ಹಾಸನ: ಅಮೃತಕ್ಕೆ ಸಮನಾಗಿರುವ ಸ್ತನ್ಯ ಪಾನದಿಂದ ಯಾವ ಮಗುವು ವಂಚಿತವಾಗಬಾರದು ಎಂದು ಮಕ್ಕಳ ತಜ್ಞ ವೈದ್ಯರಾದ ಭವ್ಯ ಅವರು ಸಲಹೆ ನೀಡಿದರು.
ತಾಲೂಕಿನ ಮೊಸಳೆ ಹೊಸಳ್ಳಿ ಆರೋಗ್ಯ ಸಮುದಾಯ ಕೇಂದ್ರದಲ್ಲಿ ರೋಟರಿ ಮಿಡ್ ಟೌನ್ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ತನ್ಯಪಾನದ ಮಹತ್ವ ಹಾಗೂ ಅದರ ಮಾಹಿತಿಯನ್ನು ತಾಯಂದಿರಿಗೆ ಹಾಗೂ ಗರ್ಭಿಣಿಯರಿಗೆ ತಿಳಿಸುವ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಮಗುವಿಗೆ ಸ್ತನ್ಯ ಪಾನ ಕುಡಿಸಲು ತಾಯಾಂದಿರು ಎಂದು ಬೇಜವಬ್ಧಾರಿ ಅನುಸರಿಸಬಾರದು. ವೈದ್ಯರ ಸಲಹೆಯಂತೆ ಅನುಸರಿಸುವ ಮೂಲಕ ಆರೋಗ್ಯ ಹೆಚ್ಚಿಸಬಹುದು ಎಂದರು. ಸ್ತನ್ಯಪಾನದ ಮಹತ್ವ ಹಾಗೂ ಸರಿಯಾದ ವಿಧಾನವನ್ನು ತಾಯಿಯಂದಿರಿಗೆ ಇದೆ ವೇಳೆ ತಿಳಿಸಿದರು.
ರೋಟರಿ ಮಿಡ್ ಟೌನ್ ಹಾಸನ್ ಅಧ್ಯಕ್ಷರಾದ ರೋಟೇರಿಯನ್ ಸುರೇಶ್ ಮಾತನಾಡಿ, ಸ್ತನ್ಯಪಾನ ಅಮೃತಕ್ಕೆ ಸಮಾನ. ಯಾವ ಮಗು ಕೂಡ ಇದರಿಂದ ವಂಚಿತವಾಗಬಾರದು, ಸದೃಢ ಭಾರತ ನಿರ್ಮಾಣ ಮಾಡಲು ಸ್ತನ್ಯಪಾನ ಅವಶ್ಯಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ವಿದ್ಯಾಧಿಕಾರಿಗಳು ಡಾಕ್ಟರ್ ಚಂದ್ರಶೇಖರ್, ವಿದ್ಯಾಧಿಕಾರಿಗಳು, ಡಾಕ್ಟರ್ ತೇಜಸ್ವಿ, ಕಾರ್ಯದರ್ಶಿ ರೋಟರಿ ಮಿಡ್ ಟೌನ್ ಮತ್ತಿತರು ಹಾಸನ ಇವರುಗಳು ಉಪಸ್ಥಿತರಿದ್ದರು