ಅಬುಧಾಬಿ: ಐಪಿಎಲ್ 2020ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ ಮಾಡಿದ ಮುಂಬೈ ತಂಡ 163ರನ್ಗಳ ಗುರಿ ನೀಡಿತ್ತು. ಚೆನ್ನೈ ತಂಡ ಕೇವಲ 19.2 ಓವರ್ಗಳಲ್ಲಿ, 5 ವಿಕೆಟ್ ನಷ್ಟಕ್ಕೆ 166ರನ್ ಗಳಿಸುವ ಮೂಲಕ ಜಯ ಸಾಧಿಸಿತು.

ಸಿಎಸ್ಕೆ ತಂಡದಲ್ಲಿ ಮುರಳಿ ವಿಜಯ್-1 (7), ಶೇನ್ ವಾಟ್ಸನ್ -4 (5), ಪಾಫ್ ಡು ಪ್ಲೆಸಿಸ್ -33 (32), ಅಂಬುಟಿ ರಾಯುಡು 71 (48), ರವೀಂದ್ರ ಜಡೇಜಾ- 10 (5), ಸ್ಯಾಮ್ ಕರ್ರನ್- 18 (6), ಕೇದಾರ್ ಜಾದವ್ – ಮಹೇಂದ್ರ ಸಿಂಗ್ ಧೋನಿ- ದೀಪಕ್ ಚಹರ್- ಪಿಯುಷ್ ಚಾವ್ಲಾ- ಲುಂಗಿ ಎನ್ಜಿಡಿ ರನ್ ಬಾರಿಸಿದರು.ಮುಂಬೈ ಇಂಡಿಯನ್ಸ್ನಲ್ಲಿ ಟ್ರೆಂಟ್ ಬೌಲ್ಟ್- 1, ಜೇಮ್ಸ್ ಪ್ಯಾಟಿನ್ಸನ್-1, ಕೃನಾಲ್ ಪಾಂಡ್ಯಾ-1 ಮತ್ತು ರಾಹುಲ್ ಚಹರ್-1 , ಜಸ್ಪ್ರೀತ್ ಬುಮ್ರಾ -1 ವಿಕೆಟ್ ಪಡೆದಿದ್ದಾರೆ.