ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದ ಆಶ್ರಯದಲ್ಲಿ ವಿಜಯನಗರದ ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಇಲ್ಲಿಗೆ ಸಮೀಪದ ರಾಜಾಪುರ ಬೆಟ್ಟದಲ್ಲಿ ಭಾನುವಾರ ಸಂಜೆ ಕೊನೆಗೊಂಡ 4×4 ಆಫ್ ರೋಡ್ ಚಾಲೆಂಜ್ ಮೋಟಾರ್ ಸ್ಫೋರ್ಟ್ಸ್‌ನ ಪ್ರೊ ಮಾಡಿಫೈಡ್ ಕ್ಲಾಸ್ ವಿಭಾಗದಲ್ಲಿ ಬಿಜೇಂದರ್ ಸಿಂಗ್–ಗಜೇಂದರ್ ಸಿಂಗ್ 644 ಅಂಕಗಳೊಂದಿಗೆ ಪ್ರಶಸ್ತಿ ಗಳಿಸಿದ್ದಾರೆ. ಸ್ಪರ್ಧೆಯಲ್ಲಿ 64 ವಾಹನಗಳು ಪಾಲ್ಗೊಂಡಿದ್ದವು. ಭಾನುವಾರ ರಾತ್ರಿ ಪ್ರಶಸ್ತಿ ಪ್ರದಾನ ನಡೆದಿದ್ದು, ಪ್ರತಿ ವಿಭಾಗದಲ್ಲಿ ವಿಜೇತರಿಗೆ ₹75 ಸಾವಿರ ಸಹಿತ ಒಟ್ಟು ₹5.50 ಲಕ್ಷ ಬಹುಮಾನ ವಿತರಿಸಲಾಯಿತು.
ಡೀಸೆಲ್ ಕ್ಲಾಸ್: ಪೂಣಚ್ಚ ಪಿ.ಬಿ–ಗೌರವ್ ಅಯ್ಯಪ್ಪ (725 ಮೊದಲ ಸ್ಥಾನ ), ವಿನಯ್ ಕುಮಾರ್ ಎಚ್.ಸಿ.–ವಿಕ್ರಮ್ ಗೌಡ (706 ಅಂಕ ಎರಡನೇ ಸ್ಥಾನ), ವೈಭವ್ ರೆಡ್ಡಿ–ಅನುರಾಗ್ ಅಂಗೋಲ್ ಹಾಗೂ ಅಪ್ಪನ್ನ ಬಿ.ಕೆ.–ಶಮಂತ್ (689 ಮೂರನೇ ಸ್ಥಾನ ),
ಫಲಿತಾಂಶ: ಪ್ರೊ ಮಾಡಿಫೈಡ್ ಕ್ಲಾಸ್: ಬಿಜೇಂದರ್ ಸಿಂಗ್–ಗಜೇಂದರ್ ಸಿಂಗ್ (644), ಎಂ.ರಾಮಬಾಬು–ಟಿ.ಕುಮಾರಸ್ವಾಮಿ (622), ಚೇತನ್ ಚೆಂಗಪ್ಪ–ಮಯೂರ್ ಬೋಪಯ್ಯ (580).
ಮಾಡಿಫೈಡ್ ಕ್ಲಾಸ್: ಮೊಹಮ್ಮದ್ ಫಹದ್–ರಾಜೀವ್ ಲಾಲ್ (640), ಸಿರಿಲ್ ಡಿಮೆಲ್ಲೊ–ಸುಭಾಶ್ ಉತೇಕರ್ (614), ಮನೋಜ್ ಬಿರಾದಾರ್–ಸಚಿನ್ ಗಡಶೆಟ್ಟಿ (592).
ಮಾಡಿಫೈಡ್ ಪೆಟ್ರೋಲ್ ಕ್ಲಾಸ್: ಸರ್ಜೆರಾವ್ ಕಾವಡೆ–ವೈಭವ್ ಶೆಲುಕರ್ (565), ಉಮೇಶ್ ರಾಣೆ–ಅರಿಯ ಲಾಡ್ (510), ಮಹೇಶ್ ಬಿರಮನೆ–ಕಾಳಿದಾಸ್ ದೋಣಗೆರೆ (454).
ಸ್ಟಾಕ್ ಪೆಟ್ರೋಲ್: ಕೃಷ್ಣಕಾಂತ್ ಎಸ್.ಸೈಂಧವ್–ಅಶ್ವಿನ್ ಶಿಂದೆ (750), ಪ್ರದೀಪ್–ಸಂದೀಪ್ (715), ಪ್ಲಬನ್ ಪಟ್ನಾಯಕ್–ಶೆಲ್ಟನ್ ಗೋಮ್ಸ್ (703).
ಡೀಸೆಲ್ ಕ್ಲಾಸ್: ಪೂಣಚ್ಚ ಪಿ.ಬಿ–ಗೌರವ್ ಅಯ್ಯಪ್ಪ (725), ವಿನಯ್ ಕುಮಾರ್ ಎಚ್.ಸಿ.–ವಿಕ್ರಮ್ ಗೌಡ (706), ವೈಭವ್ ರೆಡ್ಡಿ–ಅನುರಾಗ್ ಅಂಗೋಲ್ ಹಾಗೂ ಅಪ್ಪನ್ನ ಬಿ.ಕೆ.–ಶಮಂತ್ (689) (ಟೈ).
ಥಾರ್ ಕ್ಲಾಸ್: ನವೀನ್ ಪುಲಿಗಿಲ್ಲ–ಗಿರಿ ಬಾಬು (759), ವಿನಯ್ ಎಚ್.–ಸಚಿನ್ ಆರ್. (678), ಆದರ್ಶ್–ಚಂದ್ರಮೌಳಿ (672).
ಲೇಡಿಸ್ ಸ್ಟಾಕ್: ಪ್ರೇರಣಾ ಭಲ್ಲಾ–ರವಿ ಭಲ್ಲಾ (720). ಲೇಡಿಸ್ ಮಾಡಿಫೈಡ್: ಅನ್ವಿತಾ ಅನಿಕೇತ್– ಅನಿಲೆಟ್(160)