ನಾಳೆಯಿಂದ 8 ದಿನಗಳಕಾಲ ವಿಧಾನ ಮಂಡಲದ ಅಧಿವೇಶನ ನಡೆಯಲಿದ್ದು, ಕೊರೋನ ಹಿನ್ನೆಲೆಯಲ್ಲಿ ಪ್ರಥಮಬಾರಿಗೆ ಡಿಜಿಟಲ್ ತಂತ್ರಜ್ಞಾನ ಬಳಸಲಾಗುತ್ತಿದೆ. ಈ ಅಧಿವೇಶನದ ಕೆಲವು ವಿಶೇಷತೆಗಳು ಹೀಗಿವೆ
- ಇದು 15ನೇ ವಿಧಾನಸಭೆ 7ನೇ ಅಧಿವೇಶನ
- ಸೆಪ್ಟೆಂಬರ್ 21ರಿಂದ ಸೆಪ್ಟೆಂಬರ್ 30 ರವರೆಗೆ 8 ದಿನಗಳ ಕಾಲ ನಡೆಯಲಿದೆ
- 20 ಕ್ಕೂ ಹೆಚ್ಚು ಸುಗ್ರೀವಾಜ್ಞೆಗಳು ಮತ್ತು 35ಕ್ಕೂ ಹೆಚ್ಚು ಮಸೂದೆಗಳನ್ನು ಈ ಅಧಿವೇಶನದಲ್ಲಿ ಮಂಡಿಸಲಾಗುವುದು
- ಪ್ರತಿಯೊಬ್ಬ ಸದಸ್ಯರು ಕೊರೋನ ಪರೀಕ್ಷೆಗೆ ಒಳಗೆ ನೆಗೆಟಿವ್ ಇದ್ದರೆ ಮಾತ್ರ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವಕಾಶ
- ಮೊದಲ ಬಾರಿಗೆ ವಿಧಾನಮಂಡಲ ಅಧಿವೇಶನದಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಕೆ
- ಸದಸ್ಯರ ಪ್ರಶ್ನೆಗಳಿಗೆ ಸಚಿವಾಲಯ ಮತ್ತು ಅಧಿಕಾರಿಗಳಿಂದ ಬರುವ ಉತ್ತರಗಳನ್ನು ಸಿಡಿಯಲ್ಲಿ ಹಾಕಿ ಶಾಸಕರಿಗೆ ನೀಡಲು ನಿರ್ಧರಿಸಲಾಗಿದೆ.