ಜಿಲ್ಲಾಧಿಕಾರಿ ನಿವಾಸದ ಎದುರು ಪ್ರತಿಭಟನೆ

0

ಹಾಸನ: ಪ್ರತಿನಿತ್ಯ ಬಂದರೂ ಲಸಿಕೆ ಇಲ್ಲ ಎಂಬ ನಾಮಫಲಕ ನೋಡಿ ಬೇಸೆತ್ತ ನೂರಾರು ಜನರು ಶುಕ್ರವಾರದಂದು ಬೆಳಿಗ್ಗೆ ಜಿಲ್ಲಾಧಿಕಾರಿ ನಿವಾಸದ ಎದುರು ಲಸಿಕೆ ನೀಡುವಂತೆ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.

ಮೊದಲ ಮತ್ತು ಎರಡನೇ ಡೋಸ್ ಪಡೆಯಲು ಲಸಿಕಾ ಕೇಂದ್ರಕ್ಕೆ ಬಂದರೇ ಲಸಿಕೆ ಇಲ್ಲ ಎಂದು ನಾಮಫಲಕ ಕಾಣಿಸುತ್ತದೆ. ಇದನ್ನು ನೋಡಿದ ಸಾರ್ವಜನಿಕರು ವಾಪಸು ತೆರಳದೇ ಹಾಸನ ಜಿಲ್ಲೆಗೆ ಸರಿಯಾಗಿ ಲಸಿಕೆ ಬರುತ್ತಿಲ್ಲ. ವಾರದಿಂದ ಅಲೆದು ಅಲೆದೂ ಸಾಕಾಗಿದೆ. ದಿನಗಟ್ಟಲೆ ಕಾದರು ವ್ಯಾಕ್ಸಿನ್ ಸಿಗುತಿಲ್ಲ. ಎಂದು ಆರೋಪಿಸಿ ಈ ಸಮಸ್ಯೆಯನ್ನು ಹೇಳಿಕೊಳ್ಳಲು ಜಿಲ್ಲಾಧಿಕಾರಿ ನಿವಾಸದ ಮುಂದೆ ಸುಮಾರು ನೂರಾರು ಜನ ಸಾರ್ವಜನಿಕರು ಶಾಂತಿಯುವ ಪ್ರತಿಭಟನೆ ನಡೆಸಿ ತಮ್ಮ ನೋವನ್ನು ಹೇಳಿಕೊಳ್ಳಲು ಬಂದು ವಾಪಸ್ ತೆರಳಿದರು.

ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಲಸಿಕೆ ವಂಚಿತರು, ಮೊದಲ ಡೋಸ್ ಅವಧಿ ಮುಗಿದು ಮೊಬೈಲ್ ನಲ್ಲಿ ಮೆಸೆಜ್ ಬಂದೆ ೧೫ ದಿನಗಳು ಕಳೆದಿದೆ. ಆದರೇ ಲಸಿಕೆಗೆ ಬಂದರೇ ಟೋಕನ್ ಪಡೆಯಬೇಕು ಎಂದಿದ್ದಾರೆ. ಆದರೇ ಮೊದಲ ಡೊಸ್ ಪಡೆಯುವವರು ಮತ್ತು ಎರಡನೇ ಡೋಸ್ ಪಡೆಯುವ ಎಲ್ಲಾರೂ ಒಟ್ಟಿಗೆಯಾಗಿ ಸಾಲಿನಲ್ಲಿ ಬರಲು ಹೇಳಿದ ಮೇಲೆ ಇಲ್ಲಿ ಸಾಮಾಜಿಕ ಅಂತರ ಯಾವ ನಿಯಮ ಪಾಲನೆ ಆಗಲಿಲ್ಲ. ವೃದ್ಧರು, ಯುವಕರು ಮಧ್ಯ ವಯಸ್ಕರು ಎಲ್ಲಾ ಒಟ್ಟಿಗೆ ನಿಂತು ನುಗ್ಗಾಟ ಉಂಟಾಯಿತು ಎಂದರು. ಟೋಕನ್ ಪಡೆದವರಿಗೆ ಲಸಿಕೆ ಯಾವಾಗ ಸಿಗುತ್ತದೆ, ಎಷ್ಟು ಲಸಿಕೆ ಲಭ್ಯವಿದೆ ಎಂಬುದರ ನಿಖರವಾದ ಮಾಹಿತಿ ನಮಗೆ ಗೊತ್ತಾಗಬೇಕು. ಲಸಿಕೆಗಾಗಿ ಬಂದು ವಾಪಸ್ ಹೋಗಿ ನಮಗೆ ಸಾಕಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

LEAVE A REPLY

Please enter your comment!
Please enter your name here