ರಸ್ತೆ ಕಾಮಗಾರಿಗಾಗಿ ಶಿರಾಡಿಘಾಟ್‍ನಲ್ಲಿ ವಾಹನ ಸಂಚಾರ ನಿರ್ಬಂಧ ಸಲಹೆ : ಹಾಸನ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಭೆಯ ತೀರ್ಮಾನ ಇಂತಿದೆ

0

ಹಾಸನ / ಮಂಗಳೂರು : ರಸ್ತೆ ಕಾಮಗಾರಿಗಾಗಿ ಶಿರಾಡಿಘಾಟ್‍ನಲ್ಲಿ ವಾಹನ ಸಂಚಾರ ನಿರ್ಬಂಧ ಸಲಹೆ : ಹಾಸನ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಭೆಯ ತೀರ್ಮಾನ ಇಂತಿದೆ

ಸಕಲೇಶಪುರ ತಾಲ್ಲೂಕು ಆನೆಮಹಲ್‍ನಿಂದ ಮಾರನಹಳ್ಳಿವರೆಗೆ ರಸ್ತೆ ಕಾಮಗಾರಿಗಾಗಿ ಶಿರಾಡಿಘಾಟ್‍ನಲ್ಲಿ ವಾಹನ ಸಂಚಾರ ನಿರ್ಬಂಧ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿರುವ ಮನವಿಯ ಕುರಿತು ಚರ್ಚಿಸಲು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ಹಾಗೂ ವಿಡಿಯೊ ಸಂವಾದ :

ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಹಾಸನ ಜಿಲ್ಲಾಧಿಕಾರಿ ಆರ್ ಗಿರೀಶ್ , ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ , ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ HK ಕುಮಾರ ಸ್ವಾಮಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ಕೆಳಕಂಡಂತಿದೆ

 ” ಹಲವು ವರ್ಷಗಳಾದರೂ ಕಾಮಗಾರಿ ಕುಂಟುತ್ತಾ ಸಾಗಿದೆ. ಬಂದರಿನಿಂದ ಬರುವ ಔಷಧಿ, ಸಾಮಗ್ರಿ ಸರಕುಗಳು ಹಾಸನ ಬೆಂಗಳೂರು ತಲುಪಲು ಇದು ಮುಖ್ಯ ರಸ್ತೆ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಹಾಸನದಿಂದ ಸಕಲೇಶಪುರದವರೆಗಿನ ಒಂದು ಬದಿಯ (ಎರಡು ಲೈನ್) ರಸ್ತೆ ಕಾಮಗಾರಿ ಪೂರ್ಣ ಮುಕ್ತಾಯಗೊಳಿಸಿದರೆ ಮಾತ್ರ ನಂತರದ ಕಾಮಗಾರಿಗೆ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಮಾರ್ಗ ಮುಚ್ಚುವ ಬಗ್ಗೆ ಪರಿಶೀಲನೆ ನಡೆಸಬಹುದಾಗಿದೆ ” – ಪ್ರಜ್ವಲ್ ರೇವಣ್ಣ (ಹಾಸನ ಲೋಕಸಭಾ ಸದಸ್ಯ ಅಭಿಪ್ರಾಯ)

” ಗುತ್ತಿಗೆದಾರರು ಈವರೆಗೆ ನಡೆಸಿರುವ ಕಾಮಗಾರಿ ಗಮನಿಸಿದರೆ ಉಳಿದ ಕಾಮಗಾರಿ ಮುಗಿಸಲು ವರ್ಷಗಳೇ ಬೇಕಾಗಬಹುದು. ಹಾಗಾಗಿ ಮೊದಲು ಕೆಲಸ ಮಾಡಿ ಭರವಸೆ ಮೂಡಿಸಿದರೆ ಮಾತ್ರ ದೋಣಿಗಾಲ್, ಮಾರನಹಳ್ಳಿ ರಸ್ತೆ ತಾತ್ಕಾಲಿಕವಾಗಿ ಮುಚ್ಚುವ ಬಗ್ಗೆ ಪರಿಶೀಲಿಸಲಾಗುವುದು ” -HK ಕುಮಾರಸ್ವಾಮಿ (ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರ ಅಭಿಪ್ರಾಯ)

