ಹಾಸನ ಕ್ಯಾನ್ಫಿನ್ ಹೋಮ್ ಲಿಮಿಟೆಡ್ ಶಾಖೆಯ ವ್ಯವಸ್ಥಾಪಕರಾದ ವಿವೇಕಾನಂದ ಶೆಟ್ಟಿ ರವರು ಸಿ.ಎಸ್.ಆರ್ ಯೋಜನೆಯಡಿ ಡಿ21ರಂದು ಆಂಬ್ಯುಲೆನ್ಸ್ ವಾಹನವನ್ನು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ||.ಬಿ.ಸಿ. ರವಿಕುಮಾರ್ರವರಿಗೆ ಹಸ್ತಾಂತರಿಸಿದರು.
ಈ ಸಂರ್ಭದಲ್ಲಿ ವಿವೇಕಾನಂದ ಶೆಟ್ಟಿ ಅವರು ಮಾತನಾಡುತ್ತಾ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಹೊಸ ಬೋಧಕ ಆಸ್ಪತ್ರೆಯ ಕಟ್ಟಡವನ್ನು 400 ಹಾಸಿಗೆಗಳ ನಿಗದಿತ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಿ ಕೊರೋನಾ ಸೋಂಕಿತ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡಿ ಜಿಲ್ಲೆಯ ಮತ್ತು ಸುತ್ತ ಮುತ್ತಲಿನ ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವುದನ್ನು ಪರಿಗಣಿಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಬಡರೋಗಿಗಳಿಗೆ ಆಂಬ್ಯುಲೆನ್ಸ್ ವಾಹನವು ಅತಿ ಅತ್ಯವಶ್ಯಕವೆಂದು ಪರಿಗಣಿಸಿ ಕ್ಯಾನ್ಫಿನ್ ಹೋಮ್ ಲಿಮಿಟೆಡ್ ಮುಖ್ಯಸ್ಥರುಗಳ ಸಹಕಾರದೊಂದಿಗೆ ಸಿ.ಎಸ್.ಆರ್ ಯೋಜನೆಯಡಿ ಹಿಮ್ಸ್ ಸಂಸ್ಥೆಗೆ ಆಂಬ್ಯುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ತಿಳಿಸಿದರು.
ಹಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ||. ಬಿ.ಸಿ. ರವಿಕುಮಾರ್ರವರು ಮಾತನಾಡುತ್ತಾ ಕ್ಯಾನ್ಫಿನ್ ಹೋಮ್ ಲಿಮಿಟೆಡ್ ಹಲವಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ತನ್ನದೆ ಆದ ಛಾಪನ್ನು ಹೊಂದಿ ಜನಸಮುದಾಯಕ್ಕೆ ಉತ್ತಮ ಸೇವೆಯನ್ನು ಒದಗಿಸುತ್ತಿರುವುದರ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ. ಕೋವಿಡ್-19 ರೋಗವು ಜಗತ್ತಿನಾದ್ಯಂತ ಹರಡಿದ್ದು ಇಂತಹ ಸಂದರ್ಭದಲ್ಲೂ ಸಹ ಉದಾರ ಮನಸ್ಸಿನಿಂದ ಪೋರ್ಸ್ ಕಂಪನಿಯ ಟಿ.ಟಿ. ಆಂಬ್ಯುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿದ್ದು, ಇದಕ್ಕೆ ಪ್ರಮುಖವಾಗಿ ಸಹಕರಿಸಿದ ಶ್ರೀ. ಮ್ಯಾನೇಜಿಂಗ್ ಡೈರೆಕ್ಟರ್ ಗಿರೀಶ್ ಕೌಸಗಿ ಮತ್ತು ಬೆಂಗಳೂರಿನ ವಿಭಾಗೀಯ ಕಛೇರಿ, ಸಿ.ಇ.ಓ. ಮತ್ತು ಡಿಪ್ಯೊಟಿ ಮ್ಯಾನೇಜಿಂಗ್ ಶ್ರೀಕಾಂತ ಭಾಂಡಿವಾಡ್ ಡೈರೆಕ್ಟರ್ ಕ್ಯಾನ್ಫಿನ್ ಹೋಮ್ ಲಿಮಿಟೆಡ್ರವರಿಗೆ ಸಂಸ್ಥೆಯ ಪರವಾಗಿ ಅಭಿನಂದನಾ ಪತ್ರವನ್ನು ಸಲ್ಲಿಸಿದರು. ಇದೇ ರೀತಿ ವಿವಿಧ ಸಂಸ್ಥೆಗಳಿಂದ 3 ಆಂಬ್ಯುಲೆನ್ಸ್ಗಳು ಹಿಮ್ಸ್ ಸಂಸ್ಥೆಗೆ ಕೊಡುಗೆಯಾಗಿ ನೀಡಿರುವುದನ್ನು ಸ್ಮರಿಸಿದರು.
ಸದರಿ ಕಾರ್ಯಕ್ರಮದಲ್ಲಿ ಡಾ|| ಕೆ.ಆರ್. ನಾಗೇಶ್, ಪ್ರಾಂಶುಪಾಲರು, ಡಾ|| ಕೃಷ್ಣಮೂರ್ತಿ. ವಿ.ಆರ್. ವೈದ್ಯಕೀಯ ಅಧೀಕ್ಷಕರು, ಡಾ|| ಈಶ್ವರ್ ಪ್ರಸಾದ್, ನಿವಾಸಿ ವೈದ್ಯಾಧಿಕಾರಿಗಳು, ಡಾ|| ಶ್ರೀಧರ್, ನಿವಾಸಿ ವೈದ್ಯಾಧಿಕಾರಿಗಳು, ಡಾ.ಪ್ರವೀಣ್, ಡಾ|| ಲಕ್ಷ್ಮೀಶ್, ಡಾ|| ಎ.ನಾಗರಾಜ್, ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ವೈದ್ಯರುಗಳು ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.