ಹಾಸನ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಾವಿನ ಪ್ರಮಾಣ ಆತಂಕಕಾರಿಯಾಗಿದ್ದು, ಇದನ್ನು ಸಂಪೂರ್ಣ ನಿಯಂತ್ರಣ ಮಾಡಲೇಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಇಷ್ಟೆಲ್ಲಾ ಸೌಲಭ್ಯವಿದ್ದರೂ ಹೆಚ್ಚಿನ ಸಾವು ಹೇಗೆ ಸಂಭವಿಸುತ್ತಿವೆ. ಮುಖ್ಯಮಂತ್ರಿಯವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಮುಂದಿನ ಒಂದೆರಡು ದಿನಗಳಲ್ಲಿ ಚಿಕಿತ್ಸಾ ವಿಧಾನ, ಆಸ್ಪತ್ರೆಗಳ ನಿರ್ವಹಣೆ ಸುಧಾರಣೆಗೆ ಬರಬೇಕು ಮರಣ ಪ್ರಮಾಣ ತುಂಬಾ ಕಡಿಮೆಯಾಗಿ ಬರಬೇಕು ಎಂದರು.
ಹಿಮ್ಸ್‍ನ ಕೋವಿಡ್ ಆಸ್ಪತ್ರೆಯಲ್ಲಿ ಸಪ್ರತಿದಿನ ನಾಲ್ಕು ಶಿಫ್ಟ್ ಗಳಲ್ಲಿ ತಜ್ಞ ವೈದ್ಯರು, ಹಿರಿಯ ವೈದ್ಯರು ವಾರ್ಡ್‍ಗಳಿಗೆ ತೆರಳಿ ಸೋಂಕಿತರ ಆರೋಗ್ಯ ಪರಿಶೀಲಿಸಬೇಕು ವೈದ್ಯರು ಪರಸ್ಪರ ಮಾತನಾಡಿ ಒಂದು ಅಭಿಪ್ರಾಯಕ್ಕೆ ಬಂದು ಚಿಕಿತ್ಸೆ ನೀಡಬೇಕು, ಸೂಕ್ತ ಮೇಲ್ವಿಚಾರಣೆ ಅಗತ್ಯ ಎಂದು ಸೂಚಿಸಿದರು.
ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡಿದ್ದಾರೆ ಎಂಬ ಭಾವನೆ ಸೋಂಕಿತರು, ಜನರಲ್ಲಿ ಬರಬೇಕು ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ ಹಿಮ್ಸ್‍ಗೆ ಒಳ್ಳೆಯ ಹೆಸರಿದೆ ಅದನ್ನು ಉಳಿಸಿಕೊಳ್ಳಿ ಎಂದು ಸಚಿವರು ಕಿವಿಮಾತು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಮಾತನಾಡಿ ಹಾಸನ ಜಿಲ್ಲೆಯ ಸಾವಿನ ಪ್ರಮಾಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನು ಸುಧಾರಿಸುವುದು ನಮ್ಮ ಜವಾಬ್ದಾರಿಯಾಗಿದೆ, ವೈದ್ಯರ ನಡುವೆ ಸಮನ್ವಯ ಬೇಕು, ಯಾರೂ ವ್ಯತಿರಿಕ್ತವಾಗಿ ಮಾತನಾಡದಂತೆ ಚಿಕಿತ್ಸೆ ಸೇವೆ ದೊರೆಯುವಂತಾಗಲಿ ಎಂದು ಸಚಿವರು ನಿರ್ದೇಶನ ನೀಡಿದರು.
ಪ್ರತಿದಿನ ಸೋಂಕಿತರೊಂದಿಗೆ ಮಾತನಾಡಿ ಆರೋಗ್ಯ ಪರಿಸ್ಥಿತಿಯನ್ನು ನಿಖರವಾಗಿ ಅಂದಾಜಿಸಿ ಇದರಿಂದ ಸೋಂಕಿತರ ಆತ್ಮಸ್ಥೈರ್ಯ ಹೆಚ್ಚಿಸಲಿದೆ ಎಂದು ಸಚಿವರು ಸೂಚನೆ ನೀಡಿದರು.
ಸರ್ಕಾರದಿಂದ ಬೇಕಾಗುವ ಎಲ್ಲಾ ಸೌಲಭ್ಯ ಒದಗಿಸಲಾಗುವುದು ಆದರೆ ಆಸ್ಪತ್ರೆಯಲ್ಲಿ ಸಮರ್ಥ ಸೇವೆ ಅಭಿವೃದ್ಧಿಯಾಗಬೇಕು ಎಂದರಲ್ಲದೆ ಆಕ್ಸಿಜನ್ ಕಾನ್ಸಂಟ್ರೆಟರ್‍ಗಳನ್ನು ಹೆಚ್ಚು ಖರೀದಿಸಿ ಖಾಸಗಿ ಸಂಸ್ಥೆಗಳಿಂದ ಸಿ.ಎನ್.ಆರ್ ನಿಧಿಯಿಂದ ಕಾನ್ಸಂಟ್ರೆಟರ್‍ಗಳ ಪಡೆಯಿರಿ ಎಂದರು.