” ಈಗಾಗಲೇ ಸಾಕಷ್ಟು ಅವಕಾಶಗಳನ್ನು ನೀಡಲಾಗಿತ್ತು ಆದರೆ ನಿರೀಕ್ಷಿತ ಪ್ರಗತಿ ಈವರೆಗೂ ಕಾಣಲೇ ಇಲ್ಲ. ಸಕಲೇಶಪುರ ಹಾಸನ ಮಾರ್ಗ ಒಂದು ಬದಿಯಾದರೂ ಮುಕ್ತಾಯ ಗೊಳಿಸಿ ಮುಂದಿನ ಉದ್ದೇಶಿತ ಕಾಮಗಾರಿಯ ವಾರವಾರು ಪ್ರಗತಿ ಯೋಜನೆ ಅದಕ್ಕೆ ಬಳಸುವ ಕೆಲಸಗಾರರು, ಯಂತ್ರೋಪಕರಣಗಳು, ಸಾಮಗ್ರಿಗಳ ದಾಸ್ತಾನು ಲಭ್ಯತೆಯ ಯೋಜನ ವರದಿ ನಿಖರವಾಗಿ ನೀಡಬೇಕು ” -(ಹಾಸನ ಜಿಲ್ಲಾಧಿಕಾರಿ ಆರ್ ಗಿರೀಶ್ ಅಭಿಪ್ರಾಯ)

” ಚಾರ್ಮಾಡಿ, ಸಂಪಾಜೆ, ಬಿಸಿಲೆ ಘಾಟ್‍ಗಳಲ್ಲಿ ಬೃಹತ್ ಗಾತ್ರದ ವಾಹನ ಸಂಚಾರ ಸಾಧ್ಯವಿಲ್ಲದ ಕಾರಣ ಬಂದರು ನಗರಿ ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಶಿರಾಡಿಘಾಟ್ ಉಳಿದಿರುವ ಏಕೈಕ ಮಾರ್ಗವಾಗಿದೆ. ಇದನ್ನು ಸುಧೀರ್ಘ ಕಾಲ ಮುಚ್ಚಿದರೆ ಜನಜೀವನ, ಕೈಗಾರಿಕೆ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಕಾಮಗಾರಿ ಪ್ರಗತಿ ಕೂಡಾ ಆಶಾದಾಯಕವಾಗಿಲ್ಲದ ಕಾರಣ ರಸ್ತೆ ಮುಚ್ಚುವ ಬಗ್ಗೆ ಪರಿಶೀಲನೆ ನಡೆಸುವುದು ಅಗತ್ಯ ” -ರಾಜನ್ (ದಕ್ಷಿಣ ಕನ್ನಡ ಜಿಲ್ಲಾಧಿಕಾರಿ)

” ಕಾಮಗಾರಿಗೆ ಹೆಚ್ಚಿನ ಕಾರ್ಮಿಕರು ಯಂತ್ರೋಪಕರಣಗಳನ್ನು ಬಳಸಿ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕೆಲ ತಿಂಗಳು ಶಿರಾಡಿಘಾಟ್ ರಸ್ತೆ ಬಂದ್ ಮಾಡಿ ಸುಗಮ ಕಾಮಗಾರಿಗೆ ಅವಕಾಶ ಒದಗಿಸಬೇಕು ” -ಜಾನ್ ಬಾಜ್ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್‌)

ಅಂತಿಮವಾಗಿ ಈ ಸಭೆಯ ತೀರ್ಮಾನವಾಗಿ : ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ನಡೆಸಲು ಶಿರಾಡಿ ಘಾಟ್ ಬಂದ್ ಮಾಡುವ ಕುರಿತಂತೆ ಜ. 20ರಂದು ಜನಪ್ರತಿನಿಧಿಗಳು, ಹಾಸನ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗುದ್ದು ಜ.20 ರಂದು ನಿಮ್ಮ ಹಾಸನ್ ನ್ಯೂಸ್ ನಲ್ಲಿ ಅಂತಿಮ ತೀರ್ಮಾನ ಪ್ರಕಟಗೊಳ್ಳಲಿದೆ ವೀಕ್ಷಿಸಿ

ಧನ್ಯವಾದಗಳು

LEAVE A REPLY

Please enter your comment!
Please enter your name here