ನ್ಯಾಷನಲ್ ಎಸ್ಸಿ- ಎಸ್ಟಿ ಹಬ್, ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಸನ, ಪವರ್ ಗ್ರಿಡ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ವತಿಯಿಂದ ಹಾಸನ ಜಿಲ್ಲಾ ಪಂಚಾಯ್ತಿಯಲ್ಲಿ ಎಸ್ಸಿ ಎಸ್ಟಿ
ವಿಶೇಷ ಮಾರಾಟಗಾರರ ಅಭಿವೃದ್ಧಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾರ್ಯಾಗಾರವನ್ನು ಎನ್ ಎಸ್ ಎಸ್ ಹೆಚ್, ಎಸ್ಸಿಎಸ್ಟಿ ಹಬ್ ಬ್ರಾಂಚ್ ಮುಖ್ಯಸ್ಥರಾದ ಕೋಕಿಲಾ ರವರು ಉದ್ಘಾಟಿಸಿದರು.
ಕಾರ್ಯಾಗಾರದಲ್ಲಿ ಉದ್ಯಮಿಗಳು, ಗುತ್ತಿಗೆದಾರರು ವಿವಿಧ ಇಲಾಖೆಗಳ ಸಿಗುವ ಸೌಲಭ್ಯಗಳ ಸದ್ಬಳಕೆ ಹಾಗೂ ಉದ್ಯಮ ಅಭಿವೃದ್ಧಿಪಡಿಸಿಕೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಅಗತ್ಯ ನೆರವು ಪಡೆಯುವಂತೆ ಸೂಚಿಸಿದರು.
ಎನ್ ಎಸ್ ಎಸ್ ಹೆಚ್,ಎಸ್ಸಿ ಎಸ್ಟಿ ಹಬ್ ಬ್ರಾಂಚ್ ಹೆಡ್ ಕೋಕಿಲಾ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರಾದ ಸಿದ್ದರಾಜು, ಪವರ್ ಗ್ರೀಡ್ ಸೀನಿಯರ್ ಜನರಲ್ ಮ್ಯಾನೇಜರ್ ಶಂಕರಯ್ಯ ,ಕೆನರಾ ಬ್ಯಾಂಕ್ ಎಲ್ ಡಿಎಂ ಗಾಯತ್ರಿ ದೇವಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಪಿ ಎಸ್ಟಿ ಎಂಟರ್ಪೈನರ್ ಅಧ್ಯಕ್ಷ ಪ್ರಸನ್ನ, ಗೌರವಾಧ್ಯಕ್ಷ ಮಹಾಂತಪ್ಪ, ಎಸ್ಸಿ ಎಸ್ಟಿ ಗುತ್ತಿಗೆದಾರರ ಅಸೋಸಿಯೇಷನ್ ಅಧ್ಯಕ್ಷ ರಾಮಚಂದ್ರ ಹಾಗೂ ನೂರಾರು ಉದ್ಯಮಿಗಳು,ಗುತ್ತಿಗೆದಾರರು ಭಾಗವಹಿಸಿದ್ದರು.