂದರೆ ಸರಿ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಗ್ರಾಮದ ದೇವರಾಜ ಅವರ ಏಲಕ್ಕಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರಿಗುವಾಗ ತಮ್ಮ ಹಂಚಿನ ಮನೆಯ ಚಾವಣಿಯಲ್ಲಿ ಹಾವು ಕಾಣಿಸಿಕೊಂಡು ,

ಅವರು ಜನ ಸೇರಿಸಿದರು ,  ದೊಡ್ಡ ಹಾವು ನೋಡಿದ ಜನ ಆತಂಕ ಸಹಜ ಅಲ್ಲವೇ !,

  ಮುಂದೇನು ಅಂತ ಯೋಚನೆ ಮಾಡುವಾಗ ಥಟ್ ಅಂತ ನೆನಪಿಗೆ ಬರೋದು ಸಕಲೇಶಪುರದ ಪ್ರಖ್ಯಾತ ಉರಗ ಪ್ರೇಮಿ ಮಹಮ್ಮದ್ ಪರಾನ್‌ , ಇವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದರು , 

4ಗಂಟೆ ಕಾರ್ಯಾಚರಣೆ ನಂತರ ಅಂದಾಜು 12 KG ತೂಕದ ಬೃಹತ್ ಕಾಳಿಂಗ ಸರ್ಪವನ್ನು ಹಿಡಿದು ಬಾಚಿಹಳ್ಳಿ  ಸೆಕ್ಷನ್ ಯಸಳೂರು ರೆಂಜ್ ಗೆ ಒಪ್ಪಿಸಿ ಸಂರಕ್ಷಿತಾರಣ್ಯಕ್ಕೆ ಬಿಡಲಾಯಿತು.

#hassanforrestnews #hassan

LEAVE A REPLY

Please enter your comment!
Please enter your name here