ಕೂಡಲೇ ಸರಿ ಪಡಿಸದಿದ್ದರೆ ರಾಜ್ಯ ನೈರ್ಮಲ್ಯ ಇಲಾಖೆಗೆ ಪತ್ರದ ಮೂಲಕ ಮನವಿ ಸಲ್ಲಿಸಲು ನಿರ್ಧಾರ
ಪಕ್ಕದ ಬಂದೂರು ಸಮೀಪ ಕಾಳನಕೊಪ್ಪಲು ಗ್ರಾಮದಲ್ಲಿ ಕಳೇದೆರಡು ದಿನಗಳಲ್ಲಿ ಡೇಂಗ್ಯೂ ಜ್ವರಕ್ಕೆ ಬಲಿಯಾಗಿದ್ದು
ಈ ಪ್ರಕರಣ ಮಾಸುವ ಮುಂಚೆಯೇ ಗ್ರಾಮದ ಅನೇಕ ಬಡಾವಣೆಯಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದ್ದು ಬಡಾವಣೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಾಢ ನಿದ್ರೆಯಲ್ಲಿ ತೊಡಗಿರುವ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ
ಕಸ ತೆಗೆದಿಲ್ಲವೆಂದು ಗ್ರಾಮಸ್ಥರು ಪಿ ಡಿ ಓ. ರವರನ್ನು ಪ್ರಶ್ನೇ ಮಾಡಿದರೆ ಕುಡಿಯುವ ನೀರಿಗೆ ಕತ್ತರಿ ಹಾಕುವುದಾಗಿ ಬಡಾವಣೆ ನಿವಾಸಿಗಳನ್ನು ಬೆದರಿಸಿದ ಪ್ರಸಂಗ ಕೂಡ ನಡೆದಿದೆ..