ಹಾಸನ: ನಗರದ ಸಾಲಗಾಮೆ ರಸ್ತೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಛೇರಿ ಗೇಟಿನ ಮುಂದೆ ಜೆಡಿಎಸ್ ಮುಖಂಡರಾಧ ಅಗಿಲೆ ಯೋಗೀಶ್ ರವರು ಸಣ್ಣ ಗುಜರಿ ವ್ಯಾಪಾರಿಗಳಿಗೆ ಪ್ರತಿನಿತ್ಯ ಬಳಸುವ ಪುಡ್ ಕಿಟ್ ನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಕೊರೋನಾ ಎಂಬ ಮಹಾಮಾರಿ ಆವರಿಸಿ ಜನರು ತತ್ತರಿಸಿ ಹೋಗಿದ್ದು, ಜೊತೆಗೆ ಲಾಕ್ ಡೌನ್ ಆದೇಶ ಇರುವುದರಿಂದ ಸಣ್ಣ ಪುಟ್ಟ ವ್ಯಾಪಾರಸ್ತರಂತು ಪರದಾಡುವ ಪರಿಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಅವರ ಬಗ್ಗೆ ಗಮನವಹಿಸಿ ಸಣ್ಣ-ಪುಟ್ಟ ಗುಜರಿ ವ್ಯಾಪಾರ ನಡೆಸುವವರಿಗೆ ಪ್ರತಿದಿನ ಬಳಸುವ ಆಹಾರ ಪದಾರ್ಥವನ್ನು ಕೊಡುವ ಮೂಲಕ ಸಲ್ಪವಾದರೂ ನೆರವಾಗುವ ಕೆಲಸ ಮಾಡಲಾಗುತ್ತಿದೆ ಎಂದರು. ಯಾರಿಗಾದರೂ ಆಕ್ಸಿಜನ್ ಅವಶ್ಯಕತೆ ಏನಾದರೂ ಇದ್ದರೇ ನಾವು ಸಂಪೂರ್ಣವಾಗಿ ಸಹಾಯ ಮಾಡುವುದಾಗಿ ಇದೆ ವೇಲೆ ಭರವಸೆಯ ಮಾತನ್ನು ಹೇಳಿದರು.

ಇದೆ ವೇಳೆ ಜೆಡಿಎಸ್ ಯುವ ಮುಖಂಡರಾದ ದಸ್ತಾಗಿರ್, ಸುನೀಲ್, ವಿಶ್ವನಾಥ್, ಜಾಫರ್, ಹಬೀಬ್, ಗಿರೀಶ್ ಇತರರು ಪಾಲ್ಗೊಂಡಿದ್ದರು.