ಜಿಲ್ಲಾಧಿಕಾರಿಯವರು ಈ ಬಗ್ಗೆ ಕಾರ್ಖಾನೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್ ಅವರು ಮಾತನಾಡಿ ಹಿಮ್ಸ್ ಆಸ್ಪತ್ರೆಗೆ ಇರುವ ಹೆಸರು ಕಳೆದುಕೊಳ್ಳಬಾರದು ಅದು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿದರಲ್ಲದೆ ಇರುವ 140 ವೈದ್ಯರನ್ನು ಸಂಪೂರ್ಣ ಸದ್ಬಳಕೆ ಮಾಡಿ ಕೌನ್ಸಲಿಂಗ್ ಗಳಿಗೆ ವೈಧ್ಯಕೀಯ ವಿಧ್ಯಾರ್ಥಿಗಳನ್ನು ಬಳಸಿ ಎಂದರು.
ಜಿಲ್ಲಾಧಿಕಾರಿ ಆರ್ .ಗಿರೀಶ್ ಅವರು ಮಾತನಾಡಿ ಪ್ರತಿದಿನ 10-15 ಸಾವಿರ ಸಾವು ಸಂಭವಿಸುವುದು ಉತ್ತಮ ಲಕ್ಷಣವಲ್ಲ ಹಾಗಾಗಿ ಇಂದಿನಿಂದಲೇ ಬದಲಾವಣೆ ಪ್ರಾರಂಬಿಸಬೇಕು. ನೀಡುತ್ತಿರುವ ಸೇವೆ ಇನ್ನಷ್ಟು ಸಕಾರಾತ್ಮಕವಾಗಿ ಪರಿವರ್ತಿಸಿ ಮುಂದಿನ 15 ದಿನಗಳು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿ ಎಂದರು.
ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಆಕ್ಸಿಜನ್ ಕೊಡಬೇಕಿದೆ ನಿಗದಿತ 4 ಕೆ.ಎಲ್ ಪೂರೈಕೆಯಾದರೆ ಅದನ್ನು ಖಾಸಗಿ ನರ್ಸಿಂಗ್ ಹೋಮ್‍ಗಳ ಬಿಲ್ ಪರಿಶೀಲನೆಗೆ ಪರಿಶೋಧಕರ ತಂಡ ರಚಿಸಲಾಗಿದೆ ಎಂದರು.
ಆಮ್ಲಜನಕ ಪೂರೈಕೆ ಹೆಚ್ಚಿದೆ ಹಿಮ್ಸ್‍ನಲ್ಲಿ ಹೊಸ ಆಮ್ಲಜನಕಯುಕ್ತ ಬೆಡ್‍ಗಳ ಸೇರ್ಪಡೆ ಸಾಧ್ಯವಿಲ್ಲ ನಿಗದಿಪಡಿಸಿರುವ 15ಞಟ ಪ್ರತಿ ದಿನಕ್ಕೆ ಪೂರೈಕೆಯಾಗಬೇಕು ಇದನ್ನು ಸರಬರಾಜು ಮಾಡಲು ಟ್ಯಾಂಕರ್‍ಗಳನ್ನು ಒದಗಿಸಬೇಕು ಎಂದು ಹಿಮ್ಸ್ ನಲ್ಲಿ ಆಕ್ಸಿಜನ್ ಬ್ಯಾಕಪ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಹಿಮ್ಸ್ ನಿರ್ದೇಶಕರಾದ ಡಾ. ರವಿಕುಮಾರ್, ಡಾ. ಕೃಷ್ಣಮೂರ್ತಿ ಅವರು ಮಾತನಾಡಿ ಸುಧಾರಣೆಗೆ ಕ್ರಮವಹಿಸಲಾಗುವುದು ತಜ್ಞರುಗಳಿಗೆ ಪ್ರತಿ ಸೋಂಕಿತರ ಜವಾಬ್ದಾರಿ ವಹಿಸುವುದು ವಾರ್ಡ್‍ವಾರು ತಂಡಗಳನ್ನಾಗಿ ರಚಿಸಿ 10 ದಿನಗಳವರೆಗೆ ಆ ಸೋಂಕಿತರ ಕಾಳಜಿ ಅದೇ ವೈದ್ಯರಿಗೆ ನೀಡಲಾಗುವುದು ಆಸ್ಪತ್ರೆಯಲ್ಲಿ ಸಿ.ಸಿ.ಟಿ.ವಿ ಅಳವಡಿಸಿದ್ದು ಕಾರ್ಯನಿರ್ವಹಿಸುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾ ರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಮತ್ತಿತರರು ಹಾಜರಿದ್ದರು.