ಹಾಸನ : ಹಿಂದೆ ಮಾತು ಕೊಟ್ಟಿರುವಂತೆ ನಮಗೆ ಸಚಿವ ಸ್ಥಾನ ಕೊಡಲಾಗಿದ್ದು, ಪಕ್ಷದಲ್ಲಿ ಯಾವುದೇ ಖಾತೆ ಕೊಟ್ಟರೂ ನನ್ನ ವಿರೋಧವಿಲ್ಲ. ನಿಬಾಯಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಹೇಳಿಕೆ ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಲಿ ಮುಖ್ಯಮಂತ್ರಿಗಳಾದ ಬಸವರಾಜು ಮೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರು ಸೇರಿದಂತೆ ಪಕ್ಷದ ಮುಖಂಡರೆಲ್ಲಾ ಸೇರಿ ಹಿಂದೆ ನಮಗೆ ಮಾತುಕೊಟ್ಟಂತೆ ಸಚಿವ ಸ್ಥಾನ ನೀಡಿದ್ದಾರೆ. ನಮಗೆ ಅನ್ಯಾಯ ಆಗಲ್ಲ ಎಂಬ ವಿಶ್ವಾಸವಿತ್ತು. ನಾವು ಯಾವುದೇ ಸ್ಥಾನ ಕೊಟ್ಟರು ಕೆಲಸ ಮಾಡಿಕೊಂಡು ಹೋಗುತ್ತೇವೆ. ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಒಳ್ಳೆಯದನ್ನು ಮಾಡುತ್ತೇನೆ ವರತು ಯಾವುದೇ ಖಾತೆ ಬೇಕೆಂದು ಪಟ್ಟು ಹಿಡಿಯುವುದಿಲ್ಲ.
ಯಾವುದೇ ಖಾತೆ ನೀಡಿದರೂ ನನ್ನ ಆತ್ಮ ಪೂರಕವಾಗಿ ಜನತೆಗೆ ಒಳ್ಳೆಯದ ಮಾಡುವ ಕೆಲಸ ಮಾಡಲಾಗುವುದು. ಬಿಜೆಪಿ ಪಕ್ಷ ಎಂದರೇ ಒಂದು ರಾಷ್ಟ್ರೀಯ ಪಕ್ಷ, ದೊಡ್ಡ ಪಕ್ಷ. ಕೇಂದ್ರ ನಾಯಕರ ಸೂಚನೆಯಂತೆ ಎಲ್ಲಾ ನಡೆಯುತ್ತಿದೆ. ಯಾರಿಗಾದರೂ ಅಸಮಾಧಾನ ಇದ್ದರೆ ಪಕ್ಷದ ಒಳಗಡೆ ಸರಿಪಡಿಸುತ್ತಾರೆ ಎಂದರು. ಬಿಜೆಪಿ ಪಕ್ಷದಲ್ಲಿ ಒಂದು ಸಾರಿ ಮಾತು ಕೊಟ್ಟರೇ ಪಕ್ಷಕ್ಕಾಗಿ ದುಡಿದ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಅಧಿಕಾರವನ್ನು ಕೊಟ್ಟಿರುವುದನ್ನು ನೋಡಿದ್ದೇವೆ. ನಮಗೆ ಎಲ್ಲೂ ಅನ್ಯಾಯವಾಗಿಲ್ಲ.
ಜಮೀರ್ ಅಹಮದ್ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ನಮಗೂ ಅದಕ್ಕೂ ಸಂಬಂಧವಿಲ್ಲ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಶ್ರೀನಿವಾಸ್ ಪ್ರಸಾದ್ ರಾಜಕಾರಣದಲ್ಲಿ ಹಿರಿಯರು. ಹಲವಾರು ವರ್ಷಗಳ ಜಾಲ ರಾಜಕಾರಣ ಮಾಡಿದ್ದು, ಅನುಭವವಿದೆ. ವಿಜಯೇಂದ್ರ ಅವರಿಗೆ ಸ್ಥಾನ ಮಾನ ನೀಡುವ ವಿಚಾರದ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಈಗ ಇರುವ ೨೯ ಜನ ಮಂತ್ರಿಗಳು ಪ್ರತಿ ಜಿಲ್ಲೆಗೂ ಹೋಗಿ ಎರಡು ಮೂರು ದಿನ ಇದ್ದು ಕೋವಿಡ್ ಸಂಬಂಧವಾಘಿ ಸಭೆಗಳು ಆಗಬೇಕು. ಮಳೆ ಬಿದ್ದು ಎಲ್ಲಿ ಹಾನಿ ಆಗಿದೆ ತಕ್ಷಣ ಭಾಗದ ಜನರಿಗೆ ಸ್ಪಂದಿಸಬೇಕು ಸೂಚನೆ ನೀಡಿದ್ದಾರೆ. ಕೇರಳದಿಂದ ಇಲ್ಲಿಗೆ ಬಂದಿರುವವರ ಪ್ರತಿಯೊಬ್ಬರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು. ಲಾಕ್ ಡೌನ್ ಸದ್ಯಕ್ಕೆ ಯಾವುದು ಇಲ್ಲ. ಈಗ ಇರುವ ನಿಯಮ ಮುಂದುವರೆಯಲಿದೆ ಎಂದು ಹೇಳಿದರು.
ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್, ಮುಖಂಡರಾದ ನಾರಾಯಣಗೌಡ ಇತರರು ಉಪಸ್ಥಿತರಿದ್ದರು